ವಿಶ್ವಕಪ್ ನಲ್ಲಿ ಆಡುವ 15 ಭಾರತೀಯ ಆಟಗಾರರು

ವಿರಾಟ್ ಕೊಹ್ಲಿ (ನಾಯಕ ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆಎಲ್ ರಾಹುಲ್,
ವಿಜಯಶಂಕರ್, ಎಂಎಸ್ ಧೋನಿ, (ವಿಕೆಟ್ ಕೀಪರ್) ಕೇದಾರ್ ಜಾಧವ್, ದಿನೇಶ್ ಕಾರ್ತಿಕ್ಯ, ಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್,ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ .ವಿಶ್ವಕಪ್ ತಂಡದಲ್ಲಿ ಎರಡನೇ ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ಸ್ಥಾನ ಪಡೆದುಕೊಂಡಿದ್ದು

ಉದಯೋನ್ಮುಖ ಆಟಗಾರ ರಿಷಬ್ ಪಂತ್ ರನ್ನು ಕೈಬಿಡಲಾಗಿದೆ ಅಲ್ಲದೆ ನಾಲ್ಕನೇ ಕ್ರಮಾಂಕದ ಸಮಸ್ಯೆಗೆ

ಇನ್ನು ಈ ಬಾರಿಯ ವಿಶ್ವಕಪ್ ತಂಡದಲ್ಲಿ ಕೆಎಲ್ ರಾಹುಲ್ ಸ್ಥಾನ ಪಡೆದುಕೊಂಡಿದ್ದು ಕರ್ನಾಟಕದ ಏಕೈಕ ಕನ್ನಡಿಗ ಮಿಂಚಲು ತಯಾರಾಗಿದ್ದಾರೆ ಕಳೆದ ಬಾರಿಯ ವಿಶ್ವಕಪ್ ತಂಡದಲ್ಲಿ ಕರ್ನಾಟಕ ಯಾವುದೇ ಆಟಗಾರರು ತಂಡದಲ್ಲಿರಲಿಲ್ಲ ಆದರೆ ಈ ಬಾರಿ ಈ ಕೊರಗನ್ನು ರಾಹುಲ್ ನೀಗಿಸಿದ್ದಾರೆ ರಿಸರ್ವ್ ಓಪನರ್ ಆಗಿ ರಾಹುಲ್ ಗೆ ಅವಕಾಶ ಸಿಕ್ಕಿದೆ ಸದ್ಯ ಉತ್ತಮ ಫಾರ್ಮ್ನಲ್ಲಿರುವ ರಾಹುಲ್ ವಿಶ್ವಕಪ್ ವರೆಗೂ ಇದೇ ಲಯದಲ್ಲಿ ಬ್ಯಾಟ್ ಬೀಸಿದರೆ ಆಡುವ ಬಳಗದಲ್ಲೂ ಅವಕಾಶ ಸಿಗಲಿದೆ. ರಾಹುಲ್ ಹೆಚ್ಚಿನ ಏಕದಿನ ಪಂದ್ಯಗಳನ್ನು ಮಾಡಿಲ್ಲವಾದರೂ ಆಡಿರುವ ಕಡಿಮೆ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿ ಆಯ್ಕೆದಾರರ ಗಮನ ಗೆದ್ದಿದ್ದಾರೆ ರಾಹುಲ್ ರನ್ನು ಹರಿದರೂ ಒಪ್ಪವಾಗಿ ಆಯ್ಕೆ ಮಾಡಲಾಗಿದೆ ಆದರೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬ್ಯಾಟ್ ಬೀಸಬಲ್ಲರು .

ಭಾರತ ಕ್ರಿಕೆಟ್ ತಂಡ ಈವರೆಗೆ ಒಟ್ಟು ಎರಡು ಬಾರಿ ವಿಶ್ವಕಪ್ ಗೆದ್ದು ಬೀಗಿದೆ .1983 ರಲ್ಲಿ ಕಪಿಲ್ ದೇವ್ ಹಾಗೂ 2011 ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ವಿಶ್ವಕಪ್ ಗೆ ಮುತ್ತಿಕ್ಕಿತ್ತು. ಸದ್ಯ ಮೂರನೇ ಬಾರಿ ಭಾರತ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯಲು ಭಾರತ ಬಲಿಷ್ಠ ತಂಡದಿಂದ ರೆಡಿಯಾಗಿದೆ .
ಇದೇ ಮೇ 30 ರಿಂದ ವಿಶ್ವಕಪ್ ಮಹಾ ಸಂಗ್ರಾಮಕ್ಕೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದ್ದು, ಜೂನ್ 5 ರಂದು ಭಾರತ ತನ್ನ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ .ಭಾರತ ತಂಡದಲ್ಲಿ ಆಡುವುದು ಪ್ರತಿ ಭಾರತೀಯ ಕ್ರಿಕೆಟಿಗರ ಕನಸು.ಇಂಥದ್ದರಲ್ಲಿ ಭಾರತ ತಂಡದಲ್ಲಿದ್ದು ವಿಶ್ವ ಕಪ್ ನಲ್ಲಿ ಆಡುವುದೆಂದರೆ.. ಕನ್ನಡಿಗ ಕೆ.ಎಲ್.ರಾಹುಲ್ ಈಗ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ

Leave a Reply

Your email address will not be published. Required fields are marked *