ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಿಂದ ಪದಕ ಸ್ವೀಕರಿಸಲು ಈ ಕಾನೂನು ವಿದ್ಯಾರ್ಥಿನಿ ನಿರಾಕರಿಸಿದ್ದು ಏಕೆ ಗೊತ್ತೇ…?

ದೆಹಲಿಯಲ್ಲಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಎಲ್ ಎಲ್ ಬಿ ಪದವಿಯಲ್ಲಿ ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿನಿಯೊಬ್ಬರು ಮುಖ್ಯ ನ್ಯಾಯಮೂರ್ತಿಗಳಿಂದ ಸ್ವರ್ಣಪದಕ ಪಡೆಯಲು ನಿರಾಕರಿಸಿರುವ ಘಟನೆ ಕಾನೂನು ವಿಶ್ವವಿದ್ಯಾಲಯದಲ್ಲಿ ನಡೆದಿದೆ.

ಹೌದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಕಾನೂನು ಪರೀಕ್ಷೆಯಲ್ಲಿ ರಾಂಕ್ ಪಡೆದ ವಿಜೇತರಿಗೆ ಪದಕಗಳು ಹಾಗೂ ಪ್ರಶಸ್ತಿಯನ್ನು ಪ್ರಧಾನ ಮಾಡುವ ಕಾರ್ಯಕ್ರಮವಿತ್ತು. ಆದರೆ ಪ್ರಥಮ ರಾಂಕ್ ಗಳಿಸಿ ಸ್ವರ್ಣ ಪದಕ್ಕೆ ಭಾಜನರಾಗಿದ್ದ ವಿದ್ಯಾರ್ಥಿನಿ ಕಾರ್ವಾ ಅವರು ಈ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದಾರೆ. ಇದಕ್ಕೆ ಅವರು ಗೈರು ಹಾಜರಾಗಲು ಮುಖ್ಯಕಾರಣವೆಂದರೆ ನ್ಯಾಯಮೂರ್ತಿ ಅವರಿಂದ ಪ್ರಶಸ್ತಿ ಹಾಗೂ ಸ್ವರ್ಣಪದಕ ಸ್ವೀಕರಿಸಬಾರದು ಎಂಬುದು !

ನಾನು ಇಷ್ಟು ವರ್ಷ ಕಾನೂನು ಅಭ್ಯಾಸ ಮಾಡಿ ಈಗ ರಂಜನ್ ಗೊಗೋಯ್ ಅವರಂಥ ವರಿಂದ ಪ್ರಶಸ್ತಿ ಸ್ವೀಕರಿಸಿದರೆ ಅದಕ್ಕೆ ಅರ್ಥವಿದೆಯೇ..? ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿದ್ದ ನ್ಯಾಯಮೂರ್ತಿ ರಂಜನ್ ಗೋಗೋಯಿ ಅವರಿಂದ ಸ್ವರ್ಣಪದಕ ಸ್ವೀಕರಿಸಲಾರೆ ಎಂದು ಪ್ರತಿಕ್ರಿಯಿಸಿದ್ದಾರೆ ವಿದ್ಯಾರ್ಥಿನಿ ಕಾರ್ವಾ.

ಇಲ್ಲಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಎಲ್ ಎಲ್ ಎಂ ಪದವಿಯಲ್ಲಿ ಮೊದಲ ರ್ಯಾಂಕ್ ಪಡೆಯುವ ಮೂಲಕ ಸ್ವರ್ಣಪದಕಕ್ಕೆ ಪಾತ್ರರಾದ ವಿದ್ಯಾರ್ಥಿನಿ ಕಾರ್ವಾ. ಆದರೆ , ಕಳೆದ ಶನಿವಾರ ನಡೆದ ಈ ಪ್ರಶಸ್ತಿ ಸಮಾರಂಭಕ್ಕೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅತಿಥಿಯಾಗಿ ಆಗಮಿಸಲಿದ್ದಾರೆ . ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದಾರೆ. ಎಂದು ತಿಳಿದ ತಕ್ಷಣ ಆಕೆ ಸಮಾರಂಭಕ್ಕೆ ಗೈರಾಗುವ ಮೂಲಕ ತನ್ನ ಪ್ರತಿಭಟನೆಯನ್ನು ದಾಖಲಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾಳೆ.

ಈ ವಿಚಾರ ಇದೀಗ ರಾಷ್ಟ್ರಾದ್ಯಂತ ದೊಡ್ಡಮಟ್ಟದ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿನಿ ಕಾರ್ವಾ, ನಾನು ಇಷ್ಟು ವರ್ಷ ತರಗತಿಯಲ್ಲಿ ಕಲಿತಿದ್ದೆಲ್ಲವೂ ದೊಡ್ಡ ಪ್ರಶ್ನೆಯೊಂದನ್ನು ನನ್ನ ಮುಂದೆ ಇಟ್ಟಿದೆ. ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾದ ಅವರಿಂದ ನಾನು ಪ್ರಶಸ್ತಿ ಸ್ವೀಕರಿಸಬೇಕೆಂಬ ನೈತಿಕ ವಿವಾದಕ್ಕೆ ನಾನು ಸಿಲುಕಿದ್ದೇನೆ. ಆದರೆ, ನಿಜದಲ್ಲಿ ಅವರ ಮೇಲೆ ಲೈಂಗಿಕ ಆರೋಪ ಬಂದ ಸಂದರ್ಭದಲ್ಲಿ ಅವರು ಕಾರ್ಯನಿರ್ವಹಿಸಿದ ಸಂಸ್ಥೆ ವಿಫಲವಾಗಿದೆ, ಎಂಬುದು ನನ್ನ ಅಭಿಪ್ರಾಯ ಎಂದು ಅವರು ತಿಳಿಸಿದ್ದಾರೆ.

ಕಳೆದ ಎಪ್ರಿಲ್ ತಿಂಗಳಲ್ಲಿ ಸಿಐಜೆ ರಂಜನ್ ಗೋಗೋಯಿ ಅವರ ಗೃಹ ಕಚೇರಿಯ ಮಹಿಳಾ ಸಿಬ್ಬಂದಿಯೊಬ್ಬರು ಅವರ ವಿರುದ್ಧವೇ ಸುಪ್ರೀಂ ಕೋರ್ಟ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊರಿಸಿ ದೂರು ದಾಖಲಿಸಿದ್ದರು. ಇಷ್ಟವಿಲ್ಲದಿದ್ದರೂ ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದರು. ವಿರೋಧ ವ್ಯಕ್ತಪಡಿಸಿದಾಗ ನನ್ನನ್ನು ವರ್ಗಾವಣೆ ಮಾಡಲಾಯಿತು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ಈ ಕುರಿತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್ ಎಸ್ ಬೊಬ್ಡೆ ನೇತೃತ್ವದಲ್ಲಿ ಮೂರು ಜನರನ್ನೊಳಗೊಂಡ ನ್ಯಾಯಪೀಠ ನೇಮಕ ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ 29 ಪುಟಗಳ ಅಫಿಡವಿಟ್ ಸಲ್ಲಿಸಿತ್ತು. ಅಲ್ಲದೆ, ಲೈಂಗಿಕ ಆರೋಪದ ಕುರಿತು ಮಹಿಳೆ ನೀಡಿದ ದೂರಿಗೆ ಯಾವುದೇ ಸೂಕ್ತ ಸಾಕ್ಷ್ಯಾಧಾರ ಇಲ್ಲ ಹೀಗಾಗಿ ಈ ಪ್ರಕರಣವನ್ನು ವಜಾ ಮಾಡಲಾಗುತ್ತದೆ. ಎಂಬ ಅಂತಿಮ ತೀರ್ಮಾನಕ್ಕೆ ಬಂದಿದ್ದರು.

ಆದರೆ, ಇದೇ ಪ್ರಕರಣ ಹಾಗೂ ಆ ಪ್ರಕರಣದ ತನಿಖೆ ಸಂಬಂಧ ಅಸಮಾಧಾನ ಹೊರ ಹಾಕಿರುವ ಕಾನೂನು ವಿದ್ಯಾರ್ಥಿನಿ ಕಾರ್ವಾ ಸಿಐಜೆ ರಂಜನ್ ಗೊಗೋಯ್ ಅವರಿಂದ ಪ್ರಶಸ್ತಿ ಸ್ವೀಕರಿಸಲು ಹಿಂದೇಟು ಹಾಕುವ ಮೂಲಕ ಈ ಪ್ರಕರಣ ಮತ್ತೆ ಮುನ್ನೆಲೆಗೆ ಬರಲು ಕಾರಣರಾಗಿದ್ದಾರೆ.

ಈ ಬಾರಿಯ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಸಿಐಜೆ ರಂಜನ್ ಗೋಗೋಯಿ ಜೊತೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ದೆಹಲಿ ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ. ಎನ್. ಪಟೇಲ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು.

Leave a Reply

Your email address will not be published. Required fields are marked *