37 ಉಗ್ರರಿಗೆ ಸಾಮೂಹಿಕ ಗಲ್ಲು

ರಿಯಾದದ್ (ಏ.24) ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿ ದೋಷಿಗಳಾಗಿರುವ 37 ಮಂದಿ ತನ್ನ ನಾಗರಿಕರನ್ನು ಸೌದಿ ಅರೇಬಿಯಾ ಮಂಗಳವಾರ ಸಾಮೂಹಿಕ ಮರಣದಂಡನೆ ಶಿಕ್ಷೆಗೆ ಗುರಿಪಡಿಸಿದೆ.

ಮುಸ್ಲಿಮರ ಪವಿತ್ರ ನಗರ ಮೆಕ್ಕಾ ಮತ್ತು ಮದೀನಾ ರಿಯಾದ್ ಹಾಗು ಸುನ್ನಿ ಪ್ರಾಭಲ್ಯವಿರುವ ಖಾಸಿಮ್ನಲ್ಲಿ ಮರಣ ದಂಡನೆ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ. ಜನರು ಜಿಹಾದಿ ಸಿದ್ದಾಂತ ಅಳವಡಿಸಿಕೊಂಡು ಭಯೋತ್ಪಾದಕ ಘಟಕ ಸ್ಥಾಪನೆ ಹಾಗೂ ದೇಶದ ಭದ್ರತೆಯನ್ನು ಅಸ್ಥಿರಗೊಳಿಸಲು ಯತ್ನಿಸಿದ ಕಾರಣಕ್ಕೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು ಎಂದು ಸೌದಿ ಪ್ರೆಸ್ ಏಜೆನ್ಸಿ ತಿಳಿಸಿದೆ.

ಕಳೆದ ವರ್ಷದಿಂದೀಚೆಗೆ ಸೌದಿ ಅರೇಬಿಯಾದಲ್ಲಿ 100 ಜನರನ್ನು ಮರಣದಂಡನೆಗೆ ಗುರಿಪಡಿಸಲಾಗಿದೆ.

Leave a Reply

Your email address will not be published. Required fields are marked *