ನಿರ್ಭಯಾ ಮೇಲೆ ಅತ್ಯಾಚಾರ ನಡೆದು ಡಿ.16 ಕ್ಕೆ 7 ವರ್ಷ: ಡಿ. 16ಕ್ಕೇ ನೀಚರಿಗೆ ಗಲ್ಲುಶಿಕ್ಷೆ ?

ಡಿ. 12: ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಆತ್ಮಹತ್ಯೆ ಪ್ರಕರಣ ನಡೆದು ಡಿ. 16ಕ್ಕೆ 7 ವರ್ಷಗಳು. ನಾಲ್ವರು ನೀಚರಿಗೆ ಅಂದೇ ಅಂದರೆ ಬರುವ ಡಿ.16ರ ಸೋಮವಾರ ಗಲ್ಲು ಶಿಕ್ಷೆ ವಿಧಿಸಲಾಗುತ್ತಿದೆ.

ಈ ವರದಿಯ ಬೆನ್ನಲ್ಲೇ ಗಲ್ಲಿಗೇರಿಸುವ ಕಾರ್ಯಕ್ಕೆ ಇಬ್ಬರನ್ನು ಒದಗಿಸಬೇಕು ಎಂದು ಉತ್ತರ ಪ್ರದೇಶ ಪೊಲೀಸರಿಗೆ ತಿಹಾರ್ ಜೈಲಿನಿಂದ ಮನವಿ ಹೋಗಿದೆ.

ಸದ್ಯ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸುವ ಸಿಬ್ಬಂದಿ ಇಲ್ಲ. ಹೀಗಾಗಿ ಗಲ್ಲಿಗೇರಿಸುವ ಇಬ್ಬರು ವ್ಯಕ್ತಿಗಳನ್ನು ಉತ್ತರ ಪ್ರದೇಶದ ಮೀರತ್ ಜೈಲಿನಿಂದ ಅಥವಾ ಬಿಹಾರದ ಬಕ್ಸರ್ ಜೈಲಿನಿಂದಕಳುಹಿಸಿಕೊಡುವಂತೆ ತಿಹಾರ್ ಜೈಲು ಅಧಿಕಾರಿಗಳು ನಮಗೆ ಮನವಿ ಮಾಡಿದ್ದಾರೆ. ನಮ್ಮ ಇಲಾಖೆ ಗಲ್ಲಿಗೆ ಏರಿಸುವವರನ್ನು ಒದಗಿಸಲು ಸಿದ್ಧವಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಜೈಲು) ಆನಂದ್ ಕುಮಾರ್ ಅವರು ಹೇಳಿದ್ದಾರೆ.

ತಿಹಾರ್ ಜೈಲು ಅಧಿಕಾರಿಗಳು ಡಿಸೆಂಬರ್ 9ರಂದು ಫ್ಯಾಕ್ಸ್ ಮೂಲಕ ಮನವಿ ಸಲ್ಲಿಸಿದ್ದಾರೆ. ನಮ್ಮ ಬಳಿ ಇಬ್ಬರು ಗಲ್ಲಿಗೇರಿಸುವ ವರು ಇದ್ದು , ಅವರು ಕೇಳಿದಾಗ ಒದಗಿಸಲಾಗುವುದು ಎಂದು ಕುಮಾರ್ ತಿಳಿಸಿದ್ದಾರೆ.

ನಿರ್ಭಯಾ ಮೇಲೆ ಅತ್ಯಾಚಾರ ಹಾಗೂ ಕೊಲೆ ನಡೆದು ಡಿಸೆಂಬರ್ 16ಕ್ಕೆ 7ವರ್ಷ ವಾಗುತ್ತಿರುವ ಹಿನ್ನಲೆಯಲ್ಲಿ ಡಿಸೆಂಬರ್ 16ರಂದು ಕಾಮುಕರಿಗೆ ನೇಣಿನ ಕುಣಿಕೆ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ತಿಹಾರ್ ಜೈಲಿನ ಮೂಲಗಳ ಪ್ರಕಾರ ಜೈಲು ಆಡಳಿತಾಧಿಕಾರಿಗಳು ಈಗಾಗಲೇ 10 ನೇಣು ಹಗ್ಗಗಳನ್ನು ತಯಾರಿಸಲು ಸೂಚಿಸಿದ್ದು ಅವುಗಳು ಇನ್ನು ಎರಡು ದಿನಗಳಲ್ಲಿ ಜೈಲು ಅಧಿಕಾರಿಗಳ ಕೈ ಸೇರಲಿವೆ. ಇದರ ಬೆನ್ನಲ್ಲೇ ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಮುಖೇಶ್, ವಿನಯ್, ಅಕ್ಷಯ್ ಹಾಗೂ ಪವನ್ ಈ ನಾಲ್ಕು ಅಪರಾಧಿಗಳನ್ನು ಕೂಡ ಜೈಲಿಗೆ ವಾಪಸ್ ಕರೆತರಲಾಗಿದೆ.

ನಿಮಗೆ ನೇಣು ಹಾಕಲಾಗುತ್ತದೆ ಎಂಬ ವಿಷಯವನ್ನು ಆಗಸ್ಟ್ 27ರಂದೇ ಜೈಲು ಸಿಬ್ಬಂದಿಗಳು ಆಪಾದಿತರಿಗೆ ತಿಳಿಸಿದ್ದರು. ಈ ನಡುವೆ ರಾಷ್ಟ್ರಪತಿಗೆ ಹಾಗೂ ಕೇಂದ್ರ ಸರ್ಕಾರ ದೆಹಲಿ ಸರ್ಕಾರಕ್ಕೆ ಅವರುಗಳು ಸಲ್ಲಿಸಿದ್ದ ಅರ್ಜಿಯನ್ನೂ ಎಲ್ಲೆಡೆ ತಳ್ಳಿ ಹಾಕಿರುವುದರಿಂದ ನಿಮಗೆ ನೇಣು ಖಚಿತವಾಗಿದೆ ಎಂಬುದನ್ನೂ ಅವರುಗಳಿಗೆ ಮನವರಿಕೆ ಮಾಡಿಕೊಡಲಾಗಿದೆ.

ದಿನದ 24 ಗಂಟೆಯೂ ಇವರುಗಳು ಚಲನವಲನಗಳನ್ನು ಗಮನಿಸುತ್ತಿದ್ದ, ಇವರಿಗೆ ಆಹಾರ ನೀಡುವ ವ್ಯಕ್ತಿ ಹಾಗೂ ಜೈಲಿನ ವಾರ್ಡನ್ ಹೊರತುಪಡಿಸಿ ಇತರೆ ಯಾರಿಗೂ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ. ಜೊತೆಗೆ ತಮಿಳುನಾಡು ರಾಜ್ಯದ ಪೊಲೀಸರನ್ನೂ ಭದ್ರತೆಗೆ ನಿಯೋಜಿಸಲಾಗಿದೆ.

Leave a Reply

Your email address will not be published. Required fields are marked *