One thought on “Janamiditha Daily 08-06-2022

  • June 10, 2022 at 2:52 pm
    Permalink

    ಹರಿಯುವ ನದಿಯಂತೆ ಬದುಕಿನ ಜಂಜಾಟಗಳು ‌‌. ಬೆಳಿಗ್ಗೆ ಎದ್ದೇಳ್ತಿದ್ದಾಗೆ ಶುರು ಸ್ನಾನ,ತಿಂಡಿ ಎಲ್ಲಾ ಗಡಿಬಿಡಿಯಲ್ಲಿ .. ಒಬ್ರ ಮುಖ ಇನ್ನೊಬ್ರಗೆ ನೋಡುವಷ್ಟು ಸಮಯ ಇಲ್ಲ ಅನ್ನೊ ಹಾಗೆ ಓಡ್ತಾ ಇರ್ತೀವಿ. ಎಲ್ಲಿಗೆ ಅನ್ನೊ ಕಾರ್ತಿ ಇರಲ್ಲ .. ನಮ್ಮ ಹಾದಿಯಲ್ಲೆ ಇರೊ ಫ್ರೆಂಡ್ಸ್ ನಮ್ಮಲ್ಲಿ ಒಂದಾಗ್ತಾರೆ .. ಕೊಂಚ ನೆಪುಗಳ ಬುತ್ತಿ ಕಟ್ಟಿಕೊಂಡು .. ಗೂಡು ಸೇರ್ಕೊಂಡ್ರೆ ನಾಳೆಗೇನು ಅನ್ನೋ ಚಿಂತೆ..!! ಎಷ್ಟೋ ಜನರ ದಿನಚರಿ ಇದೆ ಆಗಿರುತ್ತೆ .. ಬದಲಾವಣೆ ಒಂದೆ .. ದಾರಿ ಬೇರೆ_ರೀತಿ ಬೇರೆ..
    ದಿನ ಬೆಳಗ್ಗಾದ್ರೆ ಕಾಲೇಜ್_ ಕ್ಲಾಸ್ _ಲ್ಯಾಬ್_ಹಾಸ್ಪಿಟಲ್.. ಹೊಸದೇನೂ ಕಲಿತಾಗ ಉತ್ಸಾಹ.. ಆರಾಮಿಲ್ಲ ಡಾಕ್ಟ್ರೇ ಅಂತಾ ಬರೋವ್ರ ಸಂತೈಸಿ ಮದ್ದು ಕೊಟ್ಟು .. ಕೊನೆಗೆ ಅವರ ನಗು_ಸಮಾಧಾನ_ಭರವಸೆ ಏನೋ ಮುದ ನೀಡುತ್ತೆ .. ಇಷ್ಟೆಲ್ಲದರ ನಡುವೆ ಕೂಡ ಆಯಾಸ_ಹತಾಸೆ ಹೊತ್ತು ಹಾಸ್ಟೆಲ್ ಬಂದ್ರೆ..!!
    ಏನ್ಮಾಡ್ಲಿ ಅಂತ ಜನಮಿಡಿತ ಪತ್ರಿಕೆ ತೆಗೆದೆ ..
    ನಮ್ಮಂತ ಸಾಹಿತ್ಯ ಪ್ರೇಮಿಗಳಿಗೆ ..
    ಇನ್ನೇನು ಬೇಕು ಮದ್ದು ಕೊಡುವ ನನ್ನ
    ಆಯಾಸ ನೂಕಲು ಬೇಕಾದ್ದ ಮದ್ದು
    ನಿಮ್ಮಲ್ಲೆ ದೊರಕಿಬಿಟ್ಪಿತು..
    ಎಷ್ಟೋ ಕವಿಗಳಿಗೆ ವೇದಿಕೆ ನೀಡುತಿರುವ ಜನಮಿಡಿತ ..
    ಓಡುಗರ ತೃಷೆನೀಗುತಿರಲು ..
    ಯಶಸ್ಸು ಕಾಣಲಿ .. ನಮ್ಮ ಸಹಕಾರ ನಿಮ್ಮೊಂದಿಗೆ

    Reply

Leave a Reply

Your email address will not be published. Required fields are marked *