8 ಕಿಮೀ ಕಾಡಿನಲ್ಲಿ ನಡೆದು ಆ ಗ್ರಾಮ ತಲುಪಿದಾಗ ಗುಡ್ಡಕುಸಿತದ ನಂತರ,ಮಾಡಿದ ಜೀವರಕ್ಷಣೆಯ ರೋಚಕ ಸಾಹಸ ಕೇಳಿದ್ರೆ, ಮೈಜುಂ ಅನ್ನಿಸುತ್ತೆ!ಸ್ವಲ್ಪ ಬಿಡುವು ಮಾಡ್ಕೊಂಡ್ ಓದಿ..ಕಥೆ ಕೇಳಿ ಅಳು ಬರುಬಹುದು..

ನಾನು ಕೊಡಗಿನಲ್ಲಿದ್ದಾಗ ಕಾಟಗೇರಿ ಗ್ರಾಮದಲ್ಲಿ ಗುಡ್ಡ ಕುಸಿತದಿಂದ ಮೂವರು ಕಾಣೆಯಾಗಿದ್ದಾರೆ ಅನ್ನೊ ಸುದ್ದಿ ಬರುತ್ತೆ… 8 ಕಿಲೋ ಮೀಟರ್ ಕಾಡಿನಲ್ಲಿ ನಡೆದು ಆ ಗ್ರಾಮ ತಲುಪಿದಾಗ ಗುಡ್ಡಕುಸಿತದ ನಂತರ ಮನೋಹರ್ ಅವರು ಮಾಡಿದ ಜೀವರಕ್ಷಣೆಯ ರೋಚಕ ಸಾಹಸಗಾಥೆ ಕೇಳಿ ನಡೆದ ಪ್ರತಿಯೊಂದು ಹೆಜ್ಜೆಯೂ ಸಾರ್ಥಕ ಎನಿಸಿತು..ಹಾಗೇ ಮೈಜುಂ ಅಂತು…ಅದಾಗಲೇ ಮನೋಹರ್ ನನ್ನನಾವರಿಸಿದ.. ಕೊನೆಗೆ ಉಳಿದದ್ದು ಕೊಡಗಿನ ಕಾಪಾಡಿ ಅನ್ನೊ ‘ಕೂಗು’ ಮಾತ್ರ.. ಸಾಹಸಗಾಥೆ ಸ್ವಲ್ಪ ದೀರ್ಘವಾಗಿ ಬರೆದಿದ್ದೇನೆ…. ಸ್ವಲ್ಪ ಬಿಡುವು ಮಾಡ್ಕೊಂಡ್ ಓದಿ….ಕಥೆ ಕೇಳಿ ಅಳು ಬರುಬಹುದು..

ಸಾಹಸಗಾಥೆಯ ಸಾರಾಂಶ-

“ಮನೆ ಹಿಂದಿನ ಗುಡ್ಡ ಒಳಗೊಳಗೆ ಕುಸಿಯುತ್ತಿತ್ತು. ಇದ್ಯಾದರ ಅವರಿವು ರಕ್ಷಣೆಗೆ ಹೋದ ಈ ಐವರಿಗಿರಲಿಲ್ಲ. ಹಾಗೇ ಮನೆ ಮುಂದಿನ ರಸ್ತೆಯ ಆಚೆ ಯಾರಾದ್ರು ಸಿಲುಕಿದ್ದಾರಾ ಅನ್ನೊದನ್ನ ನೋಡಿ ಬರಲು ಹೋಗುತ್ತಾರೆ. ಆ ಮನೆಯಿಂದ ನೇರವಾಗಿ ರಸ್ತೆಯ ಮೂಲಕ ಇನ್ನೊಂದು ಸ್ಥಳಕ್ಕೆ ಮನೋಹರ್,ಯಶ್ವಂತ , ಯತೀಶ್, ವೆಂಕಟೇಶ್ ಪವನ್ ಹೋಗುತ್ತಿರುತ್ತಾರೆ. ಅದಾಗ ಬೆಳಿಗ್ಗೆ 6.20 ರ ಸಮಯ ಯಮರಾಯನಿಗೇ ಯಾಕೆ ಆ ಸಮಯ ಪ್ರಸಕ್ತ ಅನಿಸಿತು ಗೊತ್ತಿಲ್ಲ..ಭೂಮಿಯ ಒಡಲಾಳದಲ್ಲಿ ತಲ್ಲಣ ಅದಾಗಲೇ ಶುರುವಾಗಿತ್ತು. ಮೇಲಿನ ಗುಡ್ಡ ಬಾಯ್ಕಳೆದು ನುಂಗುವಂತೆ ಬಾಸವಾಗಿತ್ತು.

ಇದಕ್ಕೆಲ್ಲ ಧಾರಾಕಾರ ಮಳೆ ನಮ್ಮದೊಂದು ಕೊಡುಗೆ ಎಂಬಂತೆ ಮಣ್ಣನ್ನ ಸಡಿಲಗೊಳಿಸಿತ್ತು. ಕಣಿವೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಮನೋಹರ್ಗೆ ಎತ್ತರದಲ್ಲಿದ್ದ ಗುಡ್ಡ ಸ್ಪೋಟಗೊಂಡಂತಹಃ ಶಬ್ದ ಕೇಳಿಸುತ್ತೆ. … ಅದೇನಂತ ಆಕಾಶದೆತ್ತರಕ್ಕೆ ನೋಡಿದ್ರೆ ದೊಡ್ಡ ಗುಡ್ಡ ಇದ್ದಕ್ಕಿದ್ದಂತೆ ಸಿನಿಮೀಯ ಶೈಲಿಯಲ್ಲಿ ಕುಸಿದು ಇಳಿಜಾರಿಗೆ ಸಿಡಿದು ಬಂದಿಂತು. ಅಲ್ಲಿರುವ ಎಲ್ಲರಿಗೂ ಅಣ್ಣನಂತಿದ್ದ ಮನೋಹರ್ ಮುಂದೆ ಇದ್ದರು.ಆಗ ಮನೋಹರ್ ಮನಸ್ಸಿನಲ್ಲಿ ‘ಪೃಕ್ರತಿಗೆ ಸವಾಲೆನಿಸುವಂತೆ ಚಂದ್ರನಲ್ಲಿಗೆ ಹೋಗಿ ಧ್ವಜ ನೆಟ್ಟು ಬಿಗಿ ಬಂದ ನಾವು ಪೃಕ್ರತಿಯ ಮುಂದೆ ಹುಲುಮಾನವರೇ..ಯಾಕಂದರೆ ಕುಸಿಯುತ್ತಿರೋ ಪರ್ವತಕ್ಕೆ ಎದೆಯೊಡ್ಡೋ ಸಾಮರ್ಥ್ಯ ಯಾರಿಗೂ ಇಲ್ಲ’ ಎಂದೆನಿಸಿತು.

ಮೇಲಿಂದ ಗುಡ್ಡ ತಮ್ಮನ್ನ ನುಂಗಿಹಾಕುವಂತೆ ಸಿಡಿದು ಬರುವಾಗ ತಡೆದು ನಿಲ್ಲಿಸೋ ಶಕ್ತಿ ಯಾರಿಗೂ ಇಲ್ಲ.ಹೀಗಾಗಿ ಮನೋಹರ್ ಎಲ್ಲರಿಗೂ ಓಡುವಂತೆ ಹೇಳಿ ಓಡಲು ಪ್ರಾರಂಭಿಸ್ತಾರೆ..ಆಗ ನಡೆದದ್ದು ಸಾಯಿಸುತ್ತೆನೆ ಅಂತ ಬಂದ ಸಾವನ್ನೇ ಸೋಲಿಸಿದ ಮನೋಹರ್ ಸಾಹಸಗಾಥೆ…ಇದೀಗ ಮನೋಹರ್ ಗೆ ಯಾವುದೇ ಕೀರ್ತಿ ಪ್ರಶಸ್ತಿಗಳ ನಿರೀಕ್ಷೆಗಳಿಲ್ಲ.. ಜೀವ ರಕ್ಷಣೆ ಮಾಡಿದ್ದೇನೆ ಎಂದ ಯಾವ ಗರ್ವವೂ ಅವರಲ್ಲಿಲ್ಲ.. ರೈತ ಮನೋಹರ್ ಇದ್ಯಾವುದರ ಕುರಿತಂತೆ ಚಿಂತೆ ಪಡೆದೆ ಜಮೀನಿನ ಯಾವ ಮೂಲೆಯಲ್ಲಿ ಯಾವುದೋ ಕ್ರಷಿ ಕೆಲಸವನ್ನ ಮಾಡ್ತಿದ್ದಾನೆ…”

ಸಾಹಸಕಥೆ ಆರಂಭ-

ಅತ್ತ ಮುಕ್ಕೊಡ್ಲು, ಹಿಗ್ಗೋಡ್ಲು, ಹೆಮ್ಮತ್ತಗಿರಿ, ಮಕ್ಕಂದೂರು, ಕಾಟಗೇರಿ, ನಾಪೋಕ್ಲು, ರಾಜಾಸೀಟ್ ನ ಇಂದಿರಾ ನಗರ ಸೇರಿ ಹೀಗೆ ನೂರಾರು ಗ್ರಾಮಗಳ ಸಾವಿರಾರು ಬರೆಗಳು ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದು.. ಜನರು ಮನೆ ಆಸ್ತಿಪಾಸ್ತಿಗಳೆಲ್ಲ ನೆಲ ಸಮಾಧಿಯಾಗಿತ್ತು.ಹೀಗೆ ನೆಲ ಸಮಾಧಿಯಾಗಿ ಸಾವನಪ್ಪಿದ ಪ್ರತಿಯೊಬ್ಬ ವ್ಯಕ್ತಿಯ ಸಾವಿನ ಹಿಂದೆ ಒಂದೊಂದು ರೋಚಕ ಸತ್ಯವಿದೆ.ಮೈನವಿರೇಳಿಸುವ ಸಾವು ಬದುಕಿನ ಹೋರಾಟವಿದೆ.

ಅಂದು ಇಡೀ ಕೊಡಗು ಧಾರಾಕಾರ ಮಳೆಗೆ ನಲುಗಿಹೋಗಿತ್ತು. ಆದ್ರೆ ಅದು ಮಡಿಕೇರಿ ಸಮೀಪದ ಪುಟ್ಟ ಗ್ರಾಮ…. ಕಾಟಗೇರಿ… ಹೆಚ್ಚೆಂದಂರೆ ಸಾವಿರ ಮಂದಿ ವಾಸಿಸುವ ಗ್ರಾಮ…. ಈ ಗ್ರಾಮದ ಮೂಲೆಯಲ್ಲಿಯೋ ಅಚ್ಚಲ್ಪಾಡಿ ಎಂಬ ಪ್ರದೇಶದಲ್ಲಿ ಇದಕ್ಕಿದ್ದಂತೆ ಗುಡ್ಡ ಜರಿದಿತ್ತು. ಹೀಗಾಗಿ ಅಲ್ಲಿರೋ ಮೂರು ಮನೆಗಳಲ್ಲಿ ಎರಡು ಮನೆಯಲ್ಲಿರೋ ಜನರು ರಾತ್ರಿನೇ ತಮಗೆ ಗುಡ್ಡ ಕುಸಿದು ಅಪಾಯ ಆಗಬಹುದು ಅಂತ ಮನೆ ಖಾಲಿ ಮಾಡಿ ಅಲ್ಲಿಂದ ಹೊರಟುಹೋಗುತ್ತಾರೆ. ಆದ್ರೆ ಅಚ್ಚಲ್ಪಾಡಿಯ ಇನ್ನೊಂದು ಮನೆಯಲ್ಲಿದ್ದ ವೃದ್ದ ದಂಪತಿ ಮತ್ತು ಮಗು ಅಪಾಯದ ಅರಿವಿಲ್ಲದೇ ಮನೆಯಲ್ಲಿರುತ್ತಾರೆ.

ಅತ್ತ ಮನೆ ಖಾಲಿ ಮಾಡಿದ ಆ ಅಚ್ಚಲಪಾಡಿ ಕುಟುಂಬದ ಒಬ್ರು ಮದ್ಯ ರಾತ್ರಿ ಕಾಲ್ ಮಾಡ್ತಾರೆ… ಅದು ಮಧ್ಯ ರಾತ್ರಿ ಅಚ್ಚಲಪಾಡಿಯ ಒಂದು ಕುಟುಂಬ ಇನ್ನು ಮನೆ ಖಾಲಿ ಮಾಡಿಲ್ಲ.. ಅತ್ತ ಬರೆ ಕುಸಿಯುವ ಆತಂಕವಿದೆ ದಯವಿಟ್ಟು ಕಾಪಾಡಿ ಅನ್ನೊ ಧ್ವನಿ ಆ ಕಡೆಯಿಂದ.. ಆದ್ರೆ ಅದಾಗಲೇ ಮಧ್ಯ ರಾತ್ರಿಯಾಗಿತ್ತು. ಈ ಕರೆಯನ್ನ ರಿಸೀವ್ ಮಾಡೋದು ನಮ್ಮ ಈ ಕೊಡಗಿನ ಕೂಗಿಗೆ ಕಿವಿಯಾದ ನ ಈ ಸ್ಟೋರಿಯ ಹೀರೋ ಮನೋಹರ್..

ಹೌದು.. ಅಷ್ಟೇನು ಸದೃಡ ಕಾಯದವರಲ್ಲದ ಮನೋಹರ್ಗೆ ಕಷ್ಟಕ್ಕೆ ಮಿಡಿಯುವ ಧೃಡ ಮನಸ್ಸಿತ್ತು. ಹೀಗಾಗಿ ಬೆಳಿಗ್ಗೆಗೆ ಸ್ಥಳಕ್ಕೆ ಹೋಗ್ಬೇಕಂತ ನಿರ್ಧರಿಸ್ತಾರೆ. ಆಗ ಇವ್ರ ಅಣ್ಣ ಕೆಎಸ್ ಆರ್ ಪಿ ಪೊಲೀಸ್ ಪೇದೆ ಯಶ್ವಂತ್ ಬಳಿ ಆ ಮನೆಯವರು ಅಪಾಯದಲ್ಲಿದ್ದ ಬಗ್ಗೆ ಹೇಳ್ತಾರೆ. ಹೇಳಿ ಕೇಳಿ ಸಾಹಸಿ ಪೊಲೀಸ್ ಅವ್ರು ಬೆಳಿಗ್ಗೆನೇ ಸ್ಥಳಕ್ಕೆ ಹೋಗೋಣ ಅಂದ ನಿರ್ಧಾರ ಮಾಡ್ತಾರೆ. ಹಾಗೇ ಅಲ್ಲಿ ಅಪಾಯದಲ್ಲಿರೋದು ತನ್ನ ಅಪ್ಪ ಅಮ್ಮ ಮತ್ತು ಮುದ್ದು ಕಂದಮ್ಮ ಅಂತ ಗೊತ್ತಾದಾಗ ಅಚ್ಚಲಪಾಡಿ ಪವನ್ ಕೂಡಾ ಸ್ಥಳಕ್ಕೆ ಹೋಗೋಣ ಅಂತ ನಿರ್ಧಾರ ಮಾಡಿಕೊಳ್ತಾರೆ.

ಹೀಗಾಗಿ ಬೆಳಿಗ್ಗೆನೇ ಆ ಮನೆಗೆ ಹೋಗಿ ಅಲ್ಲಿದ್ದ ವಯಸ್ಸಾದ ದಂಪತಿ ಮತ್ತು ಮಗುವನ್ನ ಕಾಪಾಡಬೇಕು ಅಂತ ನಿರ್ಧರಿಸುತ್ತಾರೆ. ಹೀಗಾಗಿನೇ ಅಚ್ಚಲಪಾಡಿ ಕುಟುಂಬದ ಮನೋಹರ್, ಇವ್ರ ಅಣ್ಣ ಪೊಲೀಸ್ ಪೇದೆ ಯಶ್ವಂತ್, ಪವನ್ , ಯತೀಶ್ , ವೆಂಕಟೇಶ್ ಸೇರಿ ಬೆಳಿಗ್ಗೆನೆ ಅಚ್ಚಲಪಾಡಿಯ ಆ ಮನೆಗೆ ಬರುತ್ತಾರೆ. ಅಲ್ಲಿರೋ ಪವನ್ ತಂದೆ ತಾಯಿಗಳಿಗೆ ಅಂತು ನಾನು ಬದುಕಿದ್ದೇವೆಲ್ಲ ಅಂತ ಕಣ್ಣಲ್ಲಿ ನೀರು ಸುರಿಸುತ್ತಾ ಪವನ್ ತಬ್ಬಿ ಕೊಳ್ತಾರೆ. ಹಾಗೇ ತಂದೆ ತಾಯಿ ಮತ್ತು ಮಗುವನ್ನ ರಕ್ಷಣೆ ಮಾಡಿ ನೀವು ಹೀಗೆ ಹೋಗಿ ಅಮ್ಮ ನಾನು ಮನೆ ಮುಂದಿನ ರಸ್ತೆಯಲ್ಲಿ ಬರ್ತೆನೆ ಅಂತ ಪವನ್ ಅವರನ್ನ ಮನೆ ಹಿಂದಿನ ರಸ್ತೆಯಲ್ಲಿ ಸುರಕ್ಷಿತವಾಗಿ ಕಳುಹಿಸಿಕೊಡುತ್ತಾರೆ.

ಆದ್ರೆ ಮನೆ ಹಿಂದಿನ ಗುಡ್ಡ ಒಳಗೊಳಗೆ ಕುಸಿಯುತ್ತಿತ್ತು. ಇದ್ಯಾದರ ಅವರಿವು ರಕ್ಷಣೆಗೆ ಹೋದ ಈ ಐವರಿಗಿರಲಿಲ್ಲ. ಹಾಗೇ ಮನೆ ಮುಂದಿನ ರಸ್ತೆಯ ಆಚೆ ಯಾರಾದ್ರು ಸಿಲುಕಿದ್ದಾರಾ ಅನ್ನೊದನ್ನ ನೋಡಿ ಬರಲು ಹೋಗುತ್ತಾರೆ. ಆ ಮನೆಯಿಂದ ನೇರವಾಗಿ ರಸ್ತೆಯ ಮೂಲಕ ಇನ್ನೊಂದು ಸ್ಥಳಕ್ಕೆ ಮನೋಹರ್,ಯಶ್ವಂತ , ಯತೀಶ್, ವೆಂಕಟೇಶ್ ಪವನ್ ಹೋಗುತ್ತಿರುತ್ತಾರೆ. ಅದಾಗ ಬೆಳಿಗ್ಗೆ 6.20 ರ ಸಮಯ ಯಮರಾಯನಿಗೇ ಯಾಕೆ ಆ ಸಮಯ ಪ್ರಸಕ್ತ ಅನಿಸಿತು ಗೊತ್ತಿಲ್ಲ..ಭೂಮಿಯ ಒಡಲಾಳದಲ್ಲಿ ತಲ್ಲಣ ಅದಾಗಲೇ ಶುರುವಾಗಿತ್ತು.

ಮೇಲಿನ ಗುಡ್ಡ ಬಾಯ್ಕಳೆದು ನುಂಗುವಂತೆ ಬಾಸವಾಗಿತ್ತು. ಇದಕ್ಕೆಲ್ಲ ಧಾರಾಕಾರ ಮಳೆ ನಮ್ಮದೊಂದು ಕೊಡುಗೆ ಎಂಬಂತೆ ಮಣ್ಣನ್ನ ಸಡಿಲಗೊಳಿಸಿತ್ತು. ಕಣಿವೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಮನೋಹರ್ಗೆ ಎತ್ತರದಲ್ಲಿದ್ದ ಗುಡ್ಡ ಸ್ಪೋಟಗೊಂಡಂತಹಃ ಶಬ್ದ ಕೇಳಿಸುತ್ತೆ. … ಅದೇನಂತ ಆಕಾಶದೆತ್ತರಕ್ಕೆ ನೋಡಿದ್ರೆ ದೊಡ್ಡ ಗುಡ್ಡ ಇದ್ದಕ್ಕಿದ್ದಂತೆ ಸಿನಿಮೀಯ ಶೈಲಿಯಲ್ಲಿ ಕುಸಿದು ಇಳಿಜಾರಿಗೆ ಸಿಡಿದು ಬಂದಿಂತು. ಅಲ್ಲಿರುವ ಎಲ್ಲರಿಗೂ ಅಣ್ಣನಂತಿದ್ದ ಮನೋಹರ್ ಮುಂದೆ ಇದ್ದರು. ಮೇಲಿಂದ ಗುಡ್ಡ ತಮ್ಮನ್ನ ನುಂಗಿಹಾಕುವಂತೆ ಸಿಡಿದು ಬರುವಾಗ ತಡೆದು ನಿಲ್ಲಿಸೋ ಶಕ್ತಿ ಯಾರಿಗೂ ಇಲ್ಲ ಬಿಡಿ.. ಹೀಗಾಗಿ ಮನೋಹರ್ ಎಲ್ಲರಿಗೂ ಓಡುವಂತೆ ಹೇಳಿ ಓಡಲು ಪ್ರಾರಂಭಿಸ್ತಾರೆ..

ಮನೋಹರ್ ಸ್ಥಳದಿಂದ ಓಡಿ ಎಂದು ಹೇಳುವಷ್ಟರಲ್ಲಿ ಎಲ್ಲರಿಗೂ ಅಪಾಯದ ಸೂಚನೆ ಸಿಕ್ಕಿತ್ತು. ಹೀಗಾಗಿ ಗುಡ್ಡ ಮೇಲೆರಗಿ ಬರುದ್ದನ್ನ ತಪ್ಪಿಸಿಕೊಳ್ಳಲು ಎಲ್ಲರು ಅಲ್ಲಿಂದು ಓಡುತ್ತಾರೆ. ಗುಡ್ಡ ಮೇಲಿಂದ ಸಿಡಿದು ಜಾರಿಕೊಂಡು ಬಂಡೆ , ಮರಗಳ ಸಮೇತ ಕೆಳ ರಸ್ತೆಗೆ ಅಪ್ಪಳಿಸುತ್ತೆ. ಮನೋಹರ್ ಗೆ ಮಣ್ಣು ಬೆನ್ನಿಗೆ ಬಡಿಯುತ್ತೆ..ಕಣ್ಣಿಗೆ ಕತ್ತಲು ಕವಿಯುತ್ತೆ..ಕುತ್ತಿಗೆ ವರೆಗೂ ಆವರಿಸಿರೋ ಮಣ್ಣು… ತಲೆ ತಿರುಗುತ್ತಿರುವ ಅನುಭವ.. ಕಣ್ಣಿಗೆಲ್ಲ ಕತ್ತಲು ಕತ್ತಲೆ..ಇದು ಮನೋಹರ್ಗೆ ಕಣ್ಣು ಬಿಟ್ಟಾಗ ಆಗಿರೋ ಸ್ಥಿತಿ.. ಹೌದು..ಇದೆಲ್ಲ ಕಣ್ಮುಚ್ಚಿತೆರೆಯುದರೋಳಗೆ ಇದೆಲ್ಲ ಆಗಿತ್ತು ಮಣ್ಣಿನಡಿ ಮನೋಹರ್ ಸಿಲುಕಿದ್ರು. ನಾನು ಅಷ್ಟು ಸುಲಭದಲ್ಲಿ ಸಾವಿಗೆ ಶರಣಾಗಲ್ಲ ಅಂತ ಸೆಣಸಾಡಿ ತನ್ನ ಮೇಲಿದ್ದ ಮಣ್ಣನೆಲ್ಲ ಕೆದಕಿ ಮಣ್ಣಿನಿಂದ ಎದ್ದು ಬರಲು ಪ್ರಯತ್ನಿಸ್ತಾರೆ. ಆಗ ಆ ಮಣ್ಣಿನಿಂದ ಕಾಲನ್ನ ಎತ್ತುತ್ತಾರೆ. ಅದಾಗಲೇ ಬಲಗಾಲಿಗೆ ಬಲವಾದ ಪಟ್ಟಾಗಿತ್ತು. ಕಾಲನ್ನೆತ್ತಿ ಹೆಜ್ಜೆಯಿಡಲು ಸಾಧ್ಯವಾಗುತ್ತಿಲ್ಲ. ಸ್ಥಳದಲ್ಲೆ ನಿಂತು ಅಳ್ತಾರೆ.. ಅದು ಹೇಗೋ ಮಾಡಿ ಕೆಸರಿನಿಂದ ಮುಂದಿನ ರಸ್ತೆಗೆ ಬರ್ತಾರೆ..

ತನ್ನ ಕಾಲಿಗೆ ಬಲವಾದ ಪಟ್ಟಾಗಿದೆ ಅಂತ ಮನೋಹರ್ ಅಲ್ಲೆ ಅಳುತ್ತಾ ಕೂರೋದಿಲ್ಲ…ನನ್ನೊಂದಿರಿರೋರು ಎಲ್ಲಿ ಅಂತ ನೋಡುವಾಗ ಅಲ್ಲೆ ಪಕ್ಕ ಮಣ್ಣಿನಲ್ಲಿ ಹೂತೂ ಹೋಗಿರೋ ಯತೀಶ್ ಸಹಾಯಕ್ಕಾಗಿ ಮೊರೆಯಿಡುವ ಸ್ವರ ಕೇಳುತ್ತದೆ. ತಕ್ಷಣ ಕುಂಟುತ್ತಲೆ ಯತೀಶನತ್ತ ಧಾವಿಸಿ ಮಣ್ಣನಲ್ಲಿ ಹೂತು ಹೋಗಿರೋ ಯತೀಶನನ್ನು ಕಷ್ಟಪಟ್ಟು ತನ್ನ ಒಂಟಿ ಕಾಲ ಮೇಲೆ ಬಲ ಹಾಕಿ ಹೊರತರೋ ಪ್ರಯತ್ನ ಮಾಡ್ತಾರೆ ಮನೋಹರ್.. ಕಷ್ಟಪಟ್ಟು ಮಣ್ಣನ್ನೆಲ್ಲ ಮಣ್ಣಿಂದಲೇ ತೆರವು ಮಾಡಿ ಯತೀಶನನ್ನು ಮೇಲೆತ್ತುತ್ತಾರೆ. ಆಗ ನಿತ್ರಾಣ ಸ್ಥಿತಿಯಲ್ಲಿದ್ದ ಯತೀಶಗೆ ಎಡ ಕೈ ಮತ್ತು ಎಡ ಕಾಲಿಗೆ ಬಲವಾದ ಗಾಯವಾಗಿರುತ್ತೆ. ಅವನನ್ನು ರಸ್ತೆಗೆ ತಂದು ಹಾಕುತ್ತಿತ್ತಾರೆ.

ಯತೀಶನನ್ನು ರಕ್ಷಣೆ ಮಾಡಿ ರಸ್ತೆಗೆ ತಂದು ಹಾಕುತ್ತಿರುವಾಗ್ಲೆ ಬಂಡೆಗಳ ನಡುವಿನಿಂದ ಇನ್ನೊಂದು ಅಳುವ ಸ್ವರ.. ಕಾಪಾಡಿ ಅಂತ ಕಿರುಚುವ ಸ್ವರ ಕೇಳಿಸುತ್ತೆ. ಆಗ ಹೋಗಿ ನೋಡಿದ್ರೆ ವೆಂಕಟೇಶ್ ಬಂಡೆಗಳ ಅಡಿ ಸಿಲುಕಿರ್ತಾನೆ. ಆಗ ಬಂಡೆಗಳಿಂದ ಅದು ಹೇಗೆ ಹೊರಕ್ಕೆಳೆದು ಅವನನ್ನ ಮಣ್ಣಿನ ಮೇಲೆ ಮಲಗಿಸ್ತಾರೆ. ಇಷ್ಟರವರೆಗೂ ಸಾವನ್ನ ಎದುರು ಹಾಕಿಕೊಂಢು ಸಾವಿಗೆ ಸವಾಲೆಸೆದು ಒಬ್ಬರನ್ನ ಆಪತ್ತಿನಿಂದ ಬದುಕಿಸುವ ಕಾರ್ಯ ಮುಂದುವರಿದಿತ್ತು. ಆದ್ರೆ ಆದಾಗಲೇ ವೆಂಕಟೇಶ್ ಎರಡು ಕಾಲುಗಳು ಬಂಡೆಗೆ ಸಿಲುಕಿ ಮುರಿದಿತ್ತು.ಸೊಂಟಕ್ಕೂ ಬಲವಾದ ಎಟಾಗಿತ್ತು.ಅದಾಗ ಗುಡ್ಡ ಕುಸಿದ ಸದ್ದಿಗೆ ಇಬ್ಬರು ಸ್ಥಳಕ್ಕೆ ಬಂದು ವೆಂಕಟೇಶನನ್ನು ಸ್ವಲ್ಪ ದೂರ ಸಾಗಿಸಿ ನೀರು ಕೊಡ್ತಾರೆ.

ನಂತರ ಅದೆಲ್ಲೂ ಮಣ್ಣನಡಿಯಿಂದ ಪವನ್ ಕೂಗುತ್ತಿರೋ ಸ್ವರ ಕೇಳಿಸುತ್ತೆ. ನೂರು ಮೀಟರನಷ್ಟು ಅಗಲಕ್ಕೆ ಬಿದ್ದಿರೋ ಮಣ್ಣಿನಲ್ಲಿ ಆ ಸ್ವರ ಎಲ್ಲಿಂದ ಬರ್ತಿದೆ ಅಂತ ಮನೋಹರ್ಗೆ ಗೊತ್ತಾಗೊದಿಲ್ಲ. ಅಷ್ಟರಮಟ್ಟಿಗೆ ಮಣ್ಣು ಪವನ್ ಮೇಲೆ ಬಿದ್ದಿತ್ತು..ಕೆಲ ಕ್ಷಣಗಳ ನಂತರ ಆ ಸ್ವರವು ನಿಧಾನಕ್ಕೆ ಕಡಿಮೆಯಾಗಿ..ನಂತರ ಸ್ವರ ಇಲ್ಲವಾಗುತ್ತೆ… ಪವನ್ ಮಣ್ಣಿನೊಳಗೆ ಸಾಯುತ್ತಾನೆ. ಅಲ್ಲಿಗೆ ಕೊನೆಗೆ ತನ್ನ ಅಣ್ಣ ಯಶ್ವಂತ್ ಎಲ್ಲಿ ಅಂತ ಮನೋಹರ್ ಹುಡುತ್ತಾನೆ. ಅಲ್ಲೆ ಸ್ವಲ್ಪ ದೂರದ ಕಿತ್ತು ಬಿದ್ದ ಮರದ ಪಕ್ಕ ಅಣ್ಣ ಪ್ರಜ್ನೆ ತಪ್ಪಿ ಬಿದ್ದಿರ್ತಾರೆ. ಆಗ ಹತ್ತಿರ ಹೋಗಿ ನೋಡಿದಾಗ ದೇಹದ ಮೇಲೆ ಯಾವುದೇ ಗಾಯವಾಗಿರೋದಿಲ್ಲ . ಕಿವಿಯಲ್ಲಿ ಸ್ಪಲ್ಪ ರಕ್ತ ಬಂದಿರುತ್ತೆ . ರೆಂಬೆ ತಲೆಗೆ ಹೊಡೆದು ಸ್ಥಳದಲ್ಲೆ ಸಾವನಪ್ಪಿರ್ತಾನೆ. ಅತ್ತ ಎರಡು ಜೀವ ಉಳಿಸಿದ ಸಂತ್ರಪ್ತಿ ಇತ್ತ ಕುಟುಂಬದ ಎರಡು ಜೀವವನ್ನ ಕಳೆದುಕೊಂಡ ಸಂತಾಪ ಒಟ್ಟೊಟ್ಟಿಗೆ ಮನೋಹರ್ ಅವರನ್ನ ಕಾಡುತ್ತೆ…

ಸ್ಥಳದಲ್ಲಿ ಕೆಲವು ದಿನಗಳ ಬಳಿಕ 10 ನೇ ಬೆಟಾಲಿಯನ್ ಎನ್ ಡಿ ಆರ್ ಫ್ ಪಡೆ, ಕಾವೇರಿ ಸೇನೆ, ಆರ್ ಎಸ್ ಎಸ್ ಮತ್ತು ಸ್ಥಳೀಯರ ನೆರವಿನಿಂದ ಪವನ್ ಮ್ರತದೇಹವನ್ನು ಹುಡುಕುವ ಕಾರ್ಯಾಚರಣೆ ಆರಂಭವಾಗುತ್ತೆ. ಈ ಎಲ್ಲಾ ಕಾರ್ಯಾಚರಣೆಗೆ ಮನೋಹರ್ ತನ್ನ ಸಂಪೂರ್ಣ ಸಹಕಾರ ನೀಡಿ ನೆರವಾಗ್ತಾರೆ.ಹಾಗೇ ಅಲ್ಲೇ ರಕ್ಷಣಾ ಕಾರ್ಯಾಚಣೆಯನ್ನ ನೋಡಿ ಆ ದಿನ ನಡೆದ ಘಟನೆಯನ್ನ ನೆನೆದು ನೆನೆದು ಕಣ್ಣಿರು ಹಾಕ್ತಿದ್ರು.

ಕೊನೆಗೆ 6 ದಿನಗಳ ಬಳಿಕ ಮಣ್ಣಿನಾಳದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಪವನ್ ಮ್ರತದೇಹವನ್ನು ತೆಗೆದು ಸ್ಥಳದಲ್ಲೆ ಮರಣೋತ್ತರ ಪರಿಕ್ಷೆ ನೆಡಸಿ ಕುಟುಂಬದವರಿಗೆ ಹಸ್ತಾಂತರಿಸಿದ್ರು.ಆದ್ರೆ ಘಟನೆ ನಡೆದ ಬೆಳಿಗ್ಗೆ 9.20 ಸುಮಾರಿಗೆ ಮನೋಹರ್ ರಕ್ಷಣೆ ಮಾಡಿದ ವೆಂಕಟೇಶ್ ಗೆ ಸ್ನಾನ ಮಾಡಿಸಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಕುಟುಂಬದವ್ರು ನಿರ್ಧರಿಸಿದ್ರು. ಆಗ ವೆಂಕಟೇಶ್ಗೆ ಅದಾಗಲೇ ನಾನು ಬದುಕಲ್ಲ ಅನ್ನೊದು ಗೊತ್ತಾಯ್ತೆನೋ ಅನ್ನಿಸುತ್ತೆ. ನನ್ನನ್ನ ಎಲ್ಲಿಗೂ ಕರೆದುಕೊಂಡು ಹೋಗುದು ಬೇಡ ಅಂತ ಕುಟುಂಬಸ್ಥರ ಬಳಿ ಹೇಳಿದ್ದಾನೆ. ಕೊನೆದಾಗಿ ತನ್ನ ರಕ್ಷಣೆ ಮಾಡಿದ ಮನೋಹರ್ ಗೆ ಧನ್ಯವಾದ ತಿಳಿಸಿ ಕೈಮೂಗಿದು ತನ್ನ ಬದುಕಿನ ಪುಟತಿರುವಿ ಹೊರಟು ಹೋಗ್ತಾನೆ. ಇದೀಗ ಯತೀಶ ನಿಗೆ ಅಲ್ಲೇ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುತ್ತಿದ್ದು, ಆರೋಗ್ಯವಾಗಿದ್ದಾನೆ. ಅತ್ತ ಯತೀಶ್ ಕೂಡ ಮನೋಹರ್ ಮಾಡಿದ ಸಹಾಯವನ್ನ ನೆನೆ ನೆನೆದು ಧನ್ಯವಾದ ತಿಳಿಸುತ್ತಿದ್ದಾನೆ.

ಮೂಲತಃ ಕ್ರಷಿಕ ನಾಗಿರೋ ಮನೋಹರ್ ಅಂದು ಗುರುವಾರ ಬೆಳಿಗ್ಗೆ ಸಾವು ಕಣ್ಣ ಮುಂದಿದ್ದು ಕಾಲಿಗೇ ಎಟಾಗಿದ್ದರೂ, .ಸಾವನ್ನೇ ನಾನು ಸೋಲಿಸುತ್ತೆನೆ ಅಂತ ಅಂದು ಯತೀಶ್ ಮತ್ತು ವೆಂಕಟೇಶ್ ನನ್ನು ರಕ್ಷಣೆ ಮಾಡಿದ ಮನೋಹರ್ ಸಾಧನೆಗೆ ಹ್ಯಾಟ್ಸಾಫ್ ಹೇಳಲೇ ಬೇಕು… ಸಾವನ್ನೇ ಸೋಲಿಸುತ್ತೆನೆ.. ಬದುಕನ್ನ ಎತ್ತಿಹಿಡಿಯುತ್ತೆನೆ ಎಂಬ ಧೈರ್ಯಕ್ಕೆ ಮೆಚ್ಚಲೇ ಬೇಕು..ಮನೋಹರ್ ಸಾವನ್ನೇ ಸೋಲಿಸಿ ಬದುಕಿಸಿದ ಸಾಹಸಗಾಥೆಗೆ ಕಾಟಗೇರಿ ಗ್ರಾಮದೆಲ್ಲೆಡೆ ಶಹಬ್ಬಾಸ್ ಅನ್ನಿಸಿಕೊಂಡಿದ್ದಾರೆ. ಮನೋಹರ್ ಕೀರ್ತಿ ಕೊಡಗಿನೆಲ್ಲೆಡೆ ಹೆಚ್ಚಿದೆ. ಹಾಗೇ ಜೀವನ್ನ ಹಂಗನ್ನ ತೊರೆದು ಇತರರನ್ನು ಬದುಕಿಸಿದ ಮನೋಹರ್ ಶೌರ್ಯ, ಸಾಹಸಗಾಥೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಸಿಗಬೇಕಾದ ಗೌರವ ಸಿಗಲಿ… ಮನೋಹರ್ ಗೆ ಯಾವುದೇ ಕೀರ್ತಿ ಪ್ರಶಸ್ತಿಗಳ ನಿರೀಕ್ಷೆಗಳಿಲ್ಲ.. ಜೀವ ರಕ್ಷಣೆ ಮಾಡಿದ್ದೇನೆ ಎಂದ ಯಾವ ಗರ್ವವೂ ಅವರಲ್ಲಿಲ್ಲ.. ರೈತ ಮನೋಹರ್ ಇದ್ಯಾವುದರ ಕುರಿತಂತೆ ಚಿಂತೆ ಪಡೆದೆ ಜಮೀನಿನ ಯಾವ ಮೂಲೆಯಲ್ಲಿ ಯಾವದೋ ಕ್ರಷಿ ಕೆಲಸವನ್ನ ಮಾಡ್ತಿರ್ಬೇಕು. ಅವರ ಸಾಹಸಗಾಥೆಗೆ ತಕ್ಕದಾದ ಗೌರವ ಸಿಗಲಿ

ಕೃಪೆ : ರೂಪೇಶ್ ಬೈಂದೂರು

Leave a Reply

Your email address will not be published. Required fields are marked *