ಸಿ. ಟಿ. ರವಿ ಅವರಿಂದ ಖಾದರ್ ಗೆ ಮುಟ್ಟಿಕೊಳ್ಳುವಂತಹ ಉತ್ತರ

ಪೌರತ್ವ ತಿದ್ದುಪಡಿ ಕಾಯ್ದೆ: ಬಹುಸಂಖ್ಯಾತರು ರೊಚ್ಚಿಗೆದ್ದರೆ ಏನಾಗುತ್ತದೆ ಎಂಬುದರ ಅರಿವಿದೆಯೇ ಖಾದರ್? : ಸಿ. ಟಿ. ರವಿ

ಬೆಂಗಳೂರು, ಡಿ. 18-“ಉದ್ದೇಶಿತ ಪೌರತ್ವ ತಿದ್ದುಪಡಿ ಮಸೂದೆ ಜಾರಿಯಾದರೆ ರಾಜ್ಯ ಹೊತ್ತಿ ಉರಿಯುತ್ತದೆ” ಎಂಬ ಯು‌ ಟಿ. ಖಾದರ್ ಅವರ ಹೇಳಿಕೆಗೆ ಸಿ. ಟಿ. ರವಿ ಮುಟ್ಟಿಕೊಳ್ಳುವಂತಹ ಉತ್ತರ ನೀಡಿದ್ದಾರೆ. ಒಂದು ವೇಳೆ ರಾಜ್ಯದಲ್ಲಾಗಲೀ ಅಥವಾ ದೇಶದಲ್ಲಾಗಲೀ ಬಹುಸಂಖ್ಯಾತರು ರೊಚ್ಚಿಗೆದ್ದರೆ ಏನಾಗುತ್ತದೆ ಎಂಬುದರ ಕಲ್ಪನೆಯನ್ನೂ ನಿಮ್ಮಿಂದ ಮಾಡಿಕೊಳ್ಳುವುದು ಅಸಾಧ್ಯ. ಹಾಗಾಗಿ ಇಂತಹ ಹೇಳಿಕೆಗಳನ್ನು ನೀಡುವ ಮೊದಲು ಆಲೋಚಿಸಿ ಮಾತನಾಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯು. ಟಿ. ಖಾದರ್ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆ ಜಾರಿಯಾದರೆ ಅಲ್ಪಸಂಖ್ಯಾತರು ತಿರುಗಿಬಿದ್ದು ಕರ್ನಾಟಕ ಹೊತ್ತಿ ಉರಿಯಲಿದೆ ಎಂದು ಹೇಳಿದ್ದಾರೆ. ಅದಕ್ಕೂ ಮೊದಲು ಬಹುಸಂಖ್ಯಾತರು ತಿರುಗಿ ಬಿದ್ದರೆ ಏನಾಗುತ್ತದೆ ಎಂಬ ಅರಿವು ನಿಮಗಿದೆಯೇ ಎಂದು ತರಾಟೆಗೆ ತೆಗೆದು ಕೊಂಡರು.

ಖಾದರ್ ಅವರಂತಹ ಮನಸ್ಥಿತಿಯುಳ್ಳವರೇ ಗೋದ್ರಾದಲ್ಲಿ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಂಡರು. ಇವರು ಬೆಂಕಿ ಹಚ್ಚುವುದರಲ್ಲಿ ನಿಸ್ಸೀಮರು. ತಿರುಗಿಬಿದ್ದರೆ ನಾವು ಹೆದರಿಕೊಂಡು ಕೂರುವುದಿಲ್ಲ. ಯು. ಟಿ. ಖಾದರ್ ಹೇಳಿರುವುದು ಸಂವಿಧಾನ ವಿರೋಧಿ. ನಮ್ಮ ಬಹುಸಂಖ್ಯಾತರ ಸೌಜನ್ಯವನ್ನು ದೌರ್ಬಲ್ಯ ಎಂದುಕೊಳ್ಳಬಾರದು. ಇವರಂತೆ ನಾವು ತಿರುಗಿ ಬಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ನೇರವಾಗಿ ಎಚ್ಚರಿಸಿದರು.
ಕಾಂಗ್ರೆಸ್ ನವರು ಅಖಂಡಭಾರತ ಆದಾಗ ಪಾಕಿಸ್ತಾನದಲ್ಲಿರುವ ಮುಸ್ಲಿಮರಿಗೂ ಪೌರತ್ವ ಕೊಡುತ್ತೇವೆ. ಇಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ಕೊಟ್ಟಿದ್ದೇವೆ ಎಂಬುದನ್ನು ಯಾರೂ ಮರೆಯಬಾರದು ಎಂದರು‌. ನಿರಾಶ್ರಿತರೇ ಬೇರೇ, ಒಳನುಸುಳುವವರೇ ಬೇರೇ‌ ಹಾಗೂ ಆಕ್ರಮಣಕಾರರು ಬೇರೆ ಬೇರೆ ಎಂಬುದನ್ನು ಮಸೂದೆ ವಿರೋಧಿಸುವವರು ಅರ್ಥ ಮಾಡಿಕೊಳ್ಳಲಿ.

ನಾವು ನಿರಾಶ್ರಿತರಿಗೆ ಪೌರತ್ವ ಕೊಡುತ್ತಿದ್ದೇವೆ. ಖಾದರ್ ಅವರ ಹಕ್ಕನ್ನು ಕಿತ್ತುಕೊಂಡಿಲ್ಲ ಎಂದು ಟಾಂಗ್ ನೀಡಿದರು. ಖಾದರ್ ಪೌರತ್ವದ ಸಮಸ್ಯೆ ಇಲ್ಲ ಎಂದ ಮೇಲೆ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಆದರೆ ಪಾಕಿಸ್ತಾನದಿಂದ ಬಂದಿರುವ ಖಾದರ್ ಅವರ ಸಂಬಂಧಿಕರಿಗೆ ಪೌರತ್ವ ಕೊಡುವುದಿಲ್ಲ. ಭಾರತ ಎಂದಿಗೂ ಪಾಕಿಸ್ತಾನ ಮಾಡಲು ಬಿಡುವುದಿಲ್ಲ ಬೇಕಿದ್ದರೆ ಅವರೇ ಪಾಕ್ ಗೆ ಹೋಗಲಿ ಎಂದು ತಿರುಗೇಟು ಕೊಟ್ಟರು.

Leave a Reply

Your email address will not be published. Required fields are marked *