ಶ್ರೀ ಪ್ರಸನ್ನ ಮಲ್ಲಿಕಾರ್ಜುನ ಸ್ವಾಮಿ

ಐತಿಹಾಸಿಕ ಸ್ಥಳಗಳಲ್ಲಿ ಒಂದಾದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಸಮೀಪದ “ಪುರ” ಎಂಬ ಗ್ರಾಮದಲ್ಲಿರುವ ಶ್ರೀ ಪ್ರಸನ್ನ ಮಲ್ಲಿಕಾರ್ಜುನ ಸ್ವಾಮಿಯು ಗಂಗೆಯ ಸಮೇತವಾಗಿ ಲಿಂಗರೂಪದಲ್ಲಿ ಉದ್ಭವಿಸಿದೆ. ಕಂಚಿ, ಕಾಶಿ, ಶ್ರೀ ಶೈಲ, ರಾಮೇಶ್ವರ ಮುಂತಾದ ಕ್ಷೇತ್ರದಲ್ಲಿ ಗಂಗೆಯ ಸಮೇತ ಲಿಂಗ ರೂಪದಲ್ಲಿ ಉದ್ಭವಿಸಿದ್ದು ಅದರಲ್ಲಿ ಯಗಟಿಪುರದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯವು ಒಂದಾಗಿದೆ.

ವೇದಾವತಿ ನದಿಯ ದಂಡೆಯ ಮೇಲೆ ನೆಲೆಸಿರುವ ಶ್ರೀ ಪ್ರಸನ್ನ ಮಲ್ಲಿಕಾರ್ಜುನ ಸ್ವಾಮಿಯು ಅನೇಕ ಭಕ್ತಾದಿಗಳ ಆರಾಧ್ಯ ದೈವವಾಗಿ ನೆಲೆಗೊಂಡಿದೆ. ಈ ದೇವಾಲಯದ ವಿಶೇಷತೆ ಏನೆಂದರೆ ಶಿವಲಿಂಗದಲ್ಲಿ ಸದಾ ನೀರು ಉದ್ಭವಿಸುತ್ತದೆ.

ಇತಿಹಾಸ ತಿಳಿಸುವುದಾದರೆ: 1019 ರಲ್ಲಿ ದಾವಣಗೆರೆ ಮೂಲದ ವೀರಶೆಟ್ಟಿ ಗೌಡ ಮತ್ತು ಪಾರ್ವತಿ ದಂಪತಿಗೆ ಅನೇಕ ವರ್ಷದಿಂದ ಸಂತಾನವಿರಲಿಲ್ಲ. ಅದೇ ಗ್ರಾಮದಲ್ಲಿ ವಾಸವಾಗಿದ್ದು. ಅಲ್ಲಿನ ಶ್ರೀಮಂತ ವ್ಯಕ್ತಿಯಲ್ಲಿ ಒಬ್ಬರಾಗಿದ್ದರು. ಮನೆಯಲ್ಲಿ ಅನೇಕ ದನ- ಕರುಗಳಿದ್ದು ಅವನ್ನು ಕಾಯಲು ಪಿ. ಕೋಡಿಹಳ್ಳಿ ಮೂಲದ ಬೀರಪ್ಪ ಎಂಬ ವ್ಯಕ್ತಿಯನ್ನು ನೇಮಕ ಮಾಡಲಾಗಿತ್ತು. ಅದರಲ್ಲಿ

“ಕವಿಲೆ” ಎಂಬ ಹಸುವು ಪ್ರತಿದಿನ ವೇದಾವತಿ ನದಿ ಎಡ ದಂಡೆಯ ಪಕ್ಕದ ಬಂಡೆಯ ಬಳಿಯ ಹುತ್ತಕ್ಕೆ ಹಾಲು ಸುರಿಸುತ್ತಿರುತ್ತದೆ.

ಹಾಗಾಗಿ ತನ್ನ ಕರುವಿಗೆ ಹಾಲುಣಿಸುತ್ತಿರುವುದಿಲ್ಲ ಇದನ್ನು ಗಮನಿಸಿದ ವೀರಶೆಟ್ಟಿ. ಬೀರಪ್ಪನ ಮೇಲೆ ಸಂಶಯ ಪಡುತ್ತಾನೆ. ಒಂದು ದಿನ ಬೀರಪ್ಪನನ್ನೂ ಪ್ರಾಮಾಣಿಕತೆಯನ್ನು ಪರೀಕ್ಷಿಸಲು ಮರೆಯಲ್ಲಿ ಅಡಗಿ ನೋಡುವಾಗ ಹಸುವು ಹುತ್ತಕ್ಕೆ ಹಾಲು ಸುರಿಸುತ್ತಿರುವುದನ್ನು ಗಮನಿಸಿ. ಗ್ರಾಮದ ಎಲ್ಲ ಜನರನ್ನು ಕರೆಸಿ ಹುತ್ತವನ್ನು ಹಾಗೆಸಿದಾಗ ಹಾವು ಬುಸುಗುಟ್ಟುತ್ತದೆ. ಹಾಗಾಗಿ ವೀರಶೆಟ್ಟಿ ಸರ್ಪದೋಷಕ್ಕೆ ಒಳಗಾಗುತ್ತಾನೆ.

ದೋಷ ನಿವಾರಣೆಗೆ ಸರ್ಪಯಾಗವನ್ನು ಮಾಡುತ್ತಾನೆ. ಸರ್ಪವು ಶಾಂತವಾದಾಗ, ಸರ್ಪಯಾಗಕ್ಕೆ ಹಾಸಿದ್ದ ಜಾಗದಲ್ಲಿ ಶಿವಲಿಂಗ ಉದ್ಭವವಾಗುತ್ತದೆ ಮತ್ತು ಲಿಂಗದ ಹಿಂಬದಿಯ ನಾಲ್ಕಂಗುಲ ಜಾಗದಲ್ಲಿ ಗಂಗೆಯ ಉದ್ಭವ ಕೂಡ ಆಗ್ತದೆ.

ನಂತರದಲ್ಲಿ ಶಿವನು ಜಂಗಮ ವೇಷದಲ್ಲಿ ವೀರಶೆಟ್ಟಿ ಕನಸಿನಲ್ಲಿ ಬಂದು ದೇವಸ್ಥಾನ ನಿರ್ಮಿಸಲು ಮಾರ್ಗದರ್ಶಿಸಿ, ಸಂತಾನ ಭಾಗ್ಯವನ್ನು ಪ್ರಾಪ್ತಿಸುತ್ತದೆ. ವೀರಶೆಟ್ಟಿಯು ಶಿವನ ಅನುಗ್ರಹದಂತೆ. ನಕ್ಷತ್ರಾಕರದಲ್ಲಿ ದೇವಾಲಯ ನಿರ್ಮಾಣಗೊಂಡಿತು ಅದರ ಜೀರ್ಣೋದ್ಧಾರವು ಹೊಯ್ಸಳರಾಜ ” ಹರಿಹರ ಸೋಮೇಶ್ವರ”ರಿಂದ ನೆರವೇರಿತು. ಇಷ್ಟು ದೇವಾಲಯದ ಇತಿಹಾಸ.

ಇಲ್ಲಿ ಅನೇಕ ಮಂದಿಗೆ ಸಂತಾನ ಭಾಗ್ಯ ಈಡೇರಿದೆ. ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸಿ ಹರಕೆ, ರುದ್ರಾಭಿಷೇಕ, ಮಹಾಪೂಜೆ ನೆರವೇರಿಸುತ್ತಾರೆ ಹಾಗೂ ನಿತ್ಯ ಅನ್ನ ಸಂತರ್ಪಣೆ ನಡೆಯುತ್ತದೆ. ಜೊತೆಗೆ ಗಣಪತಿ, ಅಂತರಗಟ್ಟಮ್ಮ, ಚೌಡಮ್ಮ, ಆಂಜನೇಯ, ನವಗ್ರಹ ಇನ್ನೂ ಅನೇಕ ದೇವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಪಿ.ಕೊಡಿಹಳ್ಳಿಯವರು ದೇವಾಲಯದ ಮೂಲ್ವಿಕರು ಇನ್ನೂ ಅನೇಕ ಊರುಗಳಲ್ಲಿ ಭಕ್ತಾದಿಗಳು ಇದ್ದಾರೆ. ಬೇರೆ ಬೇರೆ ಊರು, ತಾಲೂಕು, ಜಿಲ್ಲೆಗಳಿಂದ ಭಕ್ತಾದಿಗಳು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ. ಭಕ್ತಾದಿಗಳಿಗೆ ಉಳಿದುಕೊಳ್ಳಲು ಕೊಠಡಿಯ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ವರ್ಷ ಪಾಲ್ಗುಣ ಶುದ್ಧ, ಮಾಘ ಸಂವತ್ಸರದಲ್ಲಿ ಸ್ವಾಮಿಯ ರಥೋತ್ಸವ ನಡೆಯುತ್ತದೆ. ಹಾಗು ಒಂಬತ್ತು ವರ್ಷಗಳಿಗೊಮ್ಮೆ ” ಬಾಯಿ ಬೀಗ” ಬಂಡಿ ಜಂಪ ಮಹೋತ್ಸವವು ಬಹಳ ಅದ್ಧೂರಿಯಾಗಿ ನಡೆಯುತ್ತದೆ. ದೇವಾಲಯದ ಹಿಂಬದಿಯಲ್ಲಿ, ತಪಸ್ಸಿನಲ್ಲಿ ನಿರತರಾದ ಶಿವನ ಮೂರ್ತಿ ನಿರ್ಮಿಸಲಾಗಿದ್ದು ಜೊತೆಗೆ ಉದ್ಯಾನವನವನ್ನು ನವೀಕರಿಸಲಾಗಿದೆ..

-ಚೈತ್ರ ಲೋಕೇಶ್ “ಕನ್ನಡತಿ”
ಪಿ. ಕೋಡಿಹಳ್ಳಿ, ಕಡೂರು ತಾ
ಚಿಕ್ಕಮಗಳೂರು ಜಿ

One thought on “ಶ್ರೀ ಪ್ರಸನ್ನ ಮಲ್ಲಿಕಾರ್ಜುನ ಸ್ವಾಮಿ

  • January 19, 2022 at 7:13 am
    Permalink

    ಉತ್ತಮವಾದ ಐತಿಹಾಸಿಕ ಮಾಹಿತಿ,,, ಬರೆದ ಲೇಖಕಿ ಚೈತ್ರರವರಿಗೂ ಪ್ರಕಟಿಸಿದ ಜನಮಿಡಿತಕ್ಕೂ,,, ಅಭಿನಂದನೆಗಳು-ಎಸಿಎಸ್

    Reply

Leave a Reply

Your email address will not be published. Required fields are marked *