ಸುಧಾ ಮೂರ್ತಿ ಅವರು ಕರ್ನಾಟಕ ದವರು ಎಂಬುದೇ ನಮ್ಮ ಹೆಮ್ಮೆ. ಕೂವಿದ್ ಸಂಕಷ್ಟಕೆ 100 ಕೋಟಿ ನೆರೆವು..

ಮಿತ್ರರೇ, ಕರ್ನಾಟಕದಲ್ಲಿ ಮಾತ್ರವಲ್ಲ… ದೇಶವಿದೇಶಗಳಲ್ಲಿ ಇರುವವರಿಗೆಲ್ಲ ಚಿರಪರಿಚಿತ ಹೆಸರು ಇನ್ಫೋಸಿಸ್ ನ ಶ್ರೀಮತಿ ಸುಧಾ ಮೂರ್ತಿ ಅವರದ್ದು. ಒಂದು ರೀತಿಯಲ್ಲಿ ಇಂದಿನ ಯುವ ಜನತೆಗೆ ರೋಲ್ ಮಾಡೆಲ್ ಇವರು. “ಸುಧಮ್ಮ” ಎಂದೇ ಪ್ರೀತಿಯಿಂದ ಇವರನ್ನು ಜನತೆ ಕರೆಯುತ್ತಾರೆ. ಹೆಸರಿಗೆ ತಕ್ಕಂತೆ ಇವರು ಮಾತೃ ಸ್ವರೂಪಿಯೇ. ಬಡವರಿಂದ ಹಿಡಿದು ಭಿಕ್ಷುಕರು, ದೇವದಾಸಿಯರವರೆಗೂ ಇವರ ಸಹಾಯಹಸ್ತ ಸದಾ ಚಾಚಿಕೊಂಡಿರುತ್ತದೆ. “ಇನ್ಫೋಸಿಸ್ ಫೌಂಡೇಶನ್” ಮೂಲಕ ಭಾರತದ ಯಾವುದೇ ಭಾಗದಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸಲಿ ಅಲ್ಲಿಗೆ ಸುಧಮ್ಮ ಸಹಾಯದೊಂದಿಗೆ ಹಾಜರಾಗಿ ಬಿಡುತ್ತಾರೆ. ಸಜ್ಜನಿಕೆಯ ಸಾಕಾರ ಮೂರ್ತಿ, ಮಾತೃ ಹೃದಯಿ ಮತ್ತು ಅಷ್ಟೇ ಸರಳ ಉಡುಗೆ-ತೊಡುಗೆಯ ಸುಧಮ್ಮ, ಕನ್ನಡಿಗರ ಕಣ್ಮಣಿ.

ಕಳೆದ ಬಾರಿ ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಇನ್ಫೋಸಿಸ್ ಫೌಂಡೇಶನ್ ನ ಮೂಲಕ ಬರೋಬ್ಬರಿ 100 ಕೋಟಿ ಹಣವನ್ನು ಸುಧಾಮೂರ್ತಿ ದೇಣಿಗೆಯಾಗಿ ನೀಡಿದ್ದರು. ಈ ಬಾರಿ ಕೊರೊನಾ ಎರಡನೇ ಅಲೆಯಲ್ಲೂ ಸುಧಾ ಮೂರ್ತಿಯವರು ಪುನಃ 100 ಕೋಟಿ ದೇಣಿಗೆ ನೀಡುವುದಾಗಿ ಪ್ರಕಟಿಸಿದ್ದಾರೆ. ವೆಂಟಿಲೇಟರ್, ಆಕ್ಸಿಜನ್ ಯಂತ್ರ ಪೂರೈಕೆಗೆ, ಮೂಲ ಸೌಲಭ್ಯ ಬಳಕೆಗೆ ಈ ಹಣವನ್ನು ನೀಡುತ್ತಿರುವುದಾಗಿ ಹೇಳಿದ್ದಾರೆ. ಹಾಗೆಯೇ ಇನ್ಫೋಸಿಸ್ ಸಂಸ್ಥೆಗಳು ಇರುವ ಮಂಗಳೂರು, ಹೈದರಾಬಾದ್, ಪುಣೆ, ನಾಗ್ಪುರ, ತಿರುವನಂತಪುರ ಹಾಗೂ ದೆಹಲಿಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ನೆರವು ನೀಡುವುದಾಗಿಯೂ ತಿಳಿಸಿದ್ದಾರೆ.

ಮಿತ್ರರೇ, ಇತ್ತೀಚೆಗಷ್ಟೇ ರತನ್ ಟಾಟಾ ಅವರು ಕೊರೊನಾ ಸಂಕಷ್ಟಕ್ಕೆ ತಮ್ಮ ಕೋಟಿಗಟ್ಟಲೆ ಹಣವನ್ನು ನೀಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಇದೇ ರೀತಿಯಾಗಿ ಸಮಾಜದಿಂದ ಅಪಾರ ಹಣ, ಅಂತಸ್ತು, ಗೌರವಗಳನ್ನು ಗಳಿಸಿ ತಮ್ಮನ್ನು ಗುರುತಿಸಿಕೊಂಡಿರುವ ಉದ್ಯಮಿಗಳು, ರಾಜಕಾರಣಿಗಳು, ಸಿನಿಮಾ ನಟ / ನಟಿಯರು ತಮ್ಮ ಗಳಿಕೆಯ ಒಂದಷ್ಟು ಪಾಲನ್ನು ದೇಶದ ಈ ಕಠಿಣ ವಿಪತ್ತಿನ ಸಂದರ್ಭದಲ್ಲಿ ನೀಡಿದರೆ… ತನ್ನ ಕಡೆ ದಯನೀಯವಾಗಿ ಸಹಾಯಕ್ಕಾಗಿ ನೋಡುತ್ತಿರುವ ರಾಜ್ಯದ ಅರ್ಹ ಜನತೆಗೆ ಇನ್ನಷ್ಟು ಹೆಚ್ಚಿನ ಸೌಲಭ್ಯವನ್ನು ಘನ ಸರಕಾರ ಒದಗಿಸಲು ಸಹಾಯವಾಗುತ್ತದೆ ಅಲ್ಲವೇ?

One thought on “ಸುಧಾ ಮೂರ್ತಿ ಅವರು ಕರ್ನಾಟಕ ದವರು ಎಂಬುದೇ ನಮ್ಮ ಹೆಮ್ಮೆ. ಕೂವಿದ್ ಸಂಕಷ್ಟಕೆ 100 ಕೋಟಿ ನೆರೆವು..

 • May 10, 2021 at 4:45 pm
  Permalink

  ಅವರು ಬಗೆಗೆ ಬರೆಯಲು ಪದಗಳಾದರೂ ಬೇಕಲ್ಲ
  ಹಣದ ಸದ್ವಿನಿಯೋಗ.ವಿನಯವಂತಿಕೆ.
  ಹೈದಯವಂತಿಕೆ.ಹಾಗೇ ಸರಳ ಬದುಕು
  ಇವುಗಳಿಗೆ ಜ್ವಲಂತ ಪ್ರತೀಕ ಸುಧಾ ಮೂರ್ತಿ .
  ಪ್ರತಿ ಸಂಕಷ್ಟಕ್ಕೂ ಅವರು ನೀಡುತ್ತಲೇ ಬಂದಿದ್ದಾರೆ.
  ಆದರೂ ಅವರ ಬಗೆಗೆ ಕುಹಕನಾಡುವವರೂ ಇದ್ದೇ ಇದ್ದಾರೆ.ಅದೆಲ್ಲ ಅವರಿಗೆ ಗೌಣ
  ಒಂದು ನಮನ 🙏🙏🙏 ಮೆಡಮ್.

  Reply

Leave a Reply

Your email address will not be published. Required fields are marked *