ಹೊತ್ತು ಹೊತ್ತಿನ ತುತ್ತಿಗೂ ಗತಿ ಇಲ್ಲದ ಆ ಕ್ರಿಕೆಟಿಗ ಇಂದು ವಿಶ್ವದ ನಂಬರ್ ಒನ್ ಬೌಲರ್ ಹಾಗೂ ಕೋಟ್ಯಾಧಿಪತಿ
ತನ್ನ ಐದನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ವ್ಯಕ್ತಿಗೆ ಕ್ರಿಕೆಟ್ ಹುಚ್ಚು ಕಡಿಮೆಯಾಗಲೇ ಇಲ್ಲ. ತಂದೆ ಬದುಕಿರುವಾಗ ಹೇಗೋ ತುತ್ತಿಗೆ ಕೊರತೆ ಇರಲಿಲ್ಲ. ಆದರೆ ತಂದೆಯ ನಿಧನದ ನಂತರ ಪರಿಸ್ಥಿತಿ ಮತ್ತಷ್ಟು ಕೆಟ್ಟು ಹೋಯಿತು. ಮಗನ ಕ್ರಿಕೆಟ್ ಮೇಲಿನ ಆಸಕ್ತಿಯನ್ನು ಗಮನಿಸಿದ ತಾಯಿ ಮಗ ಕಾಡಿ ಬೇಡಿದನೆಂದು ಒಮ್ಮೆ ನೈಕ್ ಶೋ ರೂಮ್ ಗೆ ಶೂ ಕೊಡಿಸಲೆಂದು ತೆರಳಿದ್ದರು. ಆದರೆ ಆ ಶೂನ ಬೆಲೆ ಕೇಳಿ ಸುಸ್ತಾಗಿ ಹೋಗಿದ್ದರು. ಆ ತಾಯಿ ಅಂದೇ ಶಪಥ ಮಾಡಿದರು ನನ್ನ ಮಗನಿಗೆ ಮುಂದೊಮ್ಮೆ ಈ ಶೂಗಳನ್ನು ಕೊಡಿಸಿಯೇ ತೀರುತ್ತೇನೆ ಮತ್ತು ಅಂದಿನಿಂದ ಆತ ಇದೇ ಶೂಗಳನ್ನು ಹಾಗೂ ಇದಕ್ಕಿಂತಲೂ ಬೆಲೆ ಬಾಳುವ ಶೂಗಳನ್ನು ಹಾಕಿಕೊಳ್ಳುವಂತೆ ಮಾಡುತ್ತೇನೆ ಎಂದು .
ಒಂದೇ ಒಂದು ಟಿ ಶರ್ಟ್ ಹಾಗೂ ಒಂದೇ ಒಂದು ಜೊತೆ ಸಾಮಾನ್ಯ ಶೂಗಳನ್ನು ಇಟ್ಟುಕೊಂಡೇ ಕ್ರಿಕೆಟ್ ಅಭ್ಯಾಸ ಆರಂಭಿಸಿದ. ಆ ವ್ಯಕ್ತಿ ಇಂದು ಕೋಟಿ ಕೋಟಿ ರೂಗಳಿಗೆ ಒಡೆಯ. ಆತನೀಗ ವಿಶ್ವದ ನಂಬರ್ ಒನ್ ಬೌಲರ್. ಈತ ಯಾರು ಗೊತ್ತೇ ಇವರೇ ಭಾರತದ ಹೆಮ್ಮೆಯ ವೇಗಿ ಜಸ್ಪೀತ್ ಬೂಮ್ರಾ .
ವ್ಯಕ್ತಿಯೋರ್ವ ಪ್ರಾಮಾಣಿಕ ಹಾಗೂ ಸಕಾರಾತ್ಮಕ ಸತತ ಪ್ರಯತ್ನಗಳಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಕಣ್ಣೆದುರಿಗಿರುವ ಬೂಮ್ರಾ ಗಿಂತ ಉದಾಹರಣೆ ಬೇಕೆ ?
ಲಂಡನ್ನಲ್ಲಿ ನಡೆದ ಸ್ಪೋರ್ಟ್ಸ್ ಬಿಸಿನೆಸ್ ಸಮ್ಮೇಳನದಲ್ಲಿ ಮುಂಬೈ -ಇಂಡಿಯನ್ಸ್ ತಂಡದ ಒಡತಿ ನೀತಾ ಅಂಬಾನಿ ಬೂಮ್ರಾ ಕ್ರಿಕೆಟ್ ಜರ್ನಿ ಕುರಿತ ವಿಡಿಯೋವೊಂದನ್ನು ಬಿಡುಗಡೆ ಮಾಡಿದರು. ಈ ವಿಡಿಯೋದಲ್ಲಿ ಬೂಮ್ರಾ ಅವರ ಕ್ರಿಕೆಟ್ ಪಯಣವನ್ನು ವಿವರಿಸಲಾಗಿದೆ.
ಜಸ್ಪೀತ್ ಬೂಮ್ರಾ ತಾಯಿ ದಲ್ಜಿತ್ ಬುಮ್ರಾ ತನ್ನ ಮಗನ ಕನಸಿಗೆ ನೀರೆರೆದು ಹೇಗೆ ಬೆಳೆಸಿದರು ಎಂಬುದನ್ನು ವಿಧಿಸಿರುವುದಲ್ಲದೇ ಕಠಿಣ ಹಾಗೂ ಪ್ರಾಮಾಣಿಕ ಮತ್ತು ನಿಷ್ಠತೆಯ ಅಭ್ಯಾಸ ವ್ಯಕ್ತಿಯೊಬ್ಬನ ಸಾಧನೆಗೆ ನೂರಕ್ಕೆ ನೂರು ಕಾರಣವಾಗುತ್ತದೆ ಎಂಬುದೇ ಈ ವಿಡಿಯೋದ ತಿರುಳು .
ಐಪಿಎಲ್ ಹೇಗೆ ಯುವ ಪ್ರತಿಭೆಗಳಿಗೆ ಒಂದು ಅವಕಾಶ ಎಂಬುದಕ್ಕೂ ಬೂಮ್ರಾ ಉದಾಹರಣೆಯಾಗಿದ್ದಾರೆ. ಬೂಮ್ರಾ ನನ್ನು ಗುರುತಿಸಿ ಆತನ ಪ್ರತಿಭೆಯನ್ನು ಹುಡುಕಿ ಮುಂಬೈ ಇಂಡಿಯನ್ಸ್ ತಂಡ ಅವಕಾಶ ನೀಡಿತ್ತು. ಮೊದಲ ಬಾರಿಗೆ ತನ್ನ ಮಗ ಕ್ರಿಕೆಟ್ ಆಡುತ್ತಿದ್ದ ದೃಶ್ಯಗಳು ಟಿವಿ ಪರದೆಯ ಮೇಲೆ ಬಂದಾಗ ಬೂಮ್ರಾ ತಾಯಿ ಕಣ್ಣಲ್ಲಿ ಸಂತೋಷದ ಕಣ್ಣೀರು ಹರಿದಿದ್ದವು. ತಿನ್ನಲು ಹೊತ್ತೊತ್ತಿಗೆ ಊಟವೇ ಇಲ್ಲದ ಪರಿಸ್ಥಿತಿಯಲ್ಲಿದ್ದ ಬೂಮ್ರಾ ಈ ಮಟ್ಟಕ್ಕೆ ಬೆಳೆದಾಗ ನನಗೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ ಎಂದು ಈ ವಿಡಿಯೋದಲ್ಲಿ ಬೂಮ್ರಾ ತಾಯಿ ವಿವರಿಸಿ ಕಷ್ಟಪಟ್ಟು ಅಭ್ಯಾಸ ಮಾಡುವ ಹಾಗೂ ಶ್ರದ್ಧೆ ತೋರುವ ಹುಡುಗರಿಗೆಲ್ಲ ಶುಭ ಹಾರೈಸಿದ್ದಾರೆ. ಹಾಗೂ ಅವರುಗಳಿಗೂ ತಮ್ಮ ಮಗನಂತೆ ಒಳ್ಳೆಯ ಭವಿಷ್ಯ ದೊರೆಯಲೆಂದು ಹಾರೈಸಿದ್ದಾರೆ .