ಸರ್,.. ನಾನೂ ಸ್ವಲ್ಪ ಡ್ರಿಕ್ಸ್ ಮಾಡಿನಿ ಅಂದಾಗ ನನಗೆ ಹುಚ್ಚು ಹಿಡಿಯೊದೊಂದೆ ಬಾಕಿ..
ಒಮ್ಮೆ ಹೀಗಾಯ್ತು.
ರಾತ್ರಿ 11.30ರ ಸಮಯ.ನಾನು ದ್ವಿಚಕ್ರ ವಾಹನದಲ್ಲಿ ಕಚೇರಿಯಿಂದ ಮನೆಗೆ ಹೊರಟಿದ್ದೆ.ಶಾಮನೂರು ಕಲ್ಯಾಣ ಮಂಟಪದ ಎದುರು ಯರ್ರಾಬಿರ್ರಿಯಾಗಿ ಎದುರಿನಿಂದ ಬಂದ ಇನ್ನೊಂದು ದ್ವಿಚಕ್ರವಾಹನವೊಂದು ನನ್ನ
ಗಾಡಿಗೆ ಡಿಕ್ಕಿ ಹೊಡೆದೇ ಬಿಟ್ಟಿತು.ನಾನು ವಾಹನಸಮೇತ ಬಿದ್ದುಬಿಟ್ಟೆ ಅವರು ಇಬ್ಬರಿದ್ದರು.ಅವರು ಬಿದ್ದರು.
ನನ್ನನ್ನು ಮೇಲೆತ್ತಿ ಸಹಾಯಕ್ಕೆ ಬಂದ ಇಬ್ಬರು ವಿಪರೀತ ಕುಡಿದಿದ್ದರು.ನನ್ನನ್ನು ಎತ್ತುವ ಪ್ರಯತ್ನದಲ್ಲಿ ಅವರೂ ಬಿದ್ದರು.
ಅತ್ತ ಡಿಕ್ಕಿ ಹೊಡೆದು ಬಿದ್ದವರು (ಅವರಿಗೆ ಏನು ಆಗಿಲ್ಲದಿದ್ದರು)ಮೇಲೆ ಏಳಲು ಅವರಿಗೆ ಆಗುತ್ತಿರಲಿಲ್ಲ.ಕಾರಣ ಅವರಿಬ್ಬರು ಕುಡಿದಿದ್ದರು.
ನನ್ನ ಗಾಡಿ ಜಖಂ ಆಗಿ ನನ್ನ ಕಾಲಿಗೆ ಏಟುಬಿದ್ದು ಅನಿವಾರ್ಯವಾಗಿ ಆಟೋದಲ್ಲಿ ಆಸ್ಪತ್ರೆಗೆ ಹೋಗಲು ಆಟೋ ಕೂಗಿದೆ.ಸರ್ಕಾರಿ ಆಸ್ಪತ್ರೆಗೆ ಬರಲು ಆತನೂ ಹೆಚ್ಚು ಹಣ ಕೇಳಿದ. ಈ ಹೊತ್ತಲ್ಲಿ ಆತನ ಜೊತೆ ಏಕೆ ವಾದ ಎಂದು ಹತ್ತಿಕುಳಿತೆ.. ಎ.. ಎ.. ಎಲ್ಲಿಗೆ ಅಂದ.ನಂಗೆ ಗೊತ್ತಾಯ್ತು,,ಆಗಲೇ ಆತನು…
ಆಸ್ಪತ್ರೆ ಬಳಿ ಸ್ವಲ್ಪ ಸಹಾಯಮಾಡು ಇಳಿಯಲು ಎಂದೆ.. ಪಾಪ ಆತನೇನೋ ಬಂದ.ಆದರೆ ಹತ್ತಿರ ಬಂದಾಗ ಆ ವಾಸನೆ ಸಹಿಸಲು ತುಂಬಾ ಹಿಂಸೆಯಾಯಿತು.
ಅನಿವಾರ್ಯ,..ತಡೆದುಕೊಳ್ಳಲೇ ಬೇಕು.ಆಸ್ಪತೆಯಲ್ಲಿ ಇಬ್ಬರು ಪೇದೆಗಳು ಇದ್ದರು.”ಏನ್ರಿ..ಆಕ್ಸಿಡೆಂಟ..ಯಾರು ಏನು”ಎಂಬ ವಿಚಾರಣೆ ಆರಂಭಿಸಿದರು.ಇವರ ಮನೆ ಹಾಳಾಗ..ಮೊದಲು ಚಿಕಿತ್ಸೆ ತಗೊಳೋಕು ಬಿಡಲ್ವಲ ಅಂದುಕೊಂಡೆ ಮನಸಲ್ಲಿ.
ನನ್ನ ದುರಾದೃಷ್ಟ,..ಆ ಪೇದೆಗಳು ಆಗಲೇ 70 ಪೆರ್ಸೆಂಟ್ ಟೈಟ್ ಆಗಿದ್ದರು.ಆಮೇಲೆ ಎಲ್ಲ ಹೇಳ್ತೀನಿ ಅಂತ ನನ್ನ ಪರಿಚಯ ಹೇಳಿದ ಬಳಿಕ ಆಯ್ತು ಸರ್…ಓಕೆ..ಸರ್ ಶುರು ಮಾಡಿಕೊಂಡರು .
ಡ್ರೆಸ್ಸಿಂಗ್ ಮಾಡ್ಬೇಕು ಬರ್ತಿರಾ..ಎಂದು ಆಸ್ಪತ್ರೆ ವ್ಯಕ್ತಿ ಗದರಿಸಿದಾಗಲೇ ನನಗೆ ನೆನಪಾದದ್ದು..ಇಲ್ಲೀಗ “ಪತ್ರಕರ್ತ”ನಡೆಯೋಲ್ಲ ಅನ್ನೊದು.
ಮೂಕ ಬಸವನಂತೆ ಹೆಜ್ಜೆಹಾಕಿದೆ.ಮೊದಲು ಕುಡುಕ ಪೇದೆಗಳಿಂದ ಹಾಗೂ ವಾಸನೆಯಿಂದ ತಪ್ಪಿಸಿಕೊಳ್ಳಬೇಕಿತ್ತು.ಸಾದ್ಯ ವಾಗದಿದ್ದರು ಬೇಗ ಬೇಗ ನೆಡೆದು ಡ್ರೆಸಿಂಗ್ ಮಂಚದಮೇಲೆ ಕುಳಿತೆ.ಅಲ್ಲೋ ರಕ್ತದ ಕಲೆಗಳು..ಇದ್ದುದರಲ್ಲೇ ಆ ಹಾಸಿಗೆಯಲ್ಲೂ ಎಲ್ಲಿ ಸ್ವಲ್ಪ ಉತ್ತಮ ಅನ್ನಿಸಿತೋ ಅಲ್ಲಿಕುಳಿತೆ..
ಆತ ಡ್ರೆಸ್ಸಿಂಗ್ ಮಾಡುವ ಮೊದಲು “ಸರ್..ಟಿ..ಕಾಫಿಗೆ ಏನಾದ್ರು”ಅಂದ.
ಇಲ್ಲಿತನಕ ಕುಡುಕರ ಸಹವಾಸದಲ್ಲಿ ರೋಸಿಹೋಗಿದ್ದ ನನಗೆ ಈತನ ಬಾಯಿಂದ ಟೀ.. coffee ಶಬ್ದ ಕೇಳಿದ್ದೆ ತಡ ಏನೋ ಒಂಥರಾ ನೆಮ್ಮದಿ ಎನ್ನಿಸಿ 50 ರೂ ಕೊಟ್ಟೆ.ಅದನ್ನವನು ಜೇಬಿಗೆ ಇಳಿಸಿ ಡ್ರೆಸ್ಸಿಂಗ್ ಸಾಮಗ್ರಿಗಳನು ತಗೊಂಡು ಮಂಚದ ಬಳಿ ಬಂದ.
ಡಿಕ್ಕಿ ಹೊಡೆದ ಬೈಕನವರು,ಎತ್ತಲು ಬಂದ ಇಬ್ಬರು ಕುಡುಕರು, ನಾನು ಪ್ರಯಾಣಿಸಿಬಂದಆಟೋದವನು..ಅಲ್ಲಿ ಆಗಲೇ ಕುಡಿದಿದ್ದ ಪೇದೆಗಳು…ಇವರನ್ನೆಲ್ಲ ನೋಡಿ ಜಿಗುಪ್ಸೆಗೊಂಡಿದ್ದ ನನಗೆ ಈಗ..ಆ ಡ್ರೆಸ್ಸಿoಗ್ ಮಾಡುವಾತ ಹತ್ತಿರ ಬಂದಾಗ ಆಕಾಶವೇ ಕಳಚಿಬಿದ್ದ ಅನುಭವ…ಈ ಎಲ್ಲರಿಗಿಂತಲೂ ಆತ ದೊಡ್ಡ ಕುಡುಕ ಆಗಿದ್ದ.ನನಗೆ ಎಷ್ಟು ಸಿಟ್ಟು ಬಂತೆಂದ್ರೆ ಆತನ ಹೆಸರು ಕೇಳಿದವನೆ”ಬೆಳಿಗ್ಗೆ ನಿನಗೆ ಇದೆ”ಎಂದು ಹೇಳಿ ಅಲ್ಲಿಂದ ಚಿಕಿತ್ಸೆ ಪಡೆಯದೆ ನೇರ ಮೆಡಿಕಲ್ ಶಾಪ್ ಗೆ ಬಂದು ನಿಯೋಸ್ಪ್ರಿನ್ ಪೌಡರ್ ತಗೊಂಡು ಮನೆಗೆ ಹೊರಟೆ.ಅಷ್ಟರಲ್ಲಾಗಲೇ ಅಲ್ಲಿಗೆ ಆಗ ನಮ್ಮ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಯುವಕನೊಬ್ಬ ಆತನ ಬೈಕ್ ತಗೊಂಡು ಅಲ್ಲಿಗೆ ಬಂದ.ವಿಷಯ ತಿಳಿತು ಅದಕ್ಕೆ ಆತಂಕದಿಂದ ಬಂದೆ ಅಂದ..
ಸರಿ,ಮೊದಲು ನನ್ನ ಮನೆಗೆ ಬಿಡು ಅಂದೆ.ಆತ ಸ್ವಲ್ಪ ಅನುಮಾನಿಸಿದ.ನನ್ನಿಂದ ಅಂತರ ಕಾಪಾಡಿಕೊಳ್ಳುತ್ತಿದ್ದ. “ಸರ್ ನೀವು ನನ್ನ ಬೈಕ್ ತಗೊಂಡು ಹೋಗಿ ಸರ್,..ನಾನು ಬೆಳಿಗ್ಗೆ ಬಂದು ವಾಪಸ್ ತಗೊಂಡು ಹೊಗ್ತೀನಿ”ಅಂದ.
ಅಲ್ಲೋ,..ನಂಗೆ ಈಗ ride ಮಾಡೋದು ಕಷ್ಟ ಡ್ರಾಪ್ ಮಾಡು ಅಂದೆ.
“ಸರ್ ಅದು..ಅದು..ಅಂತ” ತಲೆಕೆರೆದುಕೊಂಡ.ಏನಪ್ಪಾ ಅಂದೆ.
ಅದು..ಸ್ವಲ್ಪ ಡ್ರಿಂಕ್ಸ್ ಮಾಡಿದಿನಿ.ಅದ್ಕೆ.. ಸರ್ ಅಂದಾಗ ನಂಗೆ ಇನ್ನೇನು ಹುಚ್ಚು ಹಿಡಿಯೋದು ಒಂದು ಬಾಕಿ ಇತ್ತು.
ಒಟ್ನಲ್ಲಿ ರಾತ್ರಿ 11 ರ ಬಳಿಕ ಕುಕರಲ್ಲದವರು ಎಂದು ರಸ್ತೆಗೆ ಬರಬಾರದು,.. ಅನಿವಾರ್ಯವಾಗಿ ಬಂದ್ರು ನನಗಾದ ಸ್ಥಿತಿ ಬರದಂತೆ ನೋಡಿಕೊಳ್ಲಬೇಕು. ಮುಖ್ಯವಾಗಿ ಜೊತೆಗೆ ಕುಕುಕರಲ್ಲದ ವ್ಯಕ್ತಿ ಯೊಬ್ಬರನ್ನು ಜೊತೆ ಕರೆದುಕೊಂಡು ಹೋಗಿರಬೇಕು.
ಜಿ.ಎಂ.ಆರ್.ಆರಾಧ್ಯ