ಹಿಂದೂ ಧರ್ಮದಲ್ಲಿ ಸತ್ತವರನ್ನು ದಹನ ಮಾಡುವುದರ ಹಿಂದೆ ಇರುವ ರಹಸ್ಯವೇನು ಗೊತ್ತಾ..?ತಿಳಿಯಲು ಈ ಲೇಖನವನ್ನು ಓದಿ…

ಜಗತ್ತಿನಾದ್ಯಂತ ಅನೇಕ ಧರ್ಮಗಳಿಗೆ ಸೇರಿದವರು ತಮ್ಮ ಆಚಾರ ಸಂಪ್ರದಾಯ ಪಾಲಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಆದರೆ ಯಾವುದೇ ಧರ್ಮವನ್ನು ತೆಗೆದುಕೊಂಡರೂ ಅದರಲ್ಲಿ ತಮ್ಮ ಧರ್ಮದವರು ತೀರಿಕೊಂಡರೆ ಹೂಳುವುದೋ, ಸುಡುವುದನ್ನೋ ಮಾಡುತ್ತಾರೆ. ಅವರ ಆಚಾರದಂತೆ ಆ ಕಾರ್ಯಕ್ರಮ ಮಾಡುತ್ತಾರೆ. ಇನ್ನು ಹಿಂದೂ ಧರ್ಮದಲ್ಲಾದರೆ ಸತ್ತ ವ್ಯಕ್ತಿಗಳನ್ನು ದಹನ ಮಾಡುತ್ತಾರೆ.

ಬದುಕಿದ್ದಾಗ ಮನುಷ್ಯ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಷ್ಟೋ ಇಷ್ಟೋ ಪಾಪಗಳನ್ನು ಮಾಡಿರುತ್ತಾನೆ ಅಲ್ಲವೇ. ಇನ್ನು ಕೆಲವರು ನಿರಂತರ ಪಾಪಗಳನ್ನು ಮಾಡುತ್ತಿರುತ್ತಾರೆ. ಆದರೆ ಯಾರಾದರೂ ಮೃತಪಟ್ಟರೆ ಹಿಂದೂ ಧರ್ಮದಲ್ಲಿ ಮಾತ್ರ ಅವರನ್ನು ಆಚಾರದ ಪ್ರಕಾರ ದಹನ ಮಾಡುತ್ತಾರೆ. ಆ ರೀತಿ ಅಗ್ನಿಯಲ್ಲಿ ಹಾಕಿ ದಹನ ಮಾಡುವುದರಿಂದ ಆತನಿಗೆ ಇರುವ ಮರುಜನ್ಮದಲ್ಲಾದರೂ ಆತ ಪಾಪಗಳನ್ನು ಮಾಡದಂತೆ ಪರಿಶುದ್ಧನಾಗಿ ಬದುಕುತ್ತಾನಂತೆ.

ಸತ್ತ ವ್ಯಕ್ತಿಯ ದೇಹವನ್ನು ಆತ್ಮ ಹಾಗೆಯೇ ಅಂಟಿಸಿಕೊಂಡು ಇರುತ್ತದೆ. ಆತ್ಮ ಆ ದೇಹವನ್ನು ಬಿಡಬೇಕೆಂದರೆ ಅದನ್ನು ದಹನ ಮಾಡಬೇಕು. ಆ ರೀತಿ ಮಾಡಿದರೆ ದೇಹದಿಂದ ಆತ್ಮ ಬಿಟ್ಟು ಬೇರೊಂದು ದೇಹವನ್ನು ನೋಡಿಕೊಳ್ಳುತ್ತದೆ. ದಹನ ಮಾಡದಷ್ಟು ಹೊತ್ತು ಆತ್ಮ ಅದೇ ರೀತಿ ಅಲೆದಾಡುತ್ತಾ ಇರುತ್ತದಂತೆ.

ಆದಕಾರಣ ದಹಿಸುತ್ತಾರೆ. ಇನ್ನು ಯಾರನ್ನು ದಹಿಸಿದರೂ ನೀರಿನ ಪ್ರವಾಹ ಇರುವ ನದಿ, ಕೆರೆಗಳ ಬಳಿ ಆ ಕೆಲಸ ಮಾಡುತ್ತಾರೆ. ಇದರಿಂದ ಆತ್ಮ ಪರಿಶುದ್ಧವಾಗುತ್ತದೆ ಎಂದು ನಂಬುತ್ತಾರೆ.ಇದರಿಂದ ಆತ್ಮ ಪರಿಶುದ್ಧವಾಗುತ್ತದೆ ಎಂಬುದು ನಂಬಿಕೆ. ಈ ಹಿನ್ನೆಲೆಯಲ್ಲಿ ದಹನ ಮಾಡಿದ ಬಳಿಕ ಬೂದಿಯನ್ನು ನೀರಿನಲ್ಲಿ ಬಿಡಲಾಗುತ್ತದೆ.

ಈ ರೀತಿ ಮಾಡುವುದರಿಂದ ಆತ್ಮ ಪಂಚಭೂತಗಳಲ್ಲಿ ಬೆರೆಯುತ್ತದೆ. ಆ ಬಳಿಕ 13ನೇ ದಿನ ಪಿಂಡ ಪ್ರದಾನ ಮಾಡಲಾಗುತ್ತದೆ. ಇದರಿಂದ ಆತ್ಮಕ್ಕೆ ವಿಮುಕ್ತಿ ದೊರಕಿ ಇನ್ನೊಂದು ದೇಹದಲ್ಲಿ ಸೇರುತ್ತದೆ. ಈ ಒಟ್ಟಾರೆ ಪ್ರಕ್ರಿಯನ್ನು ಹಿಂದೂಗಳು ಅಂತಿಮ ಸಂಸ್ಕಾರ ಎಂದು ಕರೆಯಲಾಗುತ್ತದೆ.

Leave a Reply

Your email address will not be published. Required fields are marked *