1000 ಬಾರ್ ಗಳಿಗೆ ಲೈಸೆನ್ಸ್ ಕೊಡ್ತಾರಂತೆ!?

ಹೊಸ ಸರ್ಕಾರ ಬಂದು 100 ದಿನ ಆಯ್ತು.ಯಾವುದಾದ್ರು ಹೊಸ ಸರ್ಕಾರಿ ಶಾಲೆ ಅಥವಾ ಸರ್ಕಾರಿ ಆಸ್ಪತ್ರೆ ಆರಂಭ ಆದಬಗ್ಗೆ ಕೇಳಿದ್ದೀರಾ?

ಐಎಎಸ್,ಕೆಎಎಸ್,ಕೆಪಿಎಸ್ ಅಧಿಕಾರಿಗಳ ವರ್ಗಾವಣೆ ಹೊರತುಪಡಿಸಿ ಬೇರೇನೂ ಆಡಳಿತಾತ್ಮಕ ಪ್ರಕ್ರಿಯೆ ನಡೆದೇ ಇಲ್ಲ.ಈಗ 1000 ಹೊಸ ಬಾರ್ ಗಳಿಗೆ ಅನುಮತಿ ಕೊಡೋಕೆ ಹೊರಟಿದ್ದಾರೆ ಮುಠ್ಠಾಳರು.ತುಂಬಾ ಗಂಭೀರ ಚಿಂತನೆ ನೀಡಿಸಿದ್ದಾರಂತೆ ಬಂಡಗೆಟ್ಟವರು.
ಈ 100 ದಿನಗಲ್ಲಿ ರಾಜ್ಯ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದು ಎಲ್ಲರಿದು ಗೊತ್ತು.ಬರೀ ಅಸ್ಥಿರತೆಯ ಮಾತು,ಗೋಂದಲದ ಹೇಳಿಕೆ,ಸರ್ಕಾರ ಕೆಡವಲು ಕೆಲವರ ಹುನ್ನಾರ-ಉಳಿಸಲು ಕೆಲವರ ಸಾಹಸ.ಆಯ್ಕೆಯಾದವರಿಗೆ ಅಧಿಕಾರದ ದಾಹ,ಅವರು ಬಿದ್ದರೆ ನಮಗೆ ಅವಕಾಶ ಎಂದು ಕೆಲವರಿಗೆ ವಿಶ್ವಾಸ.ಬದುಕಿ ಸತ್ತಂತೆ ಸಾಗುತ್ತಿರುವ ವ್ಯವಸ್ಥೆ ಒಂದೆಡೆ,ಸಿಕ್ಕಷ್ಟು ಬಾಚಿಕೊಳ್ಳೋಣ ಎಂಬ ಅಧಿಕಾರಸ್ತರ ಆತುರ ಇನ್ನೊಂದೆಡೆ.
ಥು.. ನಿಮ್ಮ ಜನ್ಮಕ್ಕಿಷ್ಟು

Leave a Reply

Your email address will not be published. Required fields are marked *