ಆ ಜರ್ಮನಿ ಬಾಲಕಿಯ ಮಾತಿಗೆ ರವೀಂದ್ರನಾಥ್ ಟ್ಯಾಗುರ್ ಬೆರಗಾದರು

ಹೌದು,ಆಕೆ ಇನ್ನು 9 ವರ್ಷದ ಬಾಲೆ. ಅದೂ ಜರ್ಮನಿಯಾಕೆ.
ರಾಷ್ಟ್ರಕವಿ ರವೀಂದ್ರನಾಥ್ ಟ್ಯಾಗುರ್ ಅವರು ಈಕೆಯ ಮಾತಿಗೆ ಬೆರಗಾಗಿ ಹೋದರು.ಭಾರತದ ಬಗ್ಗೆ ಆ ಬಾಲಕಿ ಆಡಿದ ಮಾತುಗಳಿಗೆ ಅವರ ಕಣ್ಣುಗಳು ತುಂಬಿಬಂದಿದ್ದವು.

ನಡೆದದ್ದು ಇಷ್ಟೆ, ಒಮ್ಮೆ ರವೀಂದ್ರನಾಥ್ ಅವರು ಜರ್ಮನಿಗೆ ಭೆಟ್ಟಿ ನೀಡಿದ್ದರು. ಆಗ ಅಲ್ಲಿನ ಸಂಬಂಧಿಸಿದವರು ಅವರನ್ನು ವಿಮಾನನಿಲ್ದಾಣದಲ್ಲಿ ಸ್ವಾಗತಿಸಲು ಸುಂದರ ಪುಟ್ಟ ಬಾಲಕಿಯೊಬ್ಬಳಿಗೆ ಹೇಳಿದ್ದರು.ಆಕೆಗೆ ಒಂದು ಗುಲಾಬಿ ಹೂ ನೀಡಿ ರವೀಂದ್ರನಾಥ್ ಅವರು ವಿಮಾನದಿಂದ ಇಳಿದ ತಕ್ಷಣ ಅವರಿಗೆ ಈ ಹೂ ನೀಡಿ “ವೆಲ್ ಕಮ್ ಟು ಜರ್ಮನಿ ಸರ್,ವಿ ಜೆರ್ಮನ್ಸ್ ಲವ್ ಇಂಡಿಯನ್ಸ್”ಅಂತ ಹೇಳಲು ತಿಳಿಸಿದ್ದರು.

ಅದರಂತೆ ರವೀಂದ್ರನಾಥ್ ಅವರು ವಿಮಾನದಿಂದ ಇಳಿದು ಹೊರಬಂದ ಬಳಿಕ ಆ 9 ವರ್ಷದ ಜರ್ಮನ್ ಬಾಲೆ ಆದೇ ರೀತಿ ಹೇಳಿದಳು.ಆಕೆಯ ಕಯ್ ಕುಲುಕಿದ ರವೀಂದ್ರನಾಥ್ ಅವರು ತಕ್ಷಣ ಕೇಳಿಬಿಟ್ಟರು,”ವೈ ಯು ಲವ್ ಇಂಡಿಯನ್ಸ್”ಅಂತ.
ಈ ಪ್ರೆಶ್ನೆಯನ್ನು ಅಲ್ಲಿದ್ದ ಯಾರು ನಿರೀಕ್ಷಿಸಿರಲಿಲ್ಲ, ಏಕಾಏಕಿ ಬಂದ ಈ ಪ್ರೆಶ್ನೆಗೆ ಬಾಲಕಿ ಕೊಂಚವೂ ವಿಚಲಿತ ಆಗಲಿಲ್ಲ.ಕೇವಲ 10 ಸೆಕೆಂಡ್ಗಳ ಸಮಯ ತೆಗೆದು ಕೊಂಡ ಆಕೆ ಅಷ್ಟೇ ಧೃಢವಾಗಿ ಉತ್ತರಿಸಿದಳು.
“ಇಂಡಿಯನ್ಸ್ ಲವ್ ಗಾಡ್,ಸೋ ಗಾಡ್ ಲವ್ಸ್ ಇಂಡಿಯನ್ಸ್,ಬಿಕಾಜ್ ವಿ ಜೆರ್ಮನ್ಸ್ ಲವ್ ಇಂಡಿಯನ್ಸ್” ಅಂತ.

ನಿಜಕ್ಕೂ ರವೀಂದ್ರನಾಥ್ ಅವರ ಕಣ್ಣುಗಳಲ್ಲಿ ಭಾರತದ ಹೆಮ್ಮೆಯ ಕುರಿತು ಆನಂದ ಭಾಷ್ಪಗಳು ಅವರಿಗೆ ಅರಿವಿಲ್ಲದಂತೆ ಹರಿದವು.
ಭಾರತದ ಸಂಸ್ಕೃತಿಯನ್ನು ಅದಾಗಲೇ ವಿಶ್ವಕ್ಕೆ ಪರಿಚಯಿಸಿದ ಸ್ವಾಮಿ ವಿವೇಕಾನಂದರನ್ನು ಅವರು ಮನದಲ್ಲೇ ಸ್ಮರಿಸಿದರು.
ಭಾರತದ ಕುರಿತು ಭಾರತೀಯರಲ್ಲಿ ಯಾವ ಭಾವನೆ ಇದೆಯೋ ಗೊತ್ತಿಲ್ಲ. ಆದರೆ ಭಾರತ ಒಂದು ಹೆಮ್ಮೆ ಎನ್ನುವ ಭಾವನೆ ಪ್ರದೇಶದಲ್ಲೂ ಇರುವುದು ಪ್ರತಿಯೊಬ್ಬ ಭಾರತಿಯನ್ನು ಎದೆ ತಟ್ಟಿ ಹೇಳಬಹುದು.ಇಲ್ಲಿನ ಸುಸಂಸ್ಕೃತ ನಡೆ ನುಡಿ ವಿಶ್ವಕ್ಕೆ ಮಾದರಿಯಾಗಿದೆ. ಇಲ್ಲಿನ ದಾರ್ಶನಿಕರ ಆದರ್ಶಗಳು ಇತರ ದೇಶಗಳಿಗೂ ಪ್ರೇರಣೆಯಾಗಿರುವುದುದಕ್ಕೆ ಆ ಜರ್ಮನ್ ಹುಡುಗಿ ಸಾಕ್ಷಿಯಲ್ಲವೇ.

ಇಂದು ನಗರದ ಎಸ್ ಆರ್.ಪಿ.ಶಾಲೆಯಲ್ಲಿ ನಡೆದ ವಾರ್ಷಿಕ ಸಮಾರಂಭದಲ್ಲಿ ಜನಮಿಡಿತ ಸಂಪಾದಕ ಜಿ.ಎಂ.ಆರ್.ಆರಾಧ್ಯ ಅವರು ಮೇಲಿನ ಘಟನೆಯನ್ನು ವಿವರಿಸಿದಾಗ ಇಡೀ ಸಭಾಂಗಣದದಲ್ಲಿ ಕರತಾದನದ ಅಲೆಗಳೇ ಎದ್ದವು.ಇದರರ್ಥ್ ನಮ್ಮ ಮಕ್ಕಳು ಹಾಗೂ ಪಾಲಕರಲ್ಲೂ ರಾಷ್ಟ್ರಾಭಿಮಾನ ಇದ್ದೇ ಇರುತ್ತದೆ.ಆದರೆ ಕಾಲ ಕಾಲಕ್ಕೆ ಇದನ್ನು ತಿಳಿಸುವ ಕೆಲಸ,ಜಾಗೃತಗೊಳಿಸುವ ಕೆಲಸ ಆಗಬೇಕಿದೆ ಎಂದು ಆರಾಧ್ಯ ಅಭಿಪ್ರಾಯಿಸಿದರು.

ಶ್ರೀಮತಿ ಸುನಿತಾಪ್ರಕಾಶ್ 
ಅಂಕಣಕಾರ್ತಿ , ಜನಮಿಡಿತ

Leave a Reply

Your email address will not be published. Required fields are marked *