“ವಿಶ್ವ ರತ್ನ”ರಿಗೆ “ಭಾರತ ರತ್ನ”ವೇ?

 

ಸಿದ್ದಗಂಗೆ ತಲುಪಿದಾಗ ಬೆಳಿಗ್ಗೆ 11 ಗಂಟೆ, ಅದಾಗಲೇ ಬಿರುಬಿಸಿಲು ಏರಿತ್ತು, ತುಮಕೂರು ನಗರದಿಂದ ಸಿದ್ದಗಂಗಾ ಮಠಕ್ಕೆ ಸಾಗುವ ಮಾರ್ಗದಲ್ಲಿ ಸಿದ್ಧಗಂಗ ಶ್ರೀಗಳ ಭಕ್ತರು ಅಲ್ಲಲ್ಲಿ ಪಾನಕ, ಮಜ್ಜಿಗೆ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಹರಿದು ಬಂದ ಜನಸಾಗರ ನಿಯಂತ್ರಿಸಲು ಸ್ವಯಂಸೇವಾ ಮಂದಿ ಹಾಗೂ ಪೊಲೀಸರು ಶ್ರಮಿಸುತ್ತಿದ್ದರು. ಎತ್ತ ನೋಡಿದರೂ ಜನ,


ಸಭೆ ಸಮಾರಂಭಗಳಲ್ಲಿ ಜನ ಸೇರಿಸಲು ವಾಹನದ ವ್ಯವಸ್ಥೆ ಹಾಗೂ ಹಣ ನೀಡುವ ನಮ್ಮ ರಾಜಕಾರಣಿಗಳು ಸ್ವಪ್ರೇರಣೆಯಿಂದ ಆಗಮಿಸಿದ ಮಹಾಜನಪ್ರವಾಹ ಕಂಡು ದಂಗಾಗಿ ಹೋಗಿರಬಹುದು. ಹೌದು, ವ್ಯಕ್ತಿಯೊಬ್ಬರ ಜನಪ್ರಿಯತೆ ಹಾಗೂ ಅವರಿಗೆ ಜನತೆ ನೀಡುವ ಗೌರವ ಒಂದೇ ಬಾರಿಗೆ ಸಂಪಾದಿಸಿದ್ದಲ್ಲ, ಸತತ ಪ್ರಯತ್ನ, ಶ್ರಮದ ದುಡಿಮೆ, ಪ್ರಾಮಾಣಿಕ ಕಳಕಳಿ, ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿಫಲವನ್ನು ಕಿಂಚಿತ್ತೂ ನಿರೀಕ್ಷಿಸದೆ ಸತ್ಕಾರ್ಯದಲ್ಲಿ ತೊಡಗುವ ದೃಢ ಸಂಕಲ್ಪ ಇದ್ದವರಿಂದ ಮಾತ್ರ ಇದು ಸಾದ್ಯ. ಸಿದ್ಧಗಂಗೆಯ ಸಿರಿ, ನಡೆದಾಡುವ ದೇವರಿಂದ ಮಾತ್ರ ಇದು ಸಾದ್ಯ. ಜಾತಿ ಮತ ಪಂಥದ ಬೇಧ ಇಲ್ಲದೆ ಸರ್ವಜನಾಂಗದ ಬಡ ಮಕ್ಕಳ ಪಾಲಿನ ತ್ರಿವಿಧದ ಡಾಸೋಹಮೂರ್ತಿ ಆಗಿರುವ ಈ ದೇವಾಲಯದ ದೇವರನ್ನು ನಾನು ದರ್ಶನ ಮಾಡಿದೆ, 2 ವಸಂತಗಳ ಕೆಳಗೆ ಅವರ ಪಾದಮುಟ್ಟಿ ನಮಸ್ಕರಿಸಿದ ಭಾಗ್ಯ ನನ್ನದಾಗಿದೆ.

111ರ ವರ್ಷದಲ್ಲೂ ಅವರ ಜೀವನೋತ್ಸಾಹ ಒಂದು ಸೋಜಿಗವೇ ಸರಿ.
ಭಾರತರತ್ನಾ ಇಂಥವರಿಗಲ್ಲದೆ ಮತ್ತ್ಯಾರಿಗೆ ಕೊಡಮಾಡಲು ಇದೆ ಎಂಬುದೇ ಪ್ರಶ್ನೆ?
ವಿಶ್ವ ರತ್ನವನ್ನು ಮೀರಿದ ಗೌರವ ಹೊಂದಿರುವ ಪರಮಪೂಜ್ಯ ಕಾಯಕಯೋಗಿಗೆ ಪ್ರಶಸ್ತಿಗಳ ಆಸೆ ಇದ್ದೇತೇ, ಇದು ನಾವು ಅವರಿಗೆ ಅರ್ಪಿಸುವ ಕಿರುಕಾಣಿಕೆ ಅಷ್ಟೇ,
ನಾವುಗಳು ಇವರ ಕಾಲದಲ್ಲೇ ಬದುಕಿದ್ದೀವಿ ಎಂಬುದೇ ನಮ್ಮ ಹಿರಿಮೆಯಲ್ಲದೆ ಮತ್ತೇನು?
ಅವರು ಮತ್ತಷ್ಟು ಹೆಚ್ಚು ದಿನಬಾಳಲಿ, ನಮಗೆ ದಾರಿದೀಪ ಆಗಿರಲಿ.

ಜಾತಿ ಜಾತಿಗಳ ಹೆಸರಿನಲ್ಲಿ ಇಂದು ಸಮಾಜ ಛಿದ್ರ ಛಿದ್ರ ಆಗುತ್ತಿರುವುದಕ್ಕೆ ಈ ಹಿರಿಯ ಚೇತನ ಅದೆಷ್ಟು ನೊಂದುಕೋಂಡಿದೆಯೋ?
ಅವರಲ್ಲಿ ನಾವು ಕ್ಷಮೆ ಯಾಚಿಸೋಣ.ಯಾರೋ ಪರಮ ಪಾಪಿಗಳ ಈ ಕೃತ್ಯಕ್ಕೆ ಶಿರಬಾಗಿ ಕ್ಷಮೆ ಕೋರಿ, ತಪ್ಪು ಒಪ್ಪಿಕೊಳ್ಳೋಣ.

Leave a Reply

Your email address will not be published. Required fields are marked *