ಸುಮಲತಾ ಅವರಿಗೀಗ ಬಂದಿದೆ 100 ಆನೆ ಬಲ

ರಾಜ್ಯದ ಗಮನಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರ ಪ್ರತಿಷ್ಠಿತ ಎನ್ನಿಸಿದ್ದು ಅಲ್ಲಿ ಜೆ.ಡಿ.ಎಸ್.ನಿಂದ ದೇವೇಗೌಡರ ಮೊಮ್ಮೊಗ ನಿಖಿಲ್ ಸ್ಪರ್ದಿಸಿದ್ದರೆ ಮತ್ತೊಂದೆಡೆ ಸುಮಲತಾ ಅಂಬರೀಷ್ ಸ್ವತಂತ್ರ ಅಭ್ಯರ್ಥಿ.
ಸುಮಲತಾ ಬೆನ್ನಿಗೆ ಸಾಕಸ್ಟು ಅಭಿಮಾನಿಗಳು, ಕಾರ್ಯಕರ್ತರು ನಿಂತಿದ್ದಾರೆ. ಇದೀಗ ಬಿಜೆಪಿ ಸಹ ತನ್ನ ಅಭ್ಯರ್ಥಿ ಹಾಕದಿರಲು ತೀರ್ಮಾನಿದೆ.ಇದರಂದ ಸುಮಲತಾ ಅವರಿಗೆ 100 ಆನೆ ಬಲ ಬಂದಂತಾಗಿದೆ.

ರಾಜ್ಯದ ಎಲ್ಲ ಇಪ್ಪತ್ತೆಂಟು ಕ್ಷೇತ್ರಗಳಿಗೂ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಭಾವಿಸಲಾಗಿತ್ತು ಆದರೆ ಮೈತ್ರಿ ಸರ್ಕಾರದ ಧರ್ಮದಂತೆ ಮಂಡ್ಯ ಲೋಕಸಭೆ ಕ್ಷೇತ್ರವನ್ನು ಕಾಂಗ್ರೆಸ್ ಜೆಡಿಎಸ್ಗೆ ಬಿಟ್ಟುಕೊಟ್ಟಿದೆ .
ಹೀಗಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ನಟಿ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸಲು ನಿರ್ಧರಿಸಿರುವ ಕೇಂದ್ರ ಬಿಜೆಪಿ ನಾಯಕರು ಅಭ್ಯರ್ಥಿಯನ್ನು ಹಾಕದಿರಲು ನಿರ್ಧರಿಸಿದ್ದಾರೆ .
ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಹೆಸರನ್ನು ಘೋಷಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಸಿಗುತ್ತದೆ ಎಂದು ನಿರೀಕ್ಷಿಸಿದ್ದ ಸುಮಲತಾ ಆಸೆಗೆ ತಣ್ಣೀರೆರೆಚಿದಂತಾಗಿದೆ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಿರುವ ಬಿಜೆಪಿ ಮಂಡ್ಯದಲ್ಲಿ ಸುಮಲತಾ ಅವರಿಗೆ ಬೆಂಬಲ ನೀಡಲು ನಿರ್ಧರಿಸಿದೆ

ಸುಮಲತಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಸ್ಪಷ್ಟವಾಗಿದೆ ಹೀಗಾಗಿ ಬಿಜೆಪಿ ಹೈಕಮಾಂಡ್ ಸುಮಲತಾ ಬೆಂಬಲಕ್ಕೆ ಸೂಚಿಸಿದೆ ಈ ಹಿನ್ನೆಲೆಯಲ್ಲಿ ಇದು ಸುಮಲತಾ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ .ಅನುಕಂಪದ ಅಲೆಯ ಲಾಭ ಪಡೆಯುತ್ತಿರುವ ಸುಮಲತಾಗೆ ಈಗಾಗಲೇ ಭರ್ಜರಿ ಬೆಂಬಲ ಸಿಕ್ಕಿದೆ ಸ್ಥಳೀಯ ನಾಯಕರೆಲ್ಲರೂ ಸುಮಲತಾ ಬೆಂಬಲಕ್ಕೆ ನಿಂತಿದ್ದಾರೆ ಬಿಜೆಪಿ ಕೂಡ ನಟಿಯ ಬೆನ್ನಿಗೆ ನಿಂತಿದ್ದು ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ .

Leave a Reply

Your email address will not be published. Required fields are marked *