ಕ್ವಾರಂಟೀನ್ ನಲ್ಲಿದ್ದರೂ ಒಂದುಗೂಡಿ ನಮಾಜ್…!! ಮೂರ್ಖತನ, ಉದ್ಘಟತನ ಪರಮಾವಧಿ

ಹೈದರಾಬಾದ್- ಏ. 2:ಮೂರ್ಖತನ ಹಾಗೂ ಉಗ್ಘಟತನದ ಪರಮಾವಧಿ ಎಂದರೆ ಇದೇ ಅಲ್ಲವೇ?
ಸರ್ಕಾರ ಕೊರೋನಾ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಠಿಣ ನಿರ್ದೇಶನ ನೀಡಿದ್ದರೂ ಈ ಮೂರ್ಖರು ಏನು ಮಾಡಿದ್ದಾರೆ ಎಂಬುದನ್ನು ನೋಡಿ.

ಈ ಮಹಾಮಾರಿಗೆ ದೇಶಾದ್ಯಂತ ಇದುವರೆಗೆ ಸುಮಾರು 50 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದರೆ ಸೋಂಕಿತರ ಸಂಖ್ಯೆ 2000ಕ್ಕೆ ತಲುಪಿದೆ. ದೇಶಾದ್ಯಂತ ಹಲವು ಜನರಿಗೆ ಕೊರೋನಾ ವೈರಸ್ ಸೋಂಕಿನ ಹಿನ್ನೆಲೆ ಕ್ವಾರಂಟೀನ್ ಗೆ ಕಳುಹಿಸಲಾಗಿದೆ. ಇಂತಹುದರಲ್ಲಿ ತೆಲಂಗಾಣದಲ್ಲಿ ಕ್ವಾರಂಟೀನ್ ಗೆ ಕಳುಹಿಸಲಾಗಿರುವ ಕೆಲವರು ಕ್ವಾರಂಟೀನ್ ನಲ್ಲಿಯೂ ಕೂಡ ಅಕ್ಕಪಕ್ಕದಲ್ಲಿ ನಿಂತು ನಮಾಜ್ ಪಠಿಸಿದ್ದಾರೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರ್ಕಾರ ಕಠಿಣ ನಿರ್ದೇಶನಗಳನ್ನು ನೀಡಿದೆ.
ಒಂದು ವೇಳೆ ಯಾವುದೇ ಕೊರೋನಾ ವೈರಸ್ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿ ಬಂದರೆ ಅಥವಾ ಯಾತ್ರೆ ಕೈಗೊಂಡರೆ ಅಂತಹ ಜನರನ್ನು ಐಸೋಲೇಟ್ ಮಾಡಲು ನಿರ್ದೇಶನಗಳನ್ನು ನೀಡಲಾಗಿದೆ. ಇಲ್ಲಿನ ಗಾಂಧಿ ಆಸ್ಪತ್ರೆಯಲ್ಲಿಯೂ ಕೂಡ ಹಲವು ಜನರನ್ನು ಕ್ವಾರಂಟೀನ್ ಗೆ ಕಳುಹಿಸಲಾಗಿದೆ. ಕ್ವಾರಂಟೀನ್ ರೂಮ್ ನಲ್ಲಿ ಕುಳಿತು ಮಾತನಾಡುವ ಅಥವಾ ಭೇಟಿಯಾಗುವ ಅವಕಾಶ ಇರುವುದಿಲ್ಲ. ಕ್ವಾರಂಟೀನ್ ಅವಧಿ ಸುಮಾರು 14 ದಿನಗಳ ಅವಧಿಯದ್ದಾಗಿರುತ್ತದೆ.

ಈ ಮಧ್ಯಯೇ ಆಸ್ಪತ್ರೆಯ ಕ್ವಾರಂಟೀನ್ ನಲ್ಲಿರುವ ಜನರು ಒಂದುಗೂಡಿ ನಮಾಜ್ ಪಠಿಸಲು ಆರಂಭಿಸಿದ್ದಾರೆ. ಈ ನಮಾಜ್ ವೇಳೆ ಕ್ಲಿಕ್ಕಿಸಲಾಗಿರುವ ಭಾವಚಿತ್ರಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಲಾರಂಬಿಸಿದೆ. ಅಕ್ಕ – ಪಕ್ಕ ನಿಂತು ನಮಾಜ್ ಮಾಡುತ್ತಿರುವ ಇವರ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಮುನ್ನೆಚ್ಚರಿಕೆ ನೀಡಿದರೂ ಕೂಡ ಇವರು ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಇವರು ಪರಸ್ಪರ ಹತ್ತಿರದಲ್ಲಿ ನಿಂತು ನಮಾಜ್ ಓದಿದ್ದಾರೆ.

ಸಧ್ಯ ವಿಶ್ವಾದ್ಯಂತ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 10 ಲಕ್ಷದ ಗಡಿ ತಲುಪಿದೆ. ಅತ್ತ ಇನ್ನೊಂದೆಡೆ ಈ ಮಾರಕ ಕಾಯಿಲೆಗೆ ವಿಶ್ವಾದ್ಯಾಂತ ಮರಣ ಹೊಂದಿದವರ ಸಂಖ್ಯೆ 50 ಸಾವಿರಕ್ಕೆ ತಲುಪಿದೆ. ಅಮೇರಿಕಾ, ಫ್ರಾನ್ಸ್, ಇಟಲಿ, ಸ್ಪೇನ್ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಕೊರೋನಾ ವೈರಸ್ ತನ್ನ ಆತಂಕ ಮುಂದುವರೆಸಿದೆ.

Leave a Reply

Your email address will not be published. Required fields are marked *