ತನ್ನ ಮಗನನ್ನು ಶಾಲೆಗೆ ಡ್ರಾಪ್ ಮಾಡಿದ…ಆದರೆ ಆತನ ಮೇಲೇ ಕಾರು ಹರಿಸಿಬಿಟ್ಟ

ಇದೊಂದು ವಿಚಿತ್ರ ಹಾಗೂ ಮನ ಕುಲುಕುವ ಘಟನೆ.
ಆತ ತನ್ನ ಮಗುವನ್ನು ಶಾಲೆಗೆ ಡ್ರಾಪ್ ಮಾಡಲು ಕಾರಲ್ಲಿ ಶಾಲೆಗೆ ಬಂದ.ಡ್ರಾಪ್ ಸಹ ಮಾಡಿದ.ಆದರೆ….
ಆತನ ಮೊಬೈಲ್ ಹುಚ್ಚು ತನ್ನ ಅದೇ ಮಗುವಿನ ಪ್ರಾಣಕ್ಕೆ ಸಂಚಕಾರ ತಂದಿದೆ.
ಡ್ರಾಪ್ ಬಳಿಕ ಮಗು ಶಾಲೆ ಒಳಗೆ ಹೋಯಿತೇ ಅಥವಾ ಎತ್ತ ಕಡೆ ಹೋಯ್ತು ಎಂಬುದರ ಪರಿವೇ ಇಲ್ಲ ಈ ಬೇಜಾವಾಬ್ದಾರಿ ತಂದೆಗೆ.
ಕಾರಿಂದ ಇಳಿದ ಮಗು ಅದೇ ಕಾರಿನ ಮುಂದಿನಿಂದ ಶಾಲೆಗೆ ತೆರಳುವ ಮಾರ್ಗ ವೋ ಅಥವಾ ತಂದೆಗೆ bye ಹೇಳಲೋ ಬರುತಿತೋ ಗೊತ್ತಿಲ್ಲ.ಆದರೆ ಕಾರು ಚಾಲನೆ ಮಾಡುತ್ತಿದ್ದ ತಂದೆಗೆ ಮೊಬೈಲ್ ಹುಚ್ಚು. ಆದೇ ಮಗುವಿನ ಮೇಲೆ ಕಾರು ಹರಿದರೂ ಆತನಿಗೆ ಅದು ತಿಳಿಯಲಿಲ್ಲ.
ವಿಡಿಯೋ ನೋಡಿ…ಕಾರು ಹರಿದ ಬಳಿಕವೂ ಏನಾಯಿತು ಎಂಬುದರ ಅರಿವೂ ಇಲ್ಲ.

ಆತ ಹಾಗೇ ಹೋಗಿಬಿಟ್ಟ ಎಂಬುದು ದೃಶ್ಯ ದಿಂದ ಗೊತ್ತಾಗುತ್ತೆ.
ಈ ವಿಡಿಯೋ ಮೊಬೈಲ್ ಬಳಸುತ್ತಲೇ ವಾಹನ ಚಾಲನೆ ಮಾಡುವ ಎಲ್ಲರಿಗೂ ಎಚ್ಚರಿಕೆ ಘಂಟೆ ಆಗಲಿ.
ಎಲ್ಲರಿಗೂ ತಲುಪಿಸಿ ಈ ವೀಡಿಯೋವನ್ನು.
ಮಕ್ಕಳನ್ನು ಡ್ರಾಪ್ ಮಾಡಲು ಬರುವ ಎಲ್ಲರೂ ಶಾಲಾ ಆವರಣ ದ ಒಳಗೆ ಮಕ್ಕಳನ್ನು ಬಿಟ್ಟು ಹೋಗುವುದು ಕಡ್ಡಾಯ ಆಗಲಿ ಕೂಡ.

Leave a Reply

Your email address will not be published. Required fields are marked *