40 ಕೋಟಿ ರೂ. ಸಾಲಕ್ಕೆ ಭಾರತ ಅಡವಿಟ್ಟದ್ದು 47 ಟನ್ ಬಂಗಾರ….!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ವೈ.ವಿ.ರೆಡ್ಡಿಯವರ ಅಡ್ವೈಸ್ ಅಂಡ್ ಡಿಸೆಂಟ್ ಪುಸ್ತಕದ ಕೆಲವು ಭಯಾನಕ ಸತ್ಯಗಳು

ಲೋಕಸಭಾ ಚುನಾವಣಾ ಸಂದರ್ಭದಲ್ಲಿ ವಾಟ್ಸಪ್ ಹಾಗೂ ಫೇಸ್‍ಬುಕ್‍ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಪಕ್ಷಗಳು ಹಾಗೂ ವ್ಯಕ್ತಿಗಳ ಪರ-ವಿರೋಧ ಸಂದೇಶಗಳು ಎಡೆಬಿಡದೆ ಬರುತ್ತಿವೆ. ಇವುಗಳಲ್ಲಿ ಕೆಲವು ಸತ್ಯಕ್ಕೆ ಸಮೀಪವಿದ್ದರೆ ಇನ್ನೂ ಕೆಲವು ಮಿಥ್ಯಕ್ಕೆ ಹತ್ತಿರವಿರುತ್ತವೆ. ವಿರಳ ಎಂಬಂತೆ ಅತ್ಯಂತ ಗಂಭೀರ ಹಾಗೂ ಅಂಕಿಅಂಶಗಳನ್ನೊಳಗೊಂಡ ಮತ್ತು ಪಕ್ಷಾತೀತವಾಗಿ ಒಪ್ಪಬಹುದಾದಂತಹ ಸಂದೇಶಗಳೂ ಇರುತ್ತವೆ. ಅಂತಹ ಸಂದೇಶಗಳಲ್ಲೊಂದು ನಾನು ಈಗ ಕೆಳಗೆ ವಿವರಿಸಿರುವ ವಿಷಯ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ವೈ.ವಿ.ರೆಡ್ಡಿಯವರ ಅಡ್ವೈಸ್ ಅಂಡ್ ಡಿಸೆಂಟ್ ಪುಸ್ತಕದ ಕೆಲವು ಸತ್ಯಗಳು.

ವೈ.ವಿ.ರೆಡ್ಡಿಯವರ ಪ್ರಕಾರ ಅವರೇ ತಮ್ಮ ಪುಸ್ತಕದಲ್ಲಿ ಈ ಅಂಶಗಳನ್ನು ನಮೂದಿಸಿದ್ದಾರೆ ಎಂದು ಈ ಸಂದೇಶ ಹೇಳುತ್ತದೆ. ಅವರ ಪುಸ್ತಕದ ಹೆಸರು ಅಡ್ವೈಸ್ ಅಂಡ್ ಡಿಸೆಂಟ್. ಕೆಳಗಿನ ವಿಷಯದ ಸತ್ಯಾಸತ್ಯತೆಯ ಬಗ್ಗೆ ತಿಳಿಯಲು ಆಸಕ್ತಿ ಹೊಂದಿದವರು ಗೂಗಲ್‍ನಲ್ಲಿ ನೋಡಬಹುದು. ಕಾಂಗ್ರೆಸ್ಸಿನ ದುರಾಡಳಿತದ ರೆಡ್ಡಿ ಅವರ ಮಾತುಗಳಲ್ಲೇ ಇವೆ ಮುಂದಿನ ಸಾಲುಗಳು.

ಅವಧಿಯಲ್ಲಿ ನಾವು 47 ಟನ್ ಬಂಗಾರವನ್ನು ಅಡವಿಟ್ಟು ಕೇವಲ 40 ಕೋಟಿ ಸಾಲ ಪಡೆದಿದ್ದೆವು !

ಇದು ಅಂದಿನ ಭಾರತದ ಆರ್ಥಿಕ ಪರಿಸ್ಥಿತಿ ಆಗಿತ್ತು. 90ರ ದಶಕದ ಆರಂಭದ ದಿನಗಳಲ್ಲಿ ಭಾರತದಂತಹ ಒಂದು ಬೃಹತ್ ರಾಷ್ಟ್ರವು ತನ್ನ ಬಳಿಯಿದ್ದ ಚಿನ್ನವನ್ನು ವಿಶ್ವ ಬ್ಯಾಂಕಿನಲ್ಲಿ ಒತ್ತೆ ಇಡಬೇಕಾದ ಪರಿಸ್ಥಿತಿಯಲ್ಲಿತ್ತು.
ರಾಜೀವ್ ಗಾಂಧಿಯವರ ಆಳ್ವಿಕೆಯಲ್ಲಿ, ಭಾರತದ ಖಜಾನೆ ಖಾಲಿಯಾಗಿತ್ತು ಮತ್ತು…ಎಲ್.ಟಿ.ಟಿ.ಇ. ಉಗ್ರರ ದಾಳಿಯಲ್ಲಿ ಅವರ ಹತ್ಯೆ ನಡೆದುಹೋಯಿತು….
ಅದಾದ ನಂತರ, ಚಂದ್ರಶೇಖರ್ ಪ್ರಧಾನಿಯಾದರು… ತಿಜೋರಿ ಬರಿದಾಗಿತ್ತು. ಅವರಿಗೆ ಬಹಳ ಆತಂಕವಾಯಿತು, ಏನು ಮಾಡಬೇಕೆಂಬುದೇ ಅವರಿಗೆ ತೋಚಲಿಲ್ಲ.

ಇಡೀ ದೇಶದಲ್ಲಿ ಆಗ ಬಹಳ ಹತಾಶ ವಾತಾವರಣ ಮುಸುಕಿತ್ತು…. ರಾಜೀವ್ ಗಾಂಧಿಯವರು ಉದ್ಯೋಗ ಸೃಷ್ಟಿಗಾಗಿ ಯಾವ ಯೋಜನೆಗಳನ್ನೂ ಮಾಡಿರಲಿಲ್ಲ. ಹೊಸ ಉದ್ಯಮ ಶುರು ಮಾಡುವುದು ಎಂದರೆ ಅಷ್ಟು ಸುಲಭವಿರಲಿಲ್ಲ: ಉದ್ಯಮ ಕ್ಷೇತ್ರಕ್ಕೆ ಬರಬೇಕು ಎಂದರೆ ಐವತ್ತು ಕಡೆಯಿಂದ ಎನ್‍ಓಸಿ ತರಬೇಕಿತ್ತು….
ಕಾಂಗ್ರೆಸ್‍ನವರ ಲೈಸೆನ್ಸ್ ಪರ್ಮಿಟ್ ನಿಯಮಗಳ ಸುಳಿಯಲ್ಲಿ ಇಡೀ ವ್ಯವಹಾರ ಕ್ಷೇತ್ರ ತನ್ನ ಉತ್ಸಾಹವನ್ನು ಕಳೆದುಕೊಂಡು ನಿರಾಶವಾದಿಯಾಗಿ ಹೋಗಿತ್ತು… ಇನ್ನೊಂದು ಕಡೆ, ಮಂಡಲ್ ಹೋರಾಟ ಕಂಡಲ್ ಹೋರಾಟ ಇತ್ಯಾದಿಗಳು ದೇಶದ ತುಂಬಾ ಹರಡಿದ್ದವು…
1980 ರಿಂದ 1990 ರವರೆಗೆ, ಕಾಂಗ್ರೆಸ್ ಸರ್ಕಾರವು ಆರ್ಥಿಕತೆಗೆ ಪೂರ್ಣ ವಿರಾಮ ಹಾಕಿ ಕುಳಿತಿತ್ತು.. ಇದೇ ಹೊತ್ತಿನಲ್ಲೆ ಬೊಫೋರ್ಸ್ ದಲ್ಲಾಳಿ ವ್ಯವಹಾರದ ಹಗರಣ ಬಯಲಿಗೆ ಬಂತು… ರೆಡ್ಡಿಯವರು ಹೇಳುವಂತೆ ಗಾಂಧಿ ಕುಟುಂಬದವರು ಎಗ್ಗಿಲ್ಲದೆ ದೇಶವನ್ನು ಲೂಟಿ ಹೊಡೆದು, ದೇಶದ ಎಕಾನಮಿಯನ್ನು ರಸಾತಳ ತಲುಪುವಂತೆ ಮಾಡಿದರು…
ಆ ದಿನಗಳಲ್ಲಿ ಭಾರತದ ವಿದೇಶ ವಿನಿಮಯ ನಿಧಿ ಎಷ್ಟು ಕಡಿಮೆ ಇತ್ತೆಂದರೆ, ನಮ್ಮ ದೇಶದ ರಿಸರ್ವ್ ಬ್ಯಾಂಕು ತನ್ನಲ್ಲಿದ್ದ ಚಿನ್ನವನ್ನು ವಿಶ್ವ ಬ್ಯಾಂಕಿನಲ್ಲಿ ಒತ್ತೆ ಇಡಬೇಕಾದ ತೀರ್ಮಾನಕ್ಕೆ ಬಂದಿತ್ತು….

ಆಗಿನ ಪರಿಸ್ಥಿತಿ ಹೇಗಿತ್ತೆಂದರೆ, ನಮಗೆ ಸಾಲವಾಗಿ ಬರಲಿದ್ದ ಹಣದ ಮೌಲ್ಯ ನಮ್ಮಲ್ಲಿನ ಕೇವಲ 15 ದಿನಗಳವರೆಗಿನ ರಿಸರ್ವ್ ಮೌಲ್ಯಕ್ಕೆ ಸಾಕಾಗುವಷ್ಟಿತ್ತು. ಆಗ ಪ್ರಧಾನಿ ಚಂದ್ರಶೇಖರ್ ಅವರ ಆಜ್ಞೆಯಂತೆ ಭಾರತವು ತನ್ನಲ್ಲಿದ್ದ 47 ಟನ್ (47 ಸಾವಿರ ಕೆ.ಜಿ) ಬಂಗಾರವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ ಬಳಿಯಲ್ಲಿ ಒತ್ತೆ ಇಡಲು ಒಪ್ಪಿಕೊಂಡಿತು.
…ಬಹಳ ಆಶ್ಚರ್ಯಕರವೂ , ಹಾಗೂ ಮುಜುಗರ ತರುವಂಥದ್ದೂ ಆದ ಈ ಘಟನೆ ಪತ್ರಿಕೆಗಳಲ್ಲೂ ವರದಿಯಾಯಿತು. ಆಗಿನ ಆ ಸಂದರ್ಭದಲ್ಲಿ ಈಗಿನಂತೆ ಮೊಬೈಲ್ ಗಳಾಗಲಿ, ಇಂಟರ್ನೆಟ್ ಆಗಲೀ ಇರಲಿಲ್ಲ. ಲ್ಯಾಂಡ್ ಲೈನ್ ಫೋನು ಇದ್ದರೂ ಸಹಾ ಬಹಳ ಮಿತವಾಗಿ ಬಳಕೆಯಲ್ಲಿತ್ತು.

ಅದಕ್ಕಿಂತಲೂ ಕೆಟ್ಟ ಪರಿಸ್ಥಿತಿ ಎಂದರೆ, ರಿಸರ್ವ್ ಬ್ಯಾಂಕಿನ ಕಟ್ಟಡದಿಂದ ಚಿನ್ನವನ್ನು ಇಂಗ್ಲೆಂಡಿಗೆ ಹೋಗುವ ಹಡಗಿಗೆ, ವ್ಯಾನಿನಲ್ಲಿ ಸಾಗಿಸಬೇಕಾದ ದೈನೇಸಿ ಸ್ಥಿತಿ ಬಂದೊದಗಿತ್ತು! 47 ಟನ್ ಚಿನ್ನವನ್ನು ಆರ್‍ಬಿಐಗೆ ಸೇರಿದ ಹಳೆಯ
ವ್ಯಾನೊಂದರಲ್ಲಿ , ಇಬ್ಬರು ಸೆಕ್ಯುರಿಟಿ ಗಾರ್ಡುಗಳ ರಕ್ಷಣೆಯಲ್ಲಿ ಇಂಗ್ಲೆಂಡಿಗೆ ಹೊರಟು ನಿಂತ ಹಡಗಿಗೆ ಸಾಗಿಸಲಾಯಿತು.

ಆ ವ್ಯಾನು ಎಷ್ಟು ಹಳೆಯದೆಂದರೆ, ದಾರಿಯ ಮಧ್ಯದಲ್ಲಿ ಅದರ ಎರಡೂ ಚಕ್ರಗಳು ಪಂಕ್ಚರ್ ಕೂಡಾ ಆದವು! ಅಷ್ಟೇ ಅಲ್ಲ, 47 ಟನ್ ಚಿನ್ನ ಹೊತ್ತಿದ್ದ ಈ ವ್ಯಾನಿನ ರಕ್ಷಣೆಗೆ ಬಂದಿದ್ದವರು ಕೇವಲ ಇಬ್ಬರು ಪಾಪದ ಸೆಕ್ಯುರಿಟಿ ಗಾರ್ಡುಗಳು!!
ಇಷ್ಟೆಲ್ಲಾ ಪ್ರಯತ್ನಗಳ ನಂತರ, ಅಂತೂ ಬಂಗಾರ ಇಂಗ್ಲೆಂಡ್ ತಲುಪಿತು ಮತ್ತು ಇಂಗ್ಲೆಂಡು ನಮಗೆ 40. 05 ಕೋಟಿಗಳಷ್ಟು ಹಣವನ್ನು ಸಾಲ ಕೊಡಮಾಡಿತು.
ನಾನು ಯಾಕೆ ಭಾರತದ ಎಕಾನಮಿಗೆ ಸಂಬಂಧಪಟ್ಟ ಈ ವಿಷಾದಕರ ಪ್ರಸಂಗವನ್ನು ನೆನಪಿಸುತ್ತಿದ್ದೇನೆ ಎಂದು ನಿಮಗೆ ಅನ್ನಿಸಬಹುದು. ಕಾರಣವಿಷ್ಟೇ, ದೇಶದ ಆರ್ಥಿಕತೆಯನ್ನು ನಾಶ ಮಾಡುತ್ತಿದ್ದಾನೆ ಎಂದು ಮೋದಿಯನ್ನು ಹೆಜ್ಜೆ ಹೆಜ್ಜೆಗೂ ಟೀಕಿಸುತ್ತಿರುವ ನಾಚಿಕೆಯಿಲ್ಲದ ಕಾಂಗ್ರೆಸ್ಸಿನ ನಾಯಕರಿಗೆ ಮೇಲೆ ನಾನು ಹೇಳಿದಂತಹ ಎಲ್ಲ ವಿಷಯಗಳೂ ಗೊತ್ತಿವೆ.

ನಮ್ಮ ಈ ದಾರಿದ್ರದ ಆರ್ಥಿಕ ಪರಿಸ್ಥಿತಿಗೆ ಗಾಂಧಿ ಕುಟುಂಬದ ಕೊಡುಗೆ ಏನು ಎಂಬುದು ಅವರಿಗೆ ತಿಳಿದಿದೆ… ಈ ಒಂದು ಕುಟುಂಬದ ಸಲುವಾಗಿ, ಕೇವಲ 40 ಕೋಟಿ ಸಾಲಕ್ಕೆ ಇಡೀ ದೇಶದ 47 ಟನ್ ಚಿನ್ನ ಒತ್ತೆ ಇಡಬೇಕಾದ ಪರಿಸ್ಥಿತಿ ಬಂದಿತ್ತು ಎಂಬುದೂ ಸಹಾ ಅವರು ಅರಿಯದ ವಿಷಯವಲ್ಲ.

ಸ್ವಾಭಿಮಾನದಿಂದ ಬದುಕಬೇಕಾದ ಒಂದು ರಾಷ್ಟ್ರಕ್ಕೆ ಇದಕ್ಕಿಂತ ಅವಮರ್ಯಾದೆ ಹಾಗೂ ಇದಕ್ಕಿಂತ ವಿನಾಶಕಾರಿ ಪರಿಸ್ಥಿತಿ ಮತ್ತೊಂದಿದೆಯೇ?
ಬರಿಯ 40 ಕೋಟಿಗಾಗಿ ಇಡೀ ದೇಶವನ್ನೇ ಅಡವಿಟ್ಟ ಜನ ಇವತ್ತು ಮೋದಿ ನಮ್ಮ ಅರ್ಥ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾನೆ ಎಂದಾಗ ನನಗೆ ಮೈ ಉರಿದುಹೋಯಿತು.

ಹಿಂದೂಸ್ಥಾನದ 70 ವರ್ಷಗಳ ಇತಿಹಾಸದಲ್ಲಿ, ಕೇವಲ ಮೂರು ಅವಧಿಗಳಲ್ಲ ಮಾತ್ರ ನಾವು ವಿಶ್ವ ಬ್ಯಾಂಕಿನಿಂದ ಯಾವುದೇ ಸಾಲ ಪಡೆಯದೇ ಸರ್ಕಾರ ನಡೆಸಿದ್ದೇವೆ. ಅವು ಯಾವುವೆಂದರೆ, 2015-16, 2016-17, 2017-18, ಈ ಮೂರೂ ವರ್ಷಗಳು ಒಬ್ಬ ಚಾಯ್ ವಾಲಾ ನಡೆಸಿದ ಸರ್ಕಾರಕ್ಕೆ ಸೇರಿದವು.
-ಜಿ.ಎಂ.ಆರ್.ಆರಾಧ್ಯ

Leave a Reply

Your email address will not be published. Required fields are marked *