ವಿವಾಹಕ್ಕೂ ಮುನ್ನ ಯುವತಿಯರು ಮೊಬೈಲ್ ಬಳಸಿದರೆ ಈ ಗ್ರಾಮಗಳಲ್ಲಿ ಪಾಲಕರಿಗೆ ದಂಡ : ಹೀಗೊಂದು ಕಾನೂನು

ಹೆಣ್ಣುಮಕ್ಕಳು ತಮ್ಮ ವಿವಾಹಕ್ಕೂ ಮೊದಲು ಮೊಬೈಲ್ ಗಳನ್ನು ಬಳಸಿದರೆ ಅದರಲ್ಲೂ ಆಂಡ್ರಾಯ್ಡ್ ಮೊಬೈಲ್ ಗಳನ್ನು ಬಳಸಿದರೆ ಅಂತಹವರ ಪಾಲಕರಿಗೆ ದಂಡ ವಿಧಿಸುವ ನೂತನ ಕಾನೂನೊಂದು ಕೆಲ ಗ್ರಾಮಗಳಲ್ಲಿ ಜಾರಿಗೆ ಬಂದಿದೆ .

ಹೌದು ,
ಗುಜರಾತ್ನ ಬನಸ್ಕಾಂತ ಜಿಲ್ಲೆಯ ಠಾಕೂರ್ ಸಮುದಾಯದಲ್ಲಿ ಯುವತಿಯರು ಮೊಬೈಲ್ ಫೋನ್ ಬಳಕೆ ಮಾಡದಂತೆ ನಿಷೇಧವಿದೆ .ಇನ್ನು ಬೇರೆ ಜಾತಿ ಯುವಕರನ್ನು ಮದುವೆಯಾದರೆ ಭಾರೀ ಮೊತ್ತದ ದಂಡವನ್ನು ಪಾಲಕರಿಗೆ ವಿಧಿಸಲಾಗುವುದು .
ಜಿಲ್ಲೆಯ 12 ಗ್ರಾಮಗಳಲ್ಲಿ ಈ ಕಾನೂನು ಜಾರಿಗೆ ಬರಲಿದೆ ಎಂದು ಸಮುದಾಯದ ನಾಯಕರು ಹಾಗೂ ಸ್ಥಳೀಯ ಶಾಸಕರು ತಿಳಿಸಿದ್ದಾರೆ. ಮದುವೆಗೂ ಮುನ್ನ ಯುವತಿಯರು ಮೊಬೈಲ್ ಬಳಸಬಾರದು ಒಂದು ವೇಳೆ ಬಳಸಿದರೆ ಅದಕ್ಕೆ ಹೆತ್ತವರೇ ಜವಾಬ್ದಾರಿ ಯಾಗಲಿದ್ದಾರೆ .
ಇನ್ನೂ ಸಮುದಾಯದ ಯುವತಿ ಹಾಗೂ ಯುವಕರು ಬೇರೆ ಜಾತಿಯವರನ್ನು ಪ್ರೀತಿಸಿ ಮದುವೆಯಾದರೆ ಭಾರಿ 1.5 ರಿಂದ 2ಲಕ್ಷ ವರೆಗೆ ದಂಡ ವಿಧಿಸಲಾಗುವುದು ಎಂದು ಹೊಸ ಕಾನೂನು ಜಾರಿಯಾಗಿದೆ.
ಯುವತಿಯರು ಮೊಬೈಲ್ನಲ್ಲಿ ಅನಗತ್ಯ ವಿಡಿಯೊಗಳನ್ನು ನೋಡುವ ಮೂಲಕ ಸಮಯ ವ್ಯರ್ಥ ಮಾಡಬಾರದೆಂದು ಹಾಗೂ ಉತ್ತಮ ರೀತಿಯಲ್ಲಿ ವ್ಯಾಸಂಗ ಮಾಡುವ ದೃಷ್ಟಿಯಿಂದಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕಿ ಗನಿಬೆನ್ ಠಾಕೂರ್ ತಿಳಿಸಿದ್ದಾರೆ .

Leave a Reply

Your email address will not be published. Required fields are marked *