ಸರಕಾರಿ ನೌಕರರು ಹಾಗೂ ಜನಪ್ರತಿನ್ನಿಧಿಗಳಿಗೆ, ಸರಕಾರಿ ಆಸ್ಪತ್ರೆಗಳ ಚಿಕಿತ್ಸೆ ಕಡ್ಡಾಯವಾಗಲಿ

ಗ್ರಾಮ ಸಹಾಯಕರಿಂದ ಹಿಡಿದು ರಾಜ್ಯದ ಮುಖ್ಯಕಾರ್ಯದರ್ಶಿ ಹಂತದವರೆಗಿನ ಎಲ್ಲಾ ಸರಕಾರಿ ನೌಕರರು ಹಾಗೂ ಅವರ ಕುಟುಂಬ ವರ್ಗದವರು ಸರಕಾರಿ ಆಸ್ಪತ್ರೆಗಳಲ್ಲೇ ಚಿಕತ್ಸೆ ಪಡೆಯಬೇಕು ಎಂಬುದನ್ನು ಸರ್ಕಾರ ಕಡ್ಡಾಯಗೊಳಿಸಬೇಕು ಎಂದು “ ಜನಮಿಡಿತ” ದಿನಪತ್ರಿಕೆಯ ಸಂಪಾದಕ ಜ. ಎಂ. ಆರ್. ಆರಾಧ್ಯ ಅಭಿಪ್ರಾಯಿಸಿದರು.

ನಗರದ ರೋಟರಿ ಬಾಲ ಭವನದಲ್ಲಿ ಕನ್ನಡ ಸಮರ ಸೇನೆ ವತಿಯಿಂದ ನಡೆದ ಮಾಧ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಮೊನ್ನೆಯಷ್ಟೇ ಮುಖ್ಯಮಂತ್ರಿ ಸಿಧ್ಹರಾಮಯ್ಯ ಅವರು ರಾಜ್ಯಮಟ್ಟದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡುತ್ತ, ಸರಕಾರಿ ಆಸ್ಪತ್ರೆಗಳಿಗೆ ಏಕೆ ರೋಗಿಗಳು ಬರುತ್ತಿಲ್ಲ ಎಂಬುದನ್ನು ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಹಾಗೂ ಈ ಬಗ್ಗೆ ವರದಿ ನೀಡುವಂತೆ ಹೇಳಿದ್ದರು. ಇದನ್ನು ಪ್ರಸ್ತಾಪಿಸಿದ ಜ. ಎಂ. ಆರ್. ಆರಾಧ್ಯ ಅವರು, ಸರ್ಕಾರಿ ನೌಕರರು ಹಾಗೂ ಅವರ ಕುಟುಂಬ ವರ್ಗದವರಿಗೆ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಿಂದ ಹಿಡಿದು ಮುಖ್ಯಮಂತ್ರಿಯವರಿಗಿನ ಜನಪ್ರತಿನಿಧಿಗಳು ಹಾಗೂ ಅವರ ಕುಟುಂಬವರ್ಗದವರಿಗೆ ಸರಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡಿಯುವುದನ್ನು ಕಡ್ದಾಯಗೊಳಸಿದರೆ ತನ್ನಿಂದ ತಾನೇ ಸರಕಾರಿ ಆಸ್ಪತ್ರೆಗಳು ಸುಧಾರಿಸುತ್ತವೆ ಎಂದರು.

ಸರಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಉಂಟಾಗಿದ್ದು ಇಲ್ಲಿಯೂ ಸಹ ಜನಪ್ರತಿನಿಧಿಗಳು ಹಾಗೂ ಸರಕಾರಿ ನೌಕರರ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲೇ ಶಿಕ್ಷಣವನ್ನು ಕಡ್ದಾಯಗೊಳಿಸಿದರೆ ಆಗ ಶಾಲೆಗಳ ಪರಿಸ್ಥಿತಿಯೂ ಸುಧಾರಿಸುತ್ತದೆ ಹಾಗೂ ಇತರ ಮಕ್ಕಳ ದಾಖಲಾತಿಯೂ ಹೆಚ್ಚುತ್ತದೆ ಎಂದು ಆರಾಧ್ಯ ಅವರು ಸಲಹೆ ನೀಡಿದರು.

ಶಿವಮೊಗ್ಗದಲ್ಲಿ ಜಿಲಾಧಿಕಾರಿಯೋಬ್ಬರು ತಮ್ಮ ಪತ್ನಿಯನ್ನು ಹೆರಿಗೆಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.ಈ ಒಂದೇ ಕಾರಣಕ್ಕೆ ಇಡೀ ಆಸ್ಪತ್ರೆ ಜಿಲ್ಲಾಧಿಕಾರಿಯವರ ಪತ್ನಿ ಹೆರಿಗೆ ಮುಗಿಸಿಕೊಂಡು ಹೋಗುವ ತನಕವೂ ಖಾಸಗಿ ಆಸ್ಪತ್ರೆಗಿಂತಲೂ ಹೆಚ್ಚಿನ ಕಾಳಜಿಯನ್ನು ಎಲ್ಲಾ ರೋಗಿಗಳಿಗೂ ತೋರಿದ್ದು ದೊಡ್ಡ ಸುದ್ಧಿಯಾಗಿತ್ತು. ಹಾಗಾಗಿ ಯಾವುದೇ ಸೇಡಿನ ಅಥವಾ ಸಿಟ್ಟಿನ ಕ್ರಮವಾಗಿ ನಾನು ಮೇಲ್ಕಾಣಿಸಿದ ಸಲಹೆಯನ್ನು ನೀಡುತ್ತಿಲ್ಲ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವುದರಿಂದ ಮತ್ತು ತಮ್ಮವರನ್ನು ಸರಕಾರಿ ಆಸ್ಪತ್ರೆಗಳಿಗೆ ಸೇರಿಸುವುದರಿಂದ ವ್ಯವಸ್ಥೆ ಸುಧಾರಿಸುತ್ತದೆ ಮತ್ತು ವಾಸ್ತವದ ಅರಿವು ಇವರುಗಳಿಗೆ ಆಗುತ್ತದೆ ಎಂಬ ಕಾರಣದಿಂದ ಅಷ್ಟೇ ಎಂದು ಜ. ಎಂ. ಆರ್. ಆರಾಧ್ಯ ತಿಳಿಸಿದರು.

Leave a Reply

Your email address will not be published. Required fields are marked *