ವರ್ಷಕ್ಕೆ ಒಂದು ಕೋಟಿ ರೂಪಾಯಿ ದುಡಿಯುತ್ತೆ ಈ ಹಲಸಿನ ಮರ….!

ಒಂದೇ ಒಂದು ಹಲಸಿನ ತಳಿ ವರ್ಷಕ್ಕೆ ಒಂದು ಕೋಟಿ ರೂಪಾಯಿ ಗಳಿಸಿಕೊಡುತ್ತಿದೆ ಎಂದರೆ ಆಶ್ಚರ್ಯವೇ….ಆದರೆ ಇದು ಸತ್ಯ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಚೇಳೂರು ಗ್ರಾಮದ ಈ ಒಂದು ಹಲಸಿನ ಮರ ಈಗ ಎಲ್ಲಾರನ್ನು ನಿಬ್ಬೆರಗಾಗಿಸಿದೆ.
ಈ ತಳಿಯ ಹೆಸರು “ಸಿದ್ದು” ಹೌದು,”ಸಿದ್ದು ಹಲಸಿನ ತಳಿ”ಈಗ ಅತ್ಯಂತ ಜನಪ್ರಿಯ ಹಲಸಿನ ತಳಿಯಾಗಿದೆ.
ಈ ಹಲಸಿನ ಮರದ ಮಾಲೀಕ ಎಸ್.ಎಸ್.ಪರಮೇಶ್.ಇವರು ತಮ್ಮ ತಂದೆ ಸಿದ್ದಪ್ಪ ಅವರ ಜ್ಞಾಪಕಾರ್ಥವಾಗಿ ಈ ತಳಿಗೆ “ಸಿದ್ದು”ಎಂದು ಹೆಸರಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾಗಿರುವ ಮಾವು ಹಾಗೂ ಹಲಸಿನ ಮೇಳದಲ್ಲಿ ಈ ವಿಶಿಷ್ಠ ತಳಿಯ ಹಲಸಿನ ಹಣ್ಣು ಎಲ್ಲರ ಕಣ್ಣು ಕುಕ್ಕುತ್ತಿದೆ.
ತೋಟಗಾರಿಕೆ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿರುವ ಈ ತಳಿಗೀಗ ಇನ್ನಿಲ್ಲದ ಬೇಡಿಕೆ ಬಂದಿದೆ.
ಹೆಸರಿನಲ್ಲೇ ಭಾರತದಲ್ಲಿ ಸುಮಾರು ನೂರಾ ಮುವತ್ತೇಳಕ್ಕೂ ಅಧಿಕ ವಿವಿಧ ತಳಿಯ ಹಲಸಿನ ಹಣ್ಣುಗಳ ಮರಗಳಿದ್ದು, ಈ ಎಲ್ಲ ಹಣ್ಣುಗಳ ಪೈಕಿ ಸಿದ್ದು ತಳಿಯ ಹಣ್ಣುಗಳನ್ನು ಶ್ರೇಷ್ಠ ಹಾಗೂ ವಿಶಿಷ್ಟ ಎಂದು ಪರಿಗಣಿಸಲಾಗಿದೆ .

ಎರಡು ವರ್ಷಗಳ ಹಿಂದೆ ಈ ಮರದ ಹಣ್ಣುಗಳನ್ನು ಜೈವಿಕ ರಾಸಾಯನಿಕ ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಉಳಿದ ಹಣ್ಣುಗಳಿಗೆ ಹೋಲಿಸಿಕೊಂಡರೆ ಅತಿ ಹೆಚ್ಚು ಪೌಷ್ಟಿಕಾಂಶಗಳನ್ನು ಈ ಹಲಸು ಹೊಂದಿದೆ. ಗಾಢ ಕೆಂಪು ಬಣ್ಣದ ಈ ಹಣ್ಣಿನಲ್ಲಿ ವಿಟಮಿನ್ ಎ ಲೈಕೋಸಿನ್ ಎ ಪೌಷ್ಟಿಕಾಂಶವೂ ಸಹ ಅತಿ ಹೆಚ್ಚಿನ ಪ್ರಮಾಣದಲ್ಲಿದೆ. ಎಂಬುದು ಪ್ರಯೋಗಗಳಿಂದ ತಿಳಿದುಬಂದಿದೆ. ಸರಿಸುಮಾರು 2.44 ಕೆಜಿ ತೂಕವಿರುವ ಈ ಹಣ್ಣಿನ ಪ್ರತಿ 100 ಗ್ರಾಮ್ ಹಣ್ಣಿನಲ್ಲಿ ಎರಡು ಗ್ರಾಂನಷ್ಟು ಲೈಕೋಪಿನ್ ಅಂಶವನ್ನು ಪತ್ತೆ ಹಚ್ಚಲಾಗಿದೆ. ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಲೈಕೋಸಿನ್ ಹೃದಯ ಸಂಬಂಧಿ ಕಾಯಿಲೆಗೆ ರಾಮಬಾಣವಾಗಿದ್ದು, ದೇಹದ ತೂಕ ಇಳಿಸಲು ಸಹ ಸಹಕಾರಿಯಾಗಿದೆ .ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣಿನಲ್ಲಿ ರಕ್ತ ಉತ್ಕರ್ಷಣ ನಿರೋಧಕ ಶಕ್ತಿಯೂ ಹೆಚ್ಚಿದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ ಇದೇ ಕಾರಣಕ್ಕೆ ಈ ಮರ ಹಣ್ಣು ಹಾಗೂ ಈ ತಳಿ ಬೆಳೆಯಲು ಬೇಡಿಕೆಯೂ ಸಾಕಷ್ಟಿದೆ .ಆದರೆ ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ತುಮಕೂರಿನ ತೋಟಗಾರಿಕಾ ವಿಶ್ವವಿದ್ಯಾಲಯದ ಮುಖ್ಯಸ್ಥ ಡಾಕ್ಟರ್ ಕರುಣಾಕರನ್ .
ರೈತರಿಂದ ಈ ತಳಿಗೆ ಹೆಚ್ಚಿದ ಬೇಡಿಕೆ : ಪ್ರತಿ ವರ್ಷದಿಂದ ವರ್ಷಕ್ಕೆ ಈ ತಳಿಯ ಸಸಿಗಳ ಬೇಡಿಕೆಗೆ ಬೇಡಿಕೆ ಹೆಚ್ಚುತ್ತಲೇ ಇದೆ. ವರ್ಷಕ್ಕೆ ಕಡಿಮೆ ಎಂದರೂ ಒಂದು ಲಕ್ಷ ಸಸಿಗಳ ಬೇಡಿಕೆ ಇದೆ, ಆದರೆ ನಮ್ಮಿಂದ 4.500 ಕ್ಕಿಂತ ಹೆಚ್ಚು ಸಸಿಗಳನ್ನು ಪೂರೈಕೆ ಮಾಡಲಾಗುತ್ತಿಲ್ಲ ಎನ್ನುತ್ತಾರೆ ಡಾ ಕರುಣಾಕರನ್. ಪ್ರತಿ ಸಸಿಯನ್ನು 200 ರೂಗಳಿಗೆ ಮಾರಾಟ ಮಾಡಲಾಗುತ್ತದೆ. ಖರ್ಚು ಎರಡು ಲಕ್ಷ ಕಳೆದರೂ ಏಳು ಲಕ್ಷ ಲಾಭ ಉಳಿಯುತ್ತದೆ. ಈ ಪೈಕಿ ರಾಯಲ್ಟಿ ರೂಪದಲ್ಲೂ ನನಗೆ ನಾಲ್ಕು ಲಕ್ಷ ಹಣ ಪ್ರತಿ ವರ್ಷ ಸಂದಾಯವಾಗುತ್ತಿದೆ ಎನ್ನುತ್ತಾರೆ ಮಾಲೀಕ ಪರಮೇಶ್.


ಈ ತಳಿಯನ್ನು ಅಭಿವೃದ್ಧಿಪಡಿಸಲು ಆಸ್ಟ್ರೇಲಿಯ ಮೂಲದ ಕಂಪನಿ ಆಸಕ್ತಿ ವಹಿಸಿತ್ತು ಆದರೆ ಭಾರತೀಯ ತೋಟಗಾರಿಕಾ ಸಂಶೋಧನಾ ಸಮಿತಿ ನೀತಿ ಅನ್ವಯ ವಿದೇಶಗಳಿಗೆ ದೇಶಿ ತಳಿ ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸಲಾಗಿತ್ತು.
ಅಲ್ಲದೆ ಈ ನಿರ್ದಿಷ್ಟ ತಳಿಯನ್ನು ಅದರ ವೈವಿಧ್ಯಕ್ಕಾಗಿ 2017 ರಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಇದೊಂದು ಅನುವಂಶೀಯ ವೈವಿಧ್ಯತೆಯ ಉಸ್ತುವಾರಿ ಎಂದು ನಾಮ ನಿರ್ದೇಶನ ಮಾಡಿದೆ. ಅಲ್ಲದೆ ಈ ಕಸಿ ಮಾಡುವ ಮೂಲಕ ಈ ತಳಿಯ ಅಭಿವೃದ್ಧಿಗೂ ಮುಂದಾಗಿದೆ .

Leave a Reply

Your email address will not be published. Required fields are marked *