ಕೋವಿಡ್ – 19:ಗುಜರಾತ್ ವಿಜ್ಞಾನಿಗಳಿಂದ ಮಹತ್ವದ ಪ್ರಗತಿ

ಅಹಮದಾಬಾದ್, ಏ. 16: ಭಾರತೀಯರಿಗೆ ಸಮಾಧಾನ ಹಾಗೂ ಸಂತಸ ನೀಡುವ ಮಹತ್ವದ ಸಂಶೋಧನೆಯಲ್ಲಿ ಗುಜರಾತ್ ನ ಜಿಬಿಆರ್ ಸಿ ವಿಜ್ಞಾನಿಗಳು ಪ್ರಗತಿ ಸಾಧಿಸಿದ್ದಾರೆ.

ಕೊರೋನಾ ವೈರಸ್ ಗೆ ಮದ್ದು ಕಂಡು ಹಿಡಿಯುವ ನಿಟ್ಟಿನಲ್ಲಿ ಗುಜರಾತಿನ ಈ ವಿಜ್ಞಾನಿಗಳು ಸಾಧಿಸಿರುವ ಮಹತ್ವತೆಯನ್ನು ಗುಜರಾತ್ ಮುಖ್ಯಮಂತ್ರಿ ಕಚೇರಿ ಸ್ಪಷ್ಟ ಪಡಿಸಿದ್ದು ಟ್ವೀಟ್ ಮೂಲಕ ವಿಜ್ಞಾನಿಗಳ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದೆ.

ಕೋವಿಡ್ – 19 ಗೆ ಕಾರಣವಾಗಿರುವ ವೈರಾಣುವಿಗೆ ಜಿನೋಮ್ ಸೀಕ್ವೆನ್ಸ್ ನ್ನು ಡಿಕೋಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜೀನೋಮ್ ಎಂದರೆ ವಂಶವಾಹಿಗಳ ಗುಚ್ಛ. ಇದು ವೈರಾಣುಗಳ ನಿರ್ದಿಷ್ಟ ಗುಣಲಕ್ಷಣಗಳನ್ನು ನಿರ್ಧರಿಸುತ್ತದೆ. ಜೀನೋಮ್ ಸೀಕ್ವೇನ್ಸ್ ಅಥವಾ ವಂಶವಾಹಿಳ ಗುಚ್ಛದ ಅನುಕ್ರಮವನ್ನು ಡಿಕೋಡ್ ಮಾಡುವುದರಿಂದ ವೈರಾಣುವಿನ ಮೂಲವನ್ನು ತಿಳಿದು ಸೂಕ್ತ ಚಿಕಿತ್ಸಾ ವಿಧಾನಕ್ಕೆ ಸಹಕಾರಿಯಾಗಿದೆ.

ಮೊದಲ ಬಾರಿಗೆ ಭಾರತದಲ್ಲಿ ಗುಜರಾತ್ ನ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರ (ಜಿಬಿಆರ್ ಸಿ) ದ ವಿಜ್ಞಾನಿಗಳು ಜೀನೋಮ್ ಸೀಕ್ವೇನ್ಸ್ ಡಿಕೋಡ್ ಮಾಡುವಲ್ಲಿ ಯಶಸ್ವಿಯಾಗಿದ್ದು, ಗುಜರಾತ್ ಮುಖ್ಯಮಂತ್ರಿ ಕಚೇರಿ ಸ್ಪಷ್ಟ ಪಡಿಸಿದ್ದು ಟ್ವೀಟ್ ಮೂಲಕ ವಿಜ್ಞಾನಿಗಳ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದೆ.

ಜೀನೋಮ್‌ ಸೀಕ್ವೇನ್ಸ್ ವೈರಸ್ ನ‌ ಮೂಲೊ, ಔಷಧಗಳ ಟಾರ್ಗೆಟ್‌ ಹಾಗೂ ಚುಚ್ಚುಮದ್ದುಗಳನ್ನು ನೀಡುವುದರಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಮುಖ್ಯಮಂತ್ರಿ ಗಳ ಕಚೇರಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಈಗಾಗಲೇ ಐಸಿಎಂಆರ್ ನಲ್ಲಿನ ಸಂಶೋಧಕರು ಭಾರತದಲ್ಲಿರುವ ಎರಡು ಬಾವಲಿ ಪ್ರಭೇದಗಳಲ್ಲಿ ಕೊರೋನಾ ವೈರಸ್ ನ್ನು ಗುರುತಿಸಿದ್ದು, ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳನ್ನು ಹರಡುವ ಸಾಮರ್ಥ್ಯವಿರುವ ಹೊಸ ಪ್ರಭೇದಗಳನ್ನು ತಿಳಿಯಲು ಬಾವಲಿಗಳ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ.

Leave a Reply

Your email address will not be published. Required fields are marked *