ಸ್ವತಂತ್ರ ಸ್ಪರ್ಧೆಯೇ ಸುಮ ಲತಾ ಅವರಿಗೆ ಅನುಕೂಲ

ಒಂದು ವಿಧದಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿರುವುದು ಸಾಕಷ್ಟು ರೀತಿಯಲ್ಲಿ ಅನುಕೂಲ ಪರಿಸ್ಥಿತಿ ನಿರ್ಮಿಸಿದೆ.

ಮಂಡ್ಯ ಲೋಕಸಭೆಗೆ ಸುಮಲತಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಒಂದು ವಿಧದಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿರುವುದು ಸಾಕಷ್ಟು ರೀತಿಯಲ್ಲಿ ಅನುಕೂಲ ಪರಿಸ್ಥಿತಿ ನಿರ್ಮಿಸಿದೆ. ಒಂದು ವೇಳೆ ಅವರಿಗೆ ರಾಜಕೀಯ ಪಕ್ಷವೊಂದರಿಂದ ಟಿಕೆಟ್ ಲಭಿಸದಿದ್ದರೆ ಅವರ ಪರವಾಗಿ ಪ್ರಚಾರಕ್ಕೆ ಇಳಿಯಲು ಚಿತ್ರರಂಗದ ಅನೇಕರು ಹಿಂದೇಟು ಹಾಕುತ್ತಿದ್ದರೇನೋ ?

ನಾವು ಸುಮಲತಾ ಪರವಾಗಿ ಪ್ರಚಾರಕ್ಕೆ ಬರುವೆವು ಎಂದು ನಟ ನಟಿಯರು

ಈಗ ಪಕ್ಷಗಳನ್ನು ಹೊರತುಪಡಿಸಿ ನಾವು ಸುಮಲತಾ ಪರವಾಗಿ ಪ್ರಚಾರಕ್ಕೆ ಬರುವೆವು ಎಂದು ನಟ ನಟಿಯರು ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹೇಳುತ್ತಿದ್ದು ನಮಗೆ ಪಕ್ಷಕ್ಕಿಂತ ಅಂಬರೀಷ್ ಅವರ ಮೇಲಿನ ಅಭಿಮಾನ ಹಾಗೂ ಹೆಮ್ಮೆಯಿಂದ ಸುಮಲತಾ ಬೆನ್ನಿಗೆ ನಿಲ್ಲುತ್ತೇವೆ ಎಂದು ಹೇಳಬಹುದಾಗಿದೆ .

ಬಹುಶಃ ಇದೇ ಕಾರಣಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಜನಪ್ರಿಯ ನಟರುಗಳಾದ ಯಶ್, ದರ್ಶನ್,ರಾಕ್ಲೈನ್ ವೆಂಕಟೇಶ್ ಮುಂತಾದವರು ಪ್ರಚಾರದಲ್ಲಿ ತೊಡಗುವ ನಿರೀಕ್ಷೆಗಳಿವೆ. ಈ ನಡುವೆ ಬಿಜೆಪಿ ಸಹ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇರಲು ನಿರ್ಧರಿಸಿರುವುದು ಸುಮಲತಾ ಅವರಿಗೆ ಗೆಲುವಿನ ಭರವಸೆ ಹೆಚ್ಚಿಸಿದೆ.ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಂಬರೀಶ್ ಹೆಂಡತಿ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ನೀರಾಕರಿಸಲ್ಪಟ್ಟಿದ್ದು, ಸ್ವಂತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿದೆ. ಈ ನಡುವೆಯೂ ಅವರು ನಿರಂತರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಈಗ ಸುಮಲತಾ ಬೆನ್ನಿಗೆ ಅಂಬರೀಷ್ ಸ್ಟಾರ್ ದರ್ಶನ್ ನಿಂತಿದ್ದಾರೆ .

ದರ್ಶನ್ ಅವರ ಬೆಂಬಲ ಸಿಕ್ಕಿರುವುದು ಸುಮಲತಾಗೆ ಆನೆಬಲ ಸಿಕ್ಕಂತಾಗಿದೆ.

ಸುಮಲತಾ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂದಾಗಲೇ ಎಲ್ಲರ ದೃಷ್ಟಿ ಸ್ಯಾಂಡಲ್ ವುಡ್ ಮೇಲೇ ನೆಟ್ಟಿತ್ತು. ಅಂಬರೀಶ್ ಕನ್ನಡ ಚಿತ್ರರಂಗದಲ್ಲಿ ರಾಜಕೀಯಕ್ಕೆ ಕಾಲಿಟ್ಟಿದ್ದರು ಅವರು ಅಜಾತ ಶತ್ರುವಿ ನಂತಿದ್ದರು.ದರ್ಶನ್, ಯಶ್, ಸುದೀಪ್ ಸೇರಿ ಕನ್ನಡ ಚಿತ್ರರಂಗದ ಖ್ಯಾತ ನಟರು ಅಂಬರೀಶ್ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಹಾಗಾಗಿ ಸುಮಲತಾ ಚುನಾವಣೆಗೆ ನಿಲ್ಲುತ್ತಾರೆ ಎಂದಾಗ ಚಿತ್ರರಂಗ ಅವರ ಬೆನ್ನಿಗೆ ನಿಲ್ಲಲಿದೆ ಎಂದು ರಾಜಕೀಯ ತಜ್ಞರು ಭವಿಷ್ಯ ನುಡಿದಿದ್ದರು .
ನಟಿ ಸುಮಲತಾ ಬೆಂಬಲಕ್ಕೆ ನಿಂತ ಮೆಗಾ ಸ್ಟಾರ್ ಚಿರಂಜೀವಿ ರಜನಿಕಾಂತ್ ?
ಈಗ ಅದು ನಿಜವಾಗಿದೆ ದರ್ಶನ್ ಸುಮಲತಾಗೆ ಬೆಂಬಲ ನೀಡುವುದಾಗಿ ಅದಕೃತ ಘೋಷಣೆ ಮಾಡಿದ್ದಾರೆ. ಅಂಬರೀಶ್ ಅವರು ಮಂಡ್ಯದಿಂದ ಕಣಕ್ಕೆ ನಿಂತಾಗ ಪ್ರಚಾರಕ್ಕೆ ಹೋಗಿದ್ದೆ ಎಂದಿರುವ ಅವರು ಅಪ್ಪಾಜಿಯವರು ಚುನಾವಣೆಗೆ ನಿಂತಾಗ ನಾನು ಅವರ ಬೆಂಬಲಕ್ಕೆ ನಿಂತಿದ್ದೆ. ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದೆ.

ಸುಮಲತಾ ಪರ ಪ್ರಚಾರ ನಡೆಸುವುದು ನನ್ನ ಕರ್ತವ್ಯ ನನ್ನ ಆಪ್ತರು ಎಣಿಸಿದ್ದವರಿಗೆ ಪ್ರಚಾರ ಮಾಡಿಕೊಟ್ಟಿದ್ದೇನೆ. ಅದೇ ರೀತಿ ಸುಮಲತಾ ಅವರು ಕರೆದರೆ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ ಎನ್ನುವ ಮೂಲಕ ಬೆಂಬಲ ಸೂಚಿಸಿದ್ದಾರೆ. ದರ್ಶನ್ ಅವರ ಬೆಂಬಲ ಸಿಕ್ಕಿರುವುದು ಸುಮಲತಾಗೆ ಆನೆಬಲ ಸಿಕ್ಕಂತಾಗಿದೆ. ಸುಮಲತಾಗೆ ಮಂಡ್ಯದಿಂದ ಕಾಂಗ್ರೆಸ್ ಟಿಕೆಟ್ ಸಿಕ್ಕರೆ ಅದು ಸಿದ್ದರಾಮಯ್ಯ ಅವರಿಂದ ಎನ್ನುವ ಮಾತಿತ್ತು .ಆದರೆ ಸಿದ್ದರಾಮಯ್ಯ ಅವರೇ ಸುಮಲತಾಗೆ ಟಿಕೆಟ್ ಕೊಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದ್ದರೂ ಇದು ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿತ್ತು. ಒಮ್ಮೊಮ್ಮೆ ಕಾಂಗ್ರೆಸ್ನಿಂದ ಟಿಕೆಟ್ ಸಿಗದಿದ್ದರೆ ಅವರು ಪಕ್ಷೇತರರಾಗಿ ನಿಲ್ಲುವ ಆಲೋಚನೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಸುಮಲತಾ ಪರ ಪ್ರಚಾರ ನಡೆಸಿದರೆ ಒಂದಷ್ಟು ಮತಗಳು ಸುಮಲತಾ ತೆಕ್ಕೆಗೆ ಬೀಳಲಿವೆ.

Leave a Reply

Your email address will not be published. Required fields are marked *