ಹೆಲ್ತ್ ಸರ್ವೆಗೆ ಹೋದರೆ NRC ಸರ್ವೆಗೆ ಬಂದಿದ್ದೀರಾ ಎಂದು ಹಲ್ಲೆ ನಡೆಸಿದ ಸಾಧಿಕ್ ನಗರ ನಿವಾಸಿಗಳು.

ಬೆಂಗಳೂರು :2/4/2020 ಕರೋನ ಹಿನ್ನೆಲೆಯಲ್ಲಿ ಹೆಲ್ತ್ ಸರ್ವೇ ಮಾಡಲು ತೆರಳಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿ
“ಇವರು ಬಂದಿರುವುದು ಹೆಲ್ತ್ ಸರ್ವೆಗಲ್ಲ NRC ಮಾಹಿತಿ ಪಡೆಯಲು” ಎಂದು ಸುಳ್ಳು ಸುದ್ದಿ ಹಬ್ಬಿಸಿರುವ ಘಟನೆ ಇಲ್ಲಿನ ಸಾದಿಕ್ ನಗರದಲ್ಲಿ ನಡೆದಿದೆ.
ಕರೋನಾ ಪಾಸಿಟಿವ್ ಈ ಪ್ರದೇಶದ ವ್ಯಕ್ತಿಗಳಿಬ್ಬರಿಗೆ ಇರುವುದು ಖಚಿತಪಟ್ಟ ಬಳಿಕ ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರನ್ನು ಸುತ್ತಲಿನ ಪ್ರದೇಶದ ಮನೆಗಳ ವಿವರಗಳನ್ನು ಹಾಗೂ ಅಲ್ಲಿರುವವರ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸಲು ಕಳುಹಿಸಿತ್ತು .ಈ ವೇಳೆ ಇಲ್ಲಿನ ಮಸೀದಿಯೊಂದರಿಂದ ಜನರ ದಿಕ್ಕು ತಪ್ಪಿಸುವ ಹೇಳಿಕೆಯೊಂದು ಹೊರಬಂತು. “ಇವರುಗಳು ಆರೋಗ್ಯ ಕಾರ್ಯಕರ್ತೆಯರ ಹೆಸರಲ್ಲಿ NRC ಮಾಹಿತಿ ಸಂಗ್ರಹಿಸುತ್ತಾರೆ. ಯಾವುದೇ ಮಾಹಿತಿಯನ್ನು ಕೊಡಬೇಡಿ. ಅವರಲ್ಲಿನ ದಾಖಲೆಗಳನ್ನು ಕಸಿದುಕೊಳ್ಳಿ” ಎಂಬ ಆದೇಶ ಹೊರ ಬಂತು. ಈ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯಾದ ಕೃಷ್ಣವೇಣಿ ಹಾಗೂ ತಂಡದವರ ಮೇಲೆ ದೈಹಿಕ ಹಲ್ಲೆಯನ್ನೂ ನಡೆಸಿ ಅವರಲ್ಲಿನ ದಾಖಲೆಗಳನ್ನು ಕಸಿದುಕೊಂಡು ಹೊರಗೆ ಅಟ್ಟಿದ ಘಟನೆ ನಡೆದಿರುವುದನ್ನು ಸ್ವತಃ DCM ನಾರಾಯಣಸ್ವಾಮಿಯವರು ವಿವರಿಸಿದ್ದಾರೆ .ಹಲ್ಲೆ ನಡೆಸಿದವರನ್ನು ತಕ್ಷಣವೇ ಬಂಧಿಸಲು ಸೂಚನೆ ಕೊಟ್ಟಿದ್ದೇನೆ ಎಂದು ತಿಳಿಸಿದ ಅವರು ಆಶ್ಚರ್ಯ ಎನ್ನುವಂತೆ ಈ ಭಾಗದ DHO ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.
ಈ ರೀತಿ ಹೆಲ್ತ್ ಸರ್ವೆಗಳನ್ನು NRC ಮಾಹಿತಿ ಎಂದು ವಿವಾದಕ್ಕೆ ಇಳಿಸಿ ಸರ್ವೆಗೆ ಅಡ್ಡಿಯುಂಟು ಮಾಡಿರುವುದರ ಹಿಂದಿನ ಉದ್ದೇಶವಾದರೂ ಏನು ಎಂಬುದು ಈಗ ಯಕ್ಷ ಪ್ರಶ್ನೆಯಾಗಿದೆ .

Leave a Reply

Your email address will not be published. Required fields are marked *