ಸೋಮೇಶ್ವರ ವಿದ್ಯಾಲಯದಲ್ಲಿ ಕನಕ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವ | ಜನಮಿಡಿತ ಸಂಪಾದಕ ಜಿ. ಎಂ. ಆರ್. ಆರಾಧ್ಯ ಅವರಿಗೆ ಸನ್ಮಾನ
ದಿನಾಂಕ 28/11/18 ರಂದು ಶ್ರೀ ಸೋಮೇಶ್ವರ ವಿದ್ಯಾಲಯ ವಸತಿಯುತ ಶಾಲೆ, ಗೋಣಿವಾಡ,
ಇಲ್ಲಿ ಕನಕ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀಯುತ ಜಿ.ಎಂ.ಆರಾಧ್ಯ, ಸಂಪಾದಕರು, ಜನಮಿಡಿತ ಕನ್ನಡ ದಿನ ಪತ್ರಿಕೆ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಇವರು ಮಕ್ಕಳಿಗೆ ಕನಕದಾಸರ ಚಿಂತನೆಗಳನ್ನು ಮತ್ತು ಕನ್ನಡ ಅಭಿಮಾನ ಹಾಗೂ ದೇಶಾಭಿಮಾನವನ್ನು ಬೆಳಸಿಕೊಳ್ಳಬೇಕೆಂದು ಮಕ್ಕಳಿಗೆ ಇಷ್ಟವಾಗುವಂತೆ ಮತ್ತು ಮನಮುಟ್ಟುವಂತೆ ಪುಟ್ಟ ಕತೆಯೊಂದಿಗೆ ಮಕ್ಕಳನ್ನು ಹುರಿದುಂಬಿಸಿದರು.
ಶಾಲಾ ಗೌರವ ಕಾರ್ಯದರ್ಶಿಗಳಾದ ಶ್ರೀ ಕೆ. ಎಂ. ಸುರೇಶ್ ರವರು ಮಕ್ಕಳೊಂದಿಗೆ ಬೆರೆತು ಪ್ರಶ್ನಾವಳಿಯ ಮೂಲಕ ಸಂವಾದವನ್ನು ನಡೆಸುತ್ತಾ ಮಕ್ಕಳ ಗ್ರಹಿಕೆ ಮತ್ತು ಭಾಗವಹಿಸುವಿಕೆಯನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡಿದರು. ಪ್ರಾಥಮಿಕ ವಿಭಾಗದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವು, ಅದರಲ್ಲಿಯೂ ಕನಕದಾಸರ ಜೀವನ ವೃತ್ತಾಂತದ ರೂಪಕವಂತೊ ತುಂಬಾ ಅಚ್ಚು ಕಟ್ಟಾಗಿ ಮೂಡಿಬಂದಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿಗಳಾದ ಹರೀಶ್ ಬಾಬು ಮತ್ತು ಶಾಲೆಯ ಪ್ರಾಂಶುಪಾಲರಾದ ವೀಣಾ ಪಿ. ಹೆಚ್. ಉಪಸ್ಥಿತರಿದ್ದರು. ಶಿಕ್ಷಕಿ ಮಮತಾ ರವರು ಸ್ವಾಗತಿಸಿದರು ಕುಮಾರಿ ಕಾವ್ಯ ರವರು ವಂದಿಸಿದರು ಶ್ರೀಮತಿ ಪಲ್ಲವಿ ರವರು ನಿರೂಪಿಸಿದರು.
ಇದೆ ಸಂಧರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜನಮಿಡಿತ ಸಂಪಾದಕ ಜಿ. ಎಂ. ಆರ್. ಆರಾಧ್ಯ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.