15 ದಿನ ಲಾಕ್ ಡೌನ್ ಗೆ ಸಂಪೂರ್ಣ ಬೆಂಬಲಿಸಿ ನೋಡಿ ಕೊರೋನಾ: ಭಾರತೀಯರ ಪಾಲಿಗೆ ಸಂತಸದ ಸುದ್ಧಿ ನೀಡಿದ ಸಂಶೋಧನಾ ವಿಜ್ಞಾನಿಗಳು

ನವದೆಹಲಿ: ಮಾ.30 – ತಾಪಮಾನ ಮತ್ತು ಡೆಡ್ಲಿ ಕೊರೋನಾ ನಡುವಿನ ಸಂಪರ್ಕದ ಬಗ್ಗೆ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ಭಾರತೀಯರ ಪಾಲಿಗೆ ಸಂತಸದ ಸುದ್ಧಿಯೊಂದನ್ನು ನೀಡಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಸಧ್ಯದ ಗುಡುಗು ಸಹಿತ ಮಳೆಯಂತಹ ಚಟುವಟಿಕೆಯಿಂದಾಗಿ ತಾಪಮಾನವು 2 ರಿಂದ 4 ಡಿಗ್ರಿ ಸೆಲ್ಷಿಯಸ್ ಇದೆ. ಈ ವಾರ ದೇಶದ ಬಹುತೇಕ ಭಾಗಗಳಲ್ಲಿ ಇದೇ ವಾತಾವರಣ ಮುಂದುವರೆದಿದೆ. ಏಪ್ರಿಲ್ ಆರಂಭದಿಂದ ಬೇಸಿಗೆ ಕಾಲ ಆರಂಭವಾಗಲಿದ್ದು, ಕೊರೋನಾ ವೈರಸ್ ಹರಡುವಿಕೆಯನ್ನು ತಗ್ಗಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಸರ್ಕಾರ ಮತ್ತು ವಿಜ್ಞಾನಿಗಳು ತುಂಬಾ ಭರವಸೆ ಇಟ್ಟಿದ್ದು, ಇದರೊಟ್ಟಿಗೆ 21 ದಿನಗಳ ಲಾಕ್ ಡೌನ್ ಏಪ್ರಿಲ್ ಮಧ್ಯ ಭಾಗದಲ್ಲಿ ಕೊನೆಗೊಳ್ಳುವುದರಿಂದ ಇದೂ ಕೂಡ ಭಾರತೀಯರ ಪಾಲಿಗೆ ವರವಾಗಲಿದೆ. ವೈರಸ್ ಹರಡುವಿಕೆ ನಿಧಾನವಾಗಿ ಕೊನೆಗೊಳ್ಳುವ ಸಾಧ್ಯತೆ ಇದೆ ಎಂದು ಬಲವಾದ ನಂಬಿಕೆಯನ್ನು ಹೊಂದಿದ್ದಾರೆ.

ಪಶ್ಚಿಮ ಕರಾವಳಿ ಪ್ರದೇಶದಲ್ಲಿ ವಾಯುಭಾರ ಕುಸಿತದಿಂದಾಗಿ ಈ ವಾರ ಕೆಲವೆಡೆ ಬಾರಿ ಪ್ರಮಾಣದ ಗುಡುಗುಸಹಿತ ಮಳೆಯನ್ನು ಹೊತ್ತು ತಂದಿದೆ. ಬೆಟ್ಟ – ಗುಡ್ಡಗಳ ಮೇಲೆ ಹಿಮ ಬಿದ್ದಿರುವುದರಿಂದ ಸಹಜವಾಗಿಯೇ ತಾಪಮಾನ ವಾರದ ಆರಂಭದಲ್ಲಿಯೇ ಇಳಿಕೆಯಾಗಿದೆ. ಮತ್ತೊಂದು ಸುತ್ತಿನ ಗುಡುಗು ಸಹಿತ ಮಳೆ ಮಾರ್ಚ್ 30ರೊಳಗೆ ಆಗುವ ಸಾಧ್ಯತೆ ಎಂದು ಹವಮಾನ ತಜ್ಞ ಮಹೇಶ್ ಪಾಲಾವತ್ವ ಹೇಳಿದ್ದಾರೆ.

ತಾಪಮಾನ ಏರಿಕೆಯ ಟ್ರೆಂಡ್ ಏಪ್ರಿಲ್ ತಿಂಗಳ ಆರಂಭದಲ್ಲಿ ಮುಂದುವರೆಯುವ ನಿರೀಕ್ಷೆಗಳಿವೆ. ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ನಿಂದ ಮಧ್ಯ ಏಪ್ರಿಲ್ ನಲ್ಲಿ 40 ಡಿಗ್ರಿಯವರೆಗೂ ತಾಪಮಾನ ಏರಿಕೆಯಾಗಿದೆ. ಉತ್ತರ ಭಾಗದಲ್ಲಿ ತೇವಾಂಶದ ಮಟ್ಟ ಕೆಳಮಟ್ಟದಲ್ಲೇ ಉಳಿಯಲಿದ್ದು, ಕರಾವಳಿ ಪ್ರದೇಶಗಳಲ್ಲಿ ಉಷ್ಣ ಮತ್ತು ತೇವಾಂಶ ಇರಲಿದೆ. ಈ ಎಲ್ಲ ಸಂಗತಿಗಳು ಕೊರೋನಾ ಕುಟುಂಬದ ವಿರುದ್ಧ ಹೋರಾಡಲಿವೆ ಎಂದು ಪಾಲಾವತ್ ತಿಳಿಸಿದ್ದಾರೆ.

ಕೆಲವು ಅಧ್ಯಯನಗಳ ಪ್ರಕಾರ ಹೊಸ ಕೊರೋನಾ ವೈರಸ್ ಗಳಲ್ಲಿ ಕಾಲೋಚಿತತೆಯನ್ನು ಗುರುತಿಸಲಾಗಿದ್ದು, ಶತಮಾನಗಳಿಂದ ಮಾನವರಲ್ಲಿ ಚಾಲ್ತಿಯಲ್ಲಿರುವ ಆದರ ಅನುವಂಶಿಕ ಗುಣಗಳು ಕಂಡುಬಂದಿದೆ. ಹೀಗಾಗಿ ಇವುಗಳು ಡಿಸೆಂಬರ್ ಮತ್ತು ಏಪ್ರಿಲ್ ನಡುವೆ ಹೆಚ್ಚು ಆವಿಯಾಗುವ ಸಾಧ್ಯತೆ ಇದೆ. ಈ ಒಂದು ಕಾರಣದಿಂದಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಪ್ರಸ್ತುತ ಇರುವ ಪ್ರಭಾವಕ್ಕಿಂತಲೂ ತುಂಬಾ ಕಡಿಮೆ ಇರಲಿದೆ ಎಂದು ನಂಬಲಾಗಿದೆ.

ಇದೇ ವೇಳೆ ಕೋವಿಡ್- 19 ಬೆಳವಣಿಗೆಯ ಟ್ರೆಂಡ್ ಬಗ್ಗೆ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂ ಐ ಟಿ) ಸಂಶೋಧಕರ ಪ್ರಾಥಮಿಕ ಅಧ್ಯಯನದ ಪ್ರಕಾರ ಅತಿಯಾದ ಉಷ್ಣ ವಲಯಗಳಲ್ಲಿ ಕೊರೋನಾ ಪ್ರಕರಣಗಳು ತುಂಬಾ ಕಡಿಮೆ ಇರುವುದನ್ನು ತೋರಿಸಿದೆ. ಅಲ್ಲದೆ, ಅತಿ ಹೆಚ್ಚು ವೈರಸ್ ಹರಡುವಿಕೆ ಅಂದರೆ ಶೇ. 90ರಷ್ಟು ಮಾರ್ಚ್ 22 ರವರೆಗೆ ಸಂಭವಿಸಿದೆ. ಈ ಸಮಯದಲ್ಲಿ ತಾಪಮಾನ 3 ಡಿಗ್ರಿ ಸೆಲ್ಸಿಯಸ್ ನಿಂದ 17 ಡಿಗ್ರಿ ಇತ್ತು. ಆರ್ದ್ರತೆಯ ಮಟ್ಟ ಪ್ರತಿ ಘನ ಮೀಟರ್ ಗ್ರಾಂ 4 ರಿಂದ 9 ಇತ್ತೆಂದು ಅಧ್ಯಯನ ಸೂಚಿಸಿದೆ.

ಭಾರತದಲ್ಲಿ ಮಾರ್ಚ್ ತಿಂಗಳಲ್ಲಿ ತಾಪಮಾನ ಕಡಿಮೆ ಇದ್ದುದರಿಂದ ಸೋಂಕಿತ ಪ್ರಕರಣಗಳು ವೇಗವಾಗಿ ಏರಿಕೆಯಾಗಿವೆ. ಇದಕ್ಕೆ ಯುರೋಪ್ ಒಂದು ಒಳ್ಳೆಯ ಉದಾಹರಣೆಯಾಗಿದ್ದು, ಅಲ್ಲಿ ಒಳ್ಳೆಯ ಆರೋಗ್ಯ ಸೇವೆ ಇದ್ದರೂ ಪ್ರಕರಣ ಹಾಗೂ ಸಾವಿನ ಸಂಖ್ಯೆ ಅಧಿಕವಾಗುವುದಕ್ಕೆ ತಾಪಮಾನ ಕಡಿಮೆಯೇ ಕಾರಣ ಎಂದು ನಂಬಲಾಗಿದೆ.

Leave a Reply

Your email address will not be published. Required fields are marked *