“ನಾನು ಪೊಲೀಸ್ ಕಮೀಷನರ್ ಮಗ” ಎಂದು ದರ್ಪ ತೋರಿದ ಯುವಕನಿಗೆ ಪರಿಕ್ಕರ್ ಮೆಲ್ಲನೆ ಹೇಳಿದ್ದು ಏನು ಗೊತ್ತೆ?

ಮಾಜಿ ಕೇಂದ್ರ ಸಚಿವ ಹಾಗೂ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ತಮ್ಮ ಸರಳತೆಯ ಮೂಲಕವೇ ಹೆಸರಾಗಿದ್ದವರು. ಅವರು ಗೋವಾ ಸಿಎಂ ಆಗಿದ್ದಾಗ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಈ ವೇಳೆ ಐಷಾರಾಮಿ ಕಾರಿನಲ್ಲಿ ಬಂದಿದ್ದ ಓರ್ವ ಯುವಕ ಅವರ ಸ್ಕೂಟಿಗೆ ಗುದ್ದಿ ತಾನು ಗೋವಾ ಪೊಲೀಸ್ ಕಮಿಷನರ್ ಮಗ ಎಂದು ಧಿಮಾಕಿನಿಂದ ಹೇಳಿದ್ದ.

ಹೌದು ಹಿಂದೊಮ್ಮೆ ಪರಿಕ್ಕರ್ ಗೋವಾ ಸಿ.ಎಂ ಆಗಿದ್ದಾಗ ಸ್ಕೂಟಿಯಲ್ಲಿ ತೆರಳಿದ್ದ ಮನೋಹರ್ ಪರಿಕ್ಕರ್ ಅವರು ಸಣ್ಣ ಅಪಘಾತಕ್ಕೀಡಾಗಿದ್ದರು. ಈ ವೇಳೆ ಪರಿಕ್ಕರ್ ಸ್ಕೂಟಿಗೆ ಗುದ್ದಿದ ಐಷಾರಾಮಿ ಕಾರಿನಲ್ಲಿದ್ದ ಯುವಕ ಕೂಡಲೇ ಕೆಳಗೆ ಇಳಿದು ಬಂದು ಪರಿಕ್ಕರ್ ಅವರೊಂದಿಗೆ ವಾಗ್ವಾದಕ್ಕಿಳಿದಿದ್ದು, ಈ ವೇಳೆ ಧಿಮಾಕಿನಿಂದ ತಾನು ಯಾರು ಎಂದು ನಿನಗೆ ಗೊತ್ತೆ ನಾನು ಗೋವಾ ಪೊಲೀಸ್ ಕಮಿಷನರ್ ಅವರ ಮಗ ಎಂದು ಧಿಮಾಕಿನಿಂದ ಹೇಳಿದ್ದ. ಈ ವೇಳೆ ಯುವಕನ ಧಿಮಾಕಿಗೆ ಅಷ್ಟೇ ಸರಳವಾಗಿ ಉತ್ತರಿಸಿದ್ದ ಪರಿಕ್ಕರ್ ಅವರು ನಾನು ಯಾರು ಗೊತ್ತಾ ಗೋವಾ ಸಿ.ಎಂ ಎಂದು ಸಣ್ಣ ಧ್ವನಿಯಲ್ಲಿ ಹೇಳಿದ್ದರು. ಈ ವೇಳೆ ದಿಮಾಕು ತೋರಿದ್ದ ಯುವಕ ಪದರು ಗುಟ್ಟಿ ಹೋಗಿದ್ದ .

ಇಷ್ಟೇ ಅಲ್ಲ ಪರಿಕ್ಕರ್ ಅವರ ಜೀವನದಲ್ಲಿ ಇಂತಹ ಅದೆಷ್ಟೋ ಘಟನೆಗಳು ಘಟಿಸಿವೆ. ಪರಿಕ್ಕರ್ ಅವರಿಗೆ ಸ್ಕೂಟಿ ಚಲಾಯಿಸುವುದು ಎಂದರೆ ಬಹಳ ಇಷ್ಟವಂತೆ ಆದರೆ ಇದರಿಂದ ಸ್ಕೂಟಿ ಚಲಾಯಿಸುವುದನ್ನು ಅವರು ತೊರೆದಿದ್ದರು. ಕಾರಣ ಅವರ ಕೆಲಸ..

ಹೌದು.. ಈ ಹಿಂದೆ ಕನಕೋನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು ನಾನು ಸ್ಕೂಟಿ ಡ್ರೈವಿಂಗ್ ಬಿಟ್ಟಿದ್ದೇನೆ. ನನ್ನ ತಲೆ ತುಂಬಾ ನಾನು ಮಾಡಬೇಕಾದ ಕೆಲಸಗಳೇ ತುಂಬಿರುತ್ತವೆ. ನಾನು ಗಾಡಿ ಚಲಾಯಿಸುವಾಗಲೂ ಆ ಕೆಲಸಗಳ ಬಗ್ಗೆಯೇ ಯೋಚಿಸುತ್ತಿರುತ್ತೇನೆ. ಹೀಗಾಗಿ ನನ್ನ ಕೆಲಸದ ಮೇಲಿನ ಗಮನದಿಂದ ನಾನು ಗಾಡಿ ಚಲಾಯಿಸಿ ನನಗೆ ಮತ್ತೊಬ್ಬರಿಗೂ ಹಾನಿ ಮಾಡುವುದು ಇಷ್ಟವಿಲ್ಲ. ಹೀಗಾಗಿ ಬೈಕ್ ಚಲಾಯಿಸುವುದನ್ನು ಬಿಟ್ಟಿದ್ದೇನೆ ಎಂದು ಹೇಳಿಕೊಂಡಿದ್ದರು.

Leave a Reply

Your email address will not be published. Required fields are marked *