ಶಿಷ್ಯ ವೇತನಕ್ಕಾಗಿ ವೈದ್ಯರು ಪರದಾಟ; ಮೆರೆವಣಿಗೆ ಮೂಲಕ ಮನವಿ ಸಲ್ಲಿಕೆ

ಕಳೆದ ಏಳೆಂಟು ತಿಂಗಳಿಂದಲು ವೈದ್ಯಕೀಯ ವಿದ್ಯಾರ್ಥಿಗಳ ಶಿಷ್ಯ ವೇತನವನ್ನ ತಡೆಹಿಡಿದಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ದಾವನಗೆರೆಯಲ್ಲಿಂದು ಜೆ ಜೆ ಎಂ ಮೆಡಿಕಲ್ ಕಾಲೇಜಿನ ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕಿರಿಯ ವೈದ್ಯರ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಸಿ ಜಿ ಆಸ್ಪತ್ರೆಯಿಂದ ಜಿಲ್ಲಾಧಿಕಾರಿ ಕಛೇರಿಯವರೆಗೆ ಮೆರವಣಿಗೆಯಲ್ಲಿ ಸಾಗಿದ ನೂರಾರು ವೈದ್ಯರು ಡಿ ಸಿ ಮುಕಾಂತರ ಮನವಿ ಸಲ್ಲಿಸಿದರು .
ಕಳೆದ ಏಳೆಂಟು ತಿಂಗಳಿಂದಲು ತೀವ್ರ ಹಣಕಾಸು ಸಮಸ್ಯೆ ಎದುರಿಸುತ್ತಿರುವ ನಮ್ಮಗಳ ಮನವಿಯನ್ನ ಮನ್ನಿಸಿ ತಕ್ಷಣವೆ ವೇತನ ಬಿಡುಗಡೆ ಮಾಡಲು ಮನವಿಯಲ್ಲಿ ಕೋರಲಾಗಿದೆ.

ಕಿರಿಯ ವೈದ್ಯರುಗಳ ಸಂಘದ ಸ್ವರೂಪ್ ಮಲ್ಲೇಶ್ ,ಡಾ ಎಸ್ ಎ ಭಾಷಾ,ಡಾ ಪ್ರಿಯಾಂಕ ,ಡಾ ಅನುಶ್ರೀ ,ಡಾ ಸಮೀಕ್ಷಾ ,ಡಾ ಸಚಿನ್ ಡಾ ಅಭಿಜಿತ್ ,ಡಾ ರಕ್ಷಿತ್ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Leave a Reply

Your email address will not be published. Required fields are marked *