ಸಿಮೆಂಟ್ ಗೋಡನ್ನಲ್ಲಿ ಸಿಕ್ತು ಬರೋಭರಿ 20 ಕೋಟಿ ರೂಪಾಯಿ!

ಸಿಮೆಂಟ್ ಮೂಟೆಗಳಲ್ಲಿ ತುಂಬಿಟ್ಟಿದ್ದರು ಚುನಾವಣೆಗೆ ಹಂಚಲು ಕಾಳ ಧನ.

ಡಿ.ಎಂ.ಕೆ.ಮುಖಂಡರೊಬ್ಬರಿಗೆ ಸೇರಿದ ಸಿಮೆಂಟ್ ಗೊಡನ್ ಮೇಲೆ ಆದಾಯತೆರಿಗೆ ಅಧಿಕಾರಿಗಳು ಇಂದು ದಾಳಿ ನೆಡೆಸಿದಾಗ ಸಿಕ್ಕವು ಸಿಮೆಂಟ್ ಮೂಟೆಗಳೇ ನಿಜ..ಆದರೆ ಆ ಮೂಟೆಗಲ್ಲಿ ಇದ್ದದ್ದು ಮಾತ್ರ ಸಿಮೆಂಟ್ ಅಲ್ಲ,ಬದಲಿಗೆ ಕಂತೆ ಕಂತೆ ಹಣ.

ಹೌದು, ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಹಂಚಲು ಈ ರೀತಿ ಚೀಲಗಲ್ಲಿ ತುಂಬಿಟ್ಟಿದ್ದ ಹಣ ಬರೋಭರಿ 20 ಕೋಟಿ ರೂಪಾಯಿ..

ತಮಿಳುನಾಡು ವೆಲ್ಲೂರ್ ಜಿಲ್ಲೆಯಲ್ಲಿ ಈ ಹಣವನ್ನು ಪತ್ತೆ ಮಾಡಲಾಗಿದ್ದು ಒಂದೊಂದು ಚೀಲದಮೇಲು ಈ ಹಣ ಯಾವ ಪ್ರದೇಶದಲ್ಲಿ ಹಂಚಲು ಎಂದು ಹೆಸರು ಸಹ ಬರೆಯಲಾಗಿತ್ತು.

ಖ್ಯಾತಿರ್ ಆನಂದ್ ಎಂಬ ಡಿಎಂಕೆ ಅಭ್ಯರ್ಥಿಗೆ ಸೇರಿದ ಹಣ ಇದು ಎಂದು ಶಂಕಿಸಲಾಗಿದೆ. ಸದ್ಯ ಈ ಹಣವನ್ನು ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಡಿಎಂಕೆ ಪಕ್ಷದ ಮುಖಂಡ ಹಾಗೂ ಖಜಾಂಚಿ ದೊರಯ್ ಮುರುಗನ್ ಅವರ ಪುತ್ರ ಆನಂದ್ ಅವರಾಗಿದ್ದಾರೆ.

ಈ ನಡುವೆ ಆನಂದ್ ಅವರು ಶಿಕ್ಷಣ ಸಂಸ್ಥೆ ನೆಡೆಸುತ್ತಿದ್ದು ದಿ.30 ರಂದು ಅಧಿಕಾರಿಗಳು ಇಲ್ಲೂ ಸಹ ದಾಳಿ ನಡೆಸಿದ್ದರು.ಆದರೆ ಹಿಂದಿನ ದಿನವೇ ಅಲ್ಲಿಂದ ಹಣವನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ ಎಂಬ ಸಾಧ್ಯತೆ ಹಿನ್ನೆಲೆಯಲ್ಲಿ ಸಿಮೆಂಟ್ ಗೋದಾಮ್ ಮೇಲೆ ದಾಳಿ ನಡೆಸಲಾಗಿತ್ತು.

Leave a Reply

Your email address will not be published. Required fields are marked *