“ವಾಯ್ಸ್ ಆಫ್ ದಾವಣಗೆರೆ “ಯ ಹೆಮ್ಮೆಯ ಗಾಯಕಿ, ಸಂಗೀತ ಶಿಕ್ಷಕಿ ಶ್ರೀಮತಿ ಸಂಗೀತ ರಾಘವೇಂದ್ರ.

ಶ್ರೀಮತಿ ಸಂಗೀತ ರಾಘವೇಂದ್ರ ರವರ ಬಾಲ್ಯ ಜಿವನ

ಹೆಸರಿನಷ್ಟೇ ಇಂಪಾದ ದ್ವನಿಯಿಂದ ಚಿರಪರಿಚಿತರಾಗಿರುವ ಶ್ರೀಮತಿ ಸಂಗೀತ ರಾಘವೇಂದ್ರ ಅವರು ಭದ್ರಾವತಿಯ ಶ್ರೀ ಶಂಕರ್ ಜಿ ವರ್ಣೇಕರ್ ಹಾಗೂ ಶ್ರೀಮತಿ ಉಮಾಬಾಯಿ ಅವರ ಎರಡು ಗಂಡು ಮಕ್ಕಳ ನಂತರ ಮುದ್ದಿನ ಮಗಳಾಗಿ ಇಪ್ಪತ್ತಾರು ಅಕ್ಟೋಬರ್ ವಿಜಯದಶಮಿಯಂದು ಹುಟ್ಟಿದ್ದು .ಇವರದ್ದು ಸಂಗೀತ ವಿದ್ವಾಂಸರ ಕುಟುಂಬವೇನೂ ಅಲ್ಲದಿದ್ದರೂ ಹೆಚ್ಚಾಗಿ ಸಂಸ್ಕೃತಿ ಆಧ್ಯಾತ್ಮಿಕತೆಗೆ ಬೆಲೆಕೊಟ್ಟ ಪರಿವಾರ. ತಂದೆ ತಾಯಿಗಳು ಚಿಕ್ಕಂದಿನಿಂದಲೂ ಭಜನೆ, ಶ್ಲೋಕ ,ರಾಮಾಯಣ ಮಹಾಭಾರತ, ಭಗವದ್ಗೀತೆ ಹೀಗೆ ಇತ್ಯಾದಿ ಆಧ್ಯಾತ್ಮಿಕತೆಯ ರುಚಿಯನ್ನು ನಮಗೆ ಮೊದಲೇ ನೀಡಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ. ಬಾಲ್ಯದಲ್ಲಿ ರಜೆಗೆ ದೊಡ್ಡಮ್ಮನ ಮನೆಗೆ ಹೋದಾಗ ರೇಡಿಯೋದಲ್ಲಿ ಬರುವ ಮಧುರ ಗೀತೆ ಗಳನ್ನು ಕೇಳಿ ಅವುಗಳನ್ನು ದೊಡ್ಡಮ್ಮ ಹೇಳಿಕೊಡುತ್ತಿದ್ದರು ಅಂದಿನಿಂದ ನನಗೆ ಈ ಸಂಗೀತದ ಗೀಳು ಅಂಟಿದ್ದು ಎಂದು ಹೇಳುತ್ತಾರೆ. ಒಟ್ಟಿನಲ್ಲಿ ನನ್ನ ರಕ್ತದಲ್ಲೇ ಸಂಗೀತ ಬೆರೆತದ್ದು ನನ್ನ ತಂದೆ ತಾಯಿ ಹಾಗೂ ದೊಡ್ಡಮ್ಮ ನಿಂದಲೇ ಎಂಬುದು ಅವರ ಮಾತು .ತಾನು ಬಾಲಕಿಯಾಗಿದ್ದಾಗ ಶಾಲೆಯಲ್ಲಿ ಹಾಡಿದ್ದು ಅದನ್ನು ಗುರುತಿಸಿ ಶಿಕ್ಷಕರು ತಂದೆಯನ್ನು ಕರೆಸಿ ಅವರಿಗೆ ಸಂಗೀತ ಅಭ್ಯಾಸ ಕೊಡಿಸಿ ಎಂದು ಹೇಳಿದ ಶ್ರೀಮತಿ ಶಶಿರೇಖಾ ಮಾತಾಜಿ ಅವರನ್ನು ಮತ್ತು ಲತಾ ಮಂಗೇಶ್ಕರ್ ಅವರ ಹಿಂದಿ ಹಾಡುಗಳ ಗೀಳನ್ನು ಅಂಟಿಸಿದ ನೆಚ್ಚಿನ ಶಿಕ್ಷಕಿ ಶ್ರೀಮತಿ ಮೀನಾಕ್ಷಿಯವರನ್ನು ತುಂಬು ಹೃದಯದಿಂದ ಸ್ಮರಿಸುತ್ತಾರೆ .


ಸಂಗೀತ ಅಭ್ಯಾಸದ ವೇಳೆ ಸಹಾಯಹಸ್ತ ನೀಡಿದವರನ್ನು ಸ್ಮರಿಸಿಕೊಂಡ ಶ್ರೀಮತಿ ಸಂಗೀತ ರಾಘವೇಂದ್ರ.

ಬಡತನದಲ್ಲಿದ್ದ ಸಂಗೀತ ರವರಿಗೆ ಈ ಸಂಗೀತ ಅಭ್ಯಾಸಕ್ಕೆ ಸಹಾಯ ಮಾಡಿದಂತಹ ಭದ್ರಾವತಿಯ ಶ್ರೀ ಶಂಕರ ಮಠದ ಧರ್ಮಾಧಿಕಾರಿಗಳಾದ ಶ್ರೀಯುತ ಸುಬ್ಬ ರಾವ್ ಹಾಗೂ ಶ್ರೀಮತಿ ವಿಶಾಲಾಕ್ಷಮ್ಮ ನವರು ಭದ್ರಾವತಿಯ ಪ್ರಸ್ಸಿದ್ಧ ಸಂಗೀತಾ ವಿದೂಷಿ ದಿವಂಗತ ಶ್ರೀಮತಿ H.N.ಶಾರಧಮ್ಮನವರಲ್ಲಿ ಸಂಗೀತಕ್ಕೆ ಸೇರಿಸಿದರು ಅವರು ಕರ್ನಾಟಕ ಶಾಸ್ತ್ರೀಯ ಸಂಗೀತಾವನ್ನು ಸತತವಾಗಿ ಹನ್ನೆರಡು ವರ್ಷಗಳ ಕಾಲ ಒಂದು ನಯಾಪೈಸೆಯನ್ನು ತೆಗೆದುಕೊಳ್ಳದೆ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳನ್ನು ಕಟ್ಟಿಸಿ ಪರೀಕ್ಷೆಯ ಶುಲ್ಕವನ್ನು ಸಹ ಅವರೇ ಕಟ್ಟಿ ನನ್ನ ಸಂಗೀತ ಅಭ್ಯಾಸಕ್ಕೆ ಮುನ್ನುಡಿಯನ್ನು ಬರೆದಿದ್ದರು ಎನ್ನುತ್ತಾರೆ. ಅಂದಿನಿಂದ ನನ್ನನ್ನು “ಇನ್ನು ಮುಂದೆ ವಿದುಷಿ ಸಂಗೀತ ಎನ್ನುವ ಹೆಸರಿನಲ್ಲಿ ನಿನಗೆ ಯಶಸ್ಸು ದೊರೆಯಲಿ” ಎಂದು ಶುಭ ಹಾರೈಸಿದ್ದನ್ನು ನೆನಪಿಸಿಕೊಳ್ಳುತ್ತಾರೆ .ತನಗಷ್ಟೇ ಅಲ್ಲದೇ ಸಾವಿರಾರು ಮಕ್ಕಳಿಗೆ ಸಂಗೀತ ಅಭ್ಯಾಸವನ್ನು ನೀಡಿ ಹೃದಯ ವೈಶಾಲ್ಯತೆ ಮೆರೆದಿರುವ ಮಹಾನ್ ಶಕ್ತಿ ಅವರು ಎಂದು ಸದಾ ಸ್ಮರಿಸುತ್ತಾರೆ ಸಂಗೀತ ಅವರು . ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ MA ಸಮಾಜ ಶಾಸ್ತ್ರದಲ್ಲಿ Rank ಪಡೆದಿದ್ದರು. ಅತೀ ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಸಿಹಿ ಕಹಿ ಅನುಭವಗಳನ್ನು ಪಡೆದ ಸಂಗೀತ ರವರು ಒಮ್ಮೆ ಚಲನಚಿತ್ರ ಗೀತೆಯನ್ನು ಹಾಡಿ ನಂತರ ಆ ಸಿನಿಮಾ ರಿಲೀಸ್ ಆದಾಗ ಅದರಲ್ಲಿ ಅವರ ಧ್ವನಿ ಹೊರತಾಗಿ ಬೇರೆಯರ ಧ್ವನಿಯನ್ನು ಸೇರಿಸಲಾಗಿತ್ತು ಎನ್ನುವ ಕಹಿ ಅನುಭವವನ್ನು ಮೆಲುಕು ಹಾಕಿದ್ದಾರೆ .2008ರಲ್ಲಿ ಮದುವೆಯಾದರು. ದಾವಣಗೆರೆಯ ಶ್ರೀಮತಿ ಪುಷ್ಪಾ ಮಹಾಲಿಂಗಪ್ಪ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಾ ,

ಸಾಧನೆಯ ಶಿಖರವನ್ನೇರಲು ಹಂಬಲಿಸುತ್ತಿರುವ ಸಂಗೀತ ರವರು 2005ರಲ್ಲಿ ಶಿವಮೊಗ್ಗದ ಸರಿ ಗಾಮ ಬೂಗಿ ವೂಗಿ ಸ್ಪರ್ಧೆಯಲ್ಲಿ ಜೂನಿಯರ್ ಲತಾಮಂಗೇಶ್ಕರ್ ಪ್ರಶಸ್ತಿ, 2007 ರಲ್ಲಿ ಭದ್ರಾವತಿ ಯ ರೋಟರಿ ಕ್ಲಬ್ ವತಿಯಿಂದ ಗಾನಶ್ರೀ ಪ್ರಶಸ್ತಿಯನ್ನು ಮತ್ತು ಶಿವಮೊಗ್ಗದ ಪತಂಜಲಿ ಸಂಸ್ಥೆಯಿಂದ ಸುವರ್ಣ ಕರ್ನಾಟಕ ಪತಂಜಲಿ ರತ್ನ ಪ್ರಶಸ್ತಿಯನ್ನು,
2016ರಲ್ಲಿ ಶಿವಮೊಗ್ಗದ ಸಿಂಗಿಂಗ್ ಸ್ಟಾರ್ ಆಫ್ ಕರ್ನಾಟಕ ಕ್ರಿಯೇಟಿವ್ ಗ್ರೂಪ್ ನಿಂದ, 2017 ಜೂನ್ ರಲ್ಲಿ ದಾವಣಗೆರೆ ಕೋಗಿಲೆ ,2017 ಡಿಸೆಂಬರ್ ನಲ್ಲಿ ಸಿಂಗಿಂಗ್ ಸ್ಟಾರ್ ಆಫ್ ಹರಪನಹಳ್ಳಿ , 2018 ಮೇ ನಲ್ಲಿ ಕರ್ನಾಟಕ ಕೋಗಿಲೆ, ಹಾಗೂ 2018 ಅಕ್ಟೋಬರ್ ನಲ್ಲಿ ವಾಯ್ಸ್ ಆಫ್ ದಾವಣಗೆರೆ, ಪ್ರಶಸ್ತಿಗಳನ್ನು ಗಳಿಸಿ ದಾವಣಗೆರೆಯ ಜನತೆಯಲ್ಲಿ ತನ್ನ ಇರುವಿಕೆಯನ್ನು ಸ್ಪಷ್ಟಪಡಿಸಿದ ಹೆಮ್ಮೆ ಸಂಗೀತ ಅವರಿಗಿದೆ.

ಅದೆಷ್ಟೇ ಕಹಿ ಅನುಭವಗಳನ್ನು ಉಂಡರು ತನ್ನೆಲ್ಲಾ ಸಾಧನೆಗೆ ಪ್ರೇರಕ ಶಕ್ತಿ ಆದಂತಹ, ತನ್ನೆಲ್ಲಾ ಪರಿಸ್ಥಿತಿಯಲ್ಲೂ ತನಗೆ ಬೆನ್ನೆಲುಬಾಗಿ ನಿಂತು ಸದಾ ಪ್ರೋತ್ಸಾಹ ನೀಡಿದ ತಂದೆ ತಾಯಿ, ಸೋದರರನ್ನು, ಸಹೋದರಿಯನ್ನು, ಮತ್ತು ತನ್ನ ಬಾಳಸಂಗಾತಿ ರಾಘವೇಂದ್ರ ಅವರನ್ನು ತುಂಬು ಹೃದಯದಿಂದ ಸ್ಮರಿಸುತ್ತಾರೆ .ಮಧುರ ಕಂಠದ ಸಂಗೀತರವರು ಪ್ರಸ್ತುತ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದೆಯಾಗಿದ್ದು, ಸಂಗೀತ ತರಗತಿಗಳನ್ನು ನಡೆಸುತ್ತಿದ್ದಾರೆ. ಸುಗಮ ಸಂಗೀತ ಹಾಗೂ ಹಳೆಯ ಮಧುರಗೀತೆಗಳ ಗಾಯನಕ್ಕಾಗಿ ಮತ್ತು ಸಂಗೀತ ಅಭ್ಯಾಸಕ್ಕಾಗಿ ಇವರನ್ನು ಈ ದೂರವಾಣಿಯಲ್ಲಿ(9141470320,9343381659) ಸಂಪರ್ಕಿಸಬಹುದಾಗಿದೆ.

ಶ್ರೀಮತಿ ಸಂಗೀತ ರಾಘವೇಂದ್ರ ಅವರಿಗೆ ಸಂದ ಸನ್ಮಾನಗಳು.

 1. ಶ್ರೀಶಂಕರಾಚಾರ್ಯ ಶೃಂಗೇರಿಮಠ ಭದ್ರಾವತಿ ಇವರಿಂದ ನವರಾತ್ರಿ ಉತ್ಸವದಲ್ಲಿ ಸನ್ಮಾನ 2005 ರಿಂದ ಪ್ರತಿ ವರ್ಷ .
 2. ಮುಂಬಯಿ ಶ್ರೀ ಗಣಪತಿ ಉತ್ಸವ ಭಕ್ತಿ ಮಂಜರಿ ಕಾರ್ಯಕ್ರಮದಲ್ಲಿ ಸನ್ಮಾನ 2006 ರಲ್ಲಿ .
 3. ಕಡೂರಿನ ಶ್ರೀ ನವದುರ್ಗಾ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಸನ್ಮಾನ 2006-2007ರಲ್ಲಿ.
 4. ಲಯನ್ಸ್ ಕ್ಲಬ್ ಭದ್ರಾವತಿ ಇವರಿಂದ ಸನ್ಮಾನ 2009 ರಲ್ಲಿ.
 5. ಬೆಂಗಳೂರು ದೂರದರ್ಶನದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ 2013ರಲ್ಲಿ .
 6. ಶ್ರೀ ಅಕ್ಷಯ ಕ್ಷೇತ್ರ ಲಕ್ಕವಳ್ಳಿ ಇವರಿಂದ ಸನ್ಮಾನ 2014 ರಲ್ಲಿ.
 7. ಶ್ರೀ ಸತ್ಯಸಾಯಿ ಟ್ರಸ್ಟ್ ದಾವಣಗೆರೆ ಸತ್ಯಸಾಯಿ ಜನ್ಮ ದಿನಾಚರಣೆ ಸಮಾರಂಭದಲ್ಲಿ ಸನ್ಮಾನ 2014 ರಲ್ಲಿ
 8. ಶ್ರೀ ಸತ್ಯ ಸಾಯಿ ಟ್ರಸ್ಟ್ ಭದ್ರಾವತಿ ಇವರಿಂದ ಗುರು ಪೂರ್ಣಿಮೆಗೆ ಸನ್ಮಾನ 2015-2016 ರಲ್ಲಿ.
 9. ಅಂತಾರಾಷ್ಟ್ರೀಯ ದೈವಜ್ಞ ಮಹಿಳಾ ಮಂಡಳಿ ದಾವಣಗೆರೆ ಇವರಿಂದ ಮಹಿಳಾ ದಿನಾಚರಣೆ ಯಂದು ಸನ್ಮಾನ 2018 ರಲ್ಲಿ .
 10. ಶ್ರೀರಾಮ ಮಂದಿರ ದಾವಣಗೆರೆ ಇವರಿಂದ ಹನುಮಾನ್ ಜಯಂತಿಗೆ ಸನ್ಮಾನ 2018 ರಲ್ಲಿ,
 11. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ ದಾವಣಗೆರೆ ಇವರಿಂದ ಶಿವಾಜಿ ಜಯಂತಿಯಂದು ಸನ್ಮಾನ 2018 ರಲ್ಲಿ. 13)ನಾದ ಚೈತನ್ಯ ಸಂಗೀತ ಸಂಜೆ ಶಿವಯೋಗಿ ಮಂದಿರ ದಾವಣಗೆರೆ 2018 ರಲ್ಲಿ.
 12. ನಾಡಿನ ಖ್ಯಾತ ಕವಿ ಸಾಹಿತಿ ಶ್ರೀಯುತ ಎಂ ಎನ್ ವ್ಯಾಸರಾವ್ ಮತ್ತು ಖ್ಯಾತ ಚುಕ್ಕಿ ಚಿತ್ರ ಕಲಾವಿದ ಶ್ರೀ ಮೋಹನ್ ವರ್ಣೇಕರ್ ಅವರಿಂದ ಶ್ರೀಮತಿ ನಲ್ಲೂರು ಗೌರಮ್ಮ ನರಹರಿ ಶೇಟ್ ರೇವಣಕರ್ ಪರಿವಾರದ ಪ್ರತಿಷ್ಠಾನ ಇವರ ಶಿಕ್ಷಣ ಸಿರಿ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸನ್ಮಾನ 2018 ರಲ್ಲಿ .

ಸಂಗೀತ ಕಾರ್ಯಕ್ರಮಗಳು

ತರೀಕೆರೆ, ಕಡೂರು, ಬೀರೂರು, ಮೂಡಿಗೆರೆ, ಶಿಕಾರಿಪುರ, ಜಾವಗಲ್, ಚಿಕ್ಕಮಗಳೂರು, ಚಳ್ಳಕೆರೆ, ಉಡುಪಿ, ಆನೆಗುಂದಿ, ಬಳ್ಳಾರಿ, ಚನ್ನಗಿರಿ, ಶಿರಸಿ, ಯಲ್ಲಾಪುರ, ಹರಿಹರ, ದಾವಣಗೆರೆ, ಶಿವಮೊಗ್ಗ, ಮೈಸೂರು, ಜಗನ್ಮೋಹನ ಪ್ಯಾಲೇಸ್, ಬೆಂಗಳೂರು, ಭದ್ರಾವತಿ, ಮತ್ತು ಕರ್ಕಿ ಮಠ ಇನ್ನು ಮುಂತಾದೆಡೆಗಳಲ್ಲಿ .

ಸಿ. ಡಿ. ದ್ವನಿ ಸುರುಳಿಗಳು

ಶ್ರೀ ಸೋಮೇಶ್ವರ ನಾಮಾವಳಿ, ಶ್ರೀವಿ ಮಲೇಶ್ವರ ನಾಮಾವಳಿ, ಶ್ರೀ ಜ್ವಾಲಾಮಾಲಿನಿ ಭಕ್ತಿಗೀತೆ, ಶ್ರೀ ಗಾಯತ್ರಿ ದೇವಿ ಭಕ್ತಿಗೀತೆ, ಪುಷ್ಪಾಂಜಲಿ, ಶ್ರೀ ಸಾಯಿ ಭಜನ್ಸ್,ದೈವ ಬೆಳಕು, ಶ್ರೀ ದೈವಜ್ಞ ಕುಲದೇವತಾ ವೈಭವ, ಚುನಾವಣಾ ಪ್ರಚಾರ ಗೀತೆ .

ಜನಮಿಡಿತ ದ್ವಿದಶಮಾನೋತ್ಸವ ಸಂಧರ್ಭದಲ್ಲಿ ಸ್ಥಳೀಯ ಕವಿಗಳ ಕವಿತೆಗಳಿಗೆ ರಾಗ ಸಂಯೋಜಿಸಿ ಇನಿದನಿಯಲ್ಲಿ ಹಾಡಿ ಖ್ಯಾತ ಗಾಯಕಿ, ನಾಡೋಜ ಬಿ. ಕೆ. ಸುಮಿತ್ರಾ ಅವರ ಮತ್ತು ನೆರೆದಿದ್ದ ಸಾಹಿತ್ಯಾಸಕ್ತರನ್ನು ರಂಜಿಸಿದ್ದಾರೆ.

ಶ್ರೀಮತಿ ಸುನಿತಾಪ್ರಕಾಶ್

Leave a Reply

Your email address will not be published. Required fields are marked *