ವೈದ್ಯೆ ಸುಮನಾ ರಾವ್ ಅವರಿಗೆ ನಿಮ್ಮದು ಒಂದು ಸಲಾಂ ಇರಲಿ ; ಪುತ್ರಿಯ ಮದುವೆಗೆ ಇಟ್ಟಿದ್ದ 50 ಲಕ್ಷ ರೂ. ಹಣವನ್ನು ಪ್ರವಾಹ ಸಂತ್ರಸ್ತರಿಗೆ ನೀಡಿ ಹೃದಯ ವೈಶಾಲ್ಯತೆ, ತಾಯ್ನಾಡ ಪ್ರೇಮ ಮೆರೆದ ಮಹಾನ್ ಮಹಿಳೆ

ಹೀಗೂ ಇದ್ದಾರೆ ತಾಯ್ನಾಡ ಪ್ರೇಮಿಗಳು ಹಾಗೂ ಸಂತ್ರಸ್ತರಿಗೆ ಮಿಡಿಯುವ ಹೃದಯ ವೈಶಾಲ್ಯತೆಯುಳ್ಳ ಮಹನೀಯರು.

ಉಳ್ಳವರು ನೀಡುವುದು ಸಹಜವೇ. ಆದರೆ ಮಹಿಳಾ ವೈದ್ಯರೊಬ್ಬರು ತಮ್ಮ ಪುತ್ರಿಯ ಮದುವೆಗೆಂದು ಸಂಗ್ರಹಿಸಿಟ್ಟಿದ್ದ ಬರೋಬ್ಬರಿ 50 ಲಕ್ಷ ರೂ. ಗಳನ್ನು ಕರ್ನಾಟಕದ ನೆರೆ ಸಂತ್ರಸ್ತರಿಗೆ ನೀಡುವ ಮೂಲಕ ಕರ್ನಾಟಕದ ಕೀರ್ತಿಯನ್ನು ಬೆಳಗಿದ್ದಾರೆ. ತಾಯ್ನೆಲದ ಪ್ರೇಮ ಹಾಗೂ ಸಂತ್ರಸ್ತರಿಗೆ ಹಿಡಿದಿರುವ ಈ ಮಹಿಳೆಯ ಸಹೃದಯತೆ ನಿಜಕ್ಕೂ ಆನಂದಬಾಷ್ಪಗಳನ್ನು ತರುತ್ತದೆ.

ಇಷ್ಟೊಂದು ಪ್ರಮಾಣದ ಹಣವನ್ನು ನೀಡುವುದರ ಜೊತೆಗೆ ತನಗೆ ನೆರೆಪೀಡಿತ ಪ್ರದೇಶಗಳಿಗೆ ಬಂದು ಸಹಾಯ ಮಾಡಲು ಸಾಧ್ಯವಾಗದ್ದರಿಂದ ಅವರು ಕ್ಷಮೆ ಕೇಳಿರುವುದು ನಮ್ಮ ನಡುವೆ ಇರುವ ” ಉಳ್ಳವರಿಗೆ ಅದು ಮಾದರಿಯಾಗಲಿ “

ಭಾರಿ ಮಳೆಯಿಂದಾಗಿ ಇಡೀ ರಾಜ್ಯ ತತ್ತರಿಸಿದೆ. ನೆರೆ ಸಂತ್ರಸ್ತರಿಗೆ ಬಹುತೇಕರು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ. ಕೆಲವರು ಪ್ರವಾಸವನ್ನು ರದ್ದು ಮಾಡಿ ಆ ಹಣವನ್ನು ಪ್ರವಾಹ ಸಂತ್ರಸ್ತರಿಗೆ ನೀಡಿದ್ದಾರೆ . ಇನ್ನೂ ಕೆಲವರು ಮನೆಗೆಂದು ತಂದಿಟ್ಟಿದ್ದ ದಿನಸಿ ಧಾನ್ಯಗಳನ್ನು ಪ್ರವಾಹ ಪೀಡಿತರಿಗೆ ನೀಡಿದ್ದಿದೆ. ಈ ಮಧ್ಯೆ ವೈದ್ಯರೊಬ್ಬರು ಮಗಳ ಮದುವೆಗೆಂದು ತೆಗೆದಿಟ್ಟ 50ಲಕ್ಷ ರೂ. ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸುಮನ ರಾವ್ 50 ಲಕ್ಷ ರೂ. ಹಣವನ್ನು ಪರಿಹಾರವಾಗಿ ನೀಡಿದವರು ಕರ್ನಾಟಕದ ಮೂಲದವರಾದ ಇವರು ಮುಂಬೈನಲ್ಲಿ ವಾಸವಾಗಿದ್ದಾರೆ. ಸಾಮಾಜಿಕ ಡಾಕ್ಟರ್. ಸಮಾಜಸೇವೆ ನನ್ನ ಉಸಿರು. ನಾನು ಕನ್ನಡತಿ. ನಾನು ಕನ್ನಡಿಗಳೆಂಬ ಋಣವೂ ಮಾತ್ರವೇ ನನ್ನದು. ಎಂದು ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 50ಲಕ್ಷ ರೂ. ಹಣವನ್ನು ಪರಿಹಾರವಾಗಿ ನೀಡುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ.

ಈ ಬಗ್ಗೆ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದ ಅವರು, ಮಗಳ ಮದುವೆಗೆಂದು ಸುಮಾರು 50 ಲಕ್ಷ ರೂಪಾಯಿ ತೆಗೆದಿಟ್ಟಿದ್ದೆ. ಅದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತಿದ್ದೇನೆ. ಇಷ್ಟು ಪರಿಹಾರ ನೀಡಲು ಮಾತ್ರ ನನ್ನ ಕೈಯಲ್ಲಿ ಸಾಧ್ಯ ತಾಯ್ನೆಲದ ಋಣ ತೀರಿಸಲು ಬಂದು ಅವಕಾಶ ಇದು, ಎಂದಿದ್ದಾರೆ.

ಅಲ್ಲದೇ, ಸಂತ್ರಸ್ತರ ನಡುವೆ ಇದ್ದು ಸಹಾಯ ಮಾಡಲು ಸಾಧ್ಯವಾಗಿಲ್ಲವಲ್ಲ ಎನ್ನುವ ಬೇಸರ ಅವರನ್ನು ಕಾಡುತ್ತಿದೆಯಂತೆ. ಇಲ್ಲಿ ವಿಪರೀತ ಮಳೆ. ಮಳೆಗೆ ನಲುಗಿದ ಜನರ ನಡುವೆ ನಾನಿರುವೆ. ತಾಯ್ನಾಡಿನ ಸೇವೆ ಮಾಡಲು ಸಾಧ್ಯವಾಗುತ್ತಿಲ್ಲ, ಕ್ಷಮೆ ಇರಲಿ, ಎಂದು ಅವರು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *