ಸರದಿಯಲ್ಲೇ ನಿಂತು ನಿಂತಂತೆ, ಮರೆಯಾದರು ಕನ್ನಡ ರತ್ನರು

ಯಾವ ಚಿತ್ರ ಗ್ರಾಹಕ ಈ ಚಿತ್ರ ತೆಗೆದರೊ ಗೊತ್ತಿಲ್ಲ.ಸರತಿಯಲ್ಲಿ ನಿಂತಿರುವ ಕನ್ನಡ ಚಿತ್ರರಂಗದ ಈ ನಾಲ್ಕು ಮಂದಿ ದಿಗ್ಗಜರು ಒಬ್ಬರ ನಂತರ ಒಬ್ಬರು ನಮ್ಮನು ಅಗಲಿದ್ದಾರೆ.
ಸರತಿ ಸಾಲಿನಲ್ಲಿ ನಿಂತಂತೆ ಒಬ್ಬರನ್ನೊಬ್ಬರು ಹಿಂಬಾಲಿಸಿದ ಕುರಿತು ನಮ್ಮ ಪತ್ರಿಕೆ ಅಂಕಣಗಾರ್ತಿ ಹಾಗೂ ಕವಿ ಶ್ರೀಮತಿ ಸುನಿತಾ ಪ್ರಕಾಶ್ ಅವರು ಸುಂದರ ಹಾಗೂ ಅರ್ಥಪೂರ್ಣ ಕವಿತೆ ಬರೆದಿದ್ದಾರೆ ನೋಡಿ.

ಶಿಸ್ತಿನ ಸಿಪಾಯಿಗಳು

ಸರಧಿಯಲ್ಲಿ ನಿಂತಿಹ ದಿಗ್ಗಜರು
ಕನ್ನಡದ ಮೇರು ನಟರು
ಕಂಬನಿ ಮಿಡಿದಿಹಳು
ತಾಯಿ ಕನ್ನಡತಿ ಇಂದು

ಶಿಸ್ತಿನ ಸಿಪಾಯಿಗಳು
ಅದು ಹೇಗೆ ನಿರ್ಧರಿಸಿದರೋ
ಆ ವಿಧಿಯ ನಿರ್ಣಯವನು
ಹೊರಡುವ ಕ್ರಮಸಂಖ್ಯೆಯನು

ಭಾವ ಚಿತ್ರವನ್ನು ಕ್ಲಿಕ್ಕಿಸಿದ
ಆ ಮಾಹಾನುಭಾವಿ
ಭಗವಂತನ ಸಹಾಯಕನೆ?
ಯಮರಾಜನ ಶಿಷ್ಯನೆ?

ಸರಧಿಯಲ್ಲಿ ಕರೆದೊಯ್ದನಲ್ಲ
ಈ ನಮ್ಮ ಮುತ್ತುರತ್ನಗಳನ್ನು
ತೀರದ ದುಃಖವನು ನಮಗೆ ನೀಡಿ
ಇರುವಿಕೆಯ ಕೇವಲ ನೆನಪು ಮಾಡಿ

ಕೋಟಿ ಕೋಟಿ ಕನ್ನಡಿಗರ
ಮನವೆ ಇವರಿಗೆ ಮಂದಿರ
ಅಭಿಮಾನಿ ಜನಸಾಗರವೆ
ಇವರ ವ್ಯಕ್ತಿತ್ವಕ್ಕೆ ಶೃಂಗಾರ

ಬೇಡುವೆ ನಾ ಕನ್ನಡಮ್ಮನಲಿ
ಮತ್ತೆ ಜನ್ಮನೀಡು ನಿನ್ನ ಮಡಿಲಿನಲಿ
ಬಡವಾಗದಿರಲಿ ನಿನ್ನ ಮಡಿಲು
ಕಳೆದುಕೊಂಡು ಈ ಕುಡಿಗಳನು

ಸುನಿತಾಪ್ರಕಾಶ್
ದಾವಣಗೆರೆ

Leave a Reply

Your email address will not be published. Required fields are marked *