ಸಹೃದಯ ಕನ್ನಡತಿ,ಸರಳ ಸಜ್ಜನಿಕೆಯ ಸಾಕಾರಮೂರ್ತಿ ಹೆಮ್ಮೆಯ ಸುಧಾಮೂರ್ತಿ

ನೆರೆ ಸಂತ್ರಸ್ತರಿಗೆ ಬಿಸ್ಕತ್.. ಬ್ರೆಡ್ ಹಾಗೂ ಇತರೆ dry ಫ್ರೂಟ್ಸ್ ನ ಪ್ಯಾಕ್ ಮಾಡುತಿದ್ದಾರೆ ನೋಡಿ… ಅವರಿಗೆ ಮಾರ್ಗದರ್ಶನ ನೀಡುತ್ತಾ ಅವರೊಂದಿಗೆ ತಾವು ಕೆಲಸ ಮಾಡುತ್ತಿರುವುದು ಯಾರು ಗೊತ್ತಾ…
ಬಹುದೊಡ್ಡ ಅಂತರರಾಷ್ಟ್ರೀಯ ಕಂಪನಿ ಇನ್ಫೋಸಿಸ್ ನ್ ಒಡತಿ ಹಾಗೂ ಕೋಟಿ..ಕೋಟಿ ರೂ ಗಳ ಒಡತಿ ಸುಧಾನಾರಾಯನಮೂರ್ತಿ..
ಇದಲ್ಲವೇ ಸರಳತೆ..ಇಂಥವರಿಗಲ್ಲವೇ ನಾವು ತುಂಬಿದ ಕೊಡ ಎನ್ನುವುದು.

ಬಿಸ್ಕೆಟ್ ಎಸದ ಸಚಿವ ರೇವಣ್ಣ ಅವರಂಥ ಸಾವಿರಾರು ಮಂದಿಗೆ ಕೆಲಸ ಕೊಟ್ಟಿರುವ ಕಂಪನಿಯ ಒಡತಿಯನ್ನು ಕಂಡು ನಮ್ಮ ಜನಪ್ರತಿನಿಧಿಗಳು ಅರಿಯುವುದು..ಬಹಳಷ್ಟಿದೆ

ಕೊಡಗು ಹಾಗೂ ಕೇರಳ ನೆರೆ ಪೀಡಿತರಿಗೆ,ಅದರಲ್ಲೂ ಮಹಿಳೆಯರಿಗೆ ಅಗತ್ಯ ಇದ್ದ ಒಳಉಡುಪುಗಳು ಹಾಗೂ ಇತರೆ ಅಗತ್ಯ ವಸ್ತುಗಳನ್ನು ಅರ್ಥ ಮಾಡಿಕೊಂಡು ಕಳುಹಿಸಿಕೊಟ್ಟರು.ಎಷ್ಟಾದರು ಮಹಿಳೆಯರ ಕಷ್ಟಗಳನ್ನು ಅರ್ಥ ಮಾಡಿಕೊಡ ಸಹೃದಯಿ, ಲೇಖಕಿ,ಸಜ್ಜನಿಕೆಯ ಸಾಕಾರಮೂರ್ತಿ ನಮ್ಮ ಸುಧಾಮೂರ್ತಿ. ನಿಜಕ್ಕೂ ಹೆಮ್ಮೆಯ ಕನ್ನಡತಿ.ಆದರ್ಶ ಗಾರ್ತಿ.
ಈ ಬಾರಿಯ ದಸರಾ ಉದ್ಘಾಟಿಸಲಿರುವ ಸಮರ್ಥ ಅತಿಥಿಗಳಾದ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.

Leave a Reply

Your email address will not be published. Required fields are marked *