ರಾಮಕೃಷ್ಣಾಶ್ರಮದ ಶ್ರೀಗಳ ಮಾತುಗಳೇ ಇಂತವು., ಶಿಕ್ಷಣ ಹಾಗೂ ಶಿಕ್ಷಕರ ಬಗ್ಗೆ ಅವರಾಡುವ ಮಾತುಗಳನ್ನು ಕೇಳಿ…

ಜನಮಿಡಿತ ದಿನಪತ್ರಿಕೆ ಆರಂಭದಿಂದಲೂ ಶಿಕ್ಷಕ ವೃತ್ತಿಯನ್ನು ಹಾಗೂ ಶಿಕ್ಷಣ ಕ್ಷೇತ್ರದಲ್ಲಿರುವವರ ಸೇವೆಯನ್ನು ಒಂದಿಲ್ಲೊಂದು ಕಾರ್ಯಕ್ರಮಗಳ ಮೂಲಕ ಪ್ರೋತ್ಸಾಹಿಸುತ್ತಾ, ಗೌರವಿಸುತ್ತಲೇ ಬಂದಿದೆ. ಪತ್ರಿಕೆಯ ದ್ವಿದಶಮಾನೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಕ್ಕೆ ಪತ್ರಿಕೆ ಆಯ್ದು ಕೊಂಡದ್ದೂ ಸಹ ಶಿಕ್ಷಣ ಕ್ಷೇತ್ರದ ಗಣ್ಯರನ್ನೇ.

ಕಳೆದ ಮೂರು ವಾರಗಳಿಂದ ಪತ್ರಿಕೆ ಆರಂಭಿಸಿರುವ ನೂತನ ಅಂಕಣ ‘ತಸ್ಮೈ ಶ್ರೀ ಗುರುವೇ ನಮಃ’ ಅತ್ಯಂತ ಜನಪ್ರಿಯವಾಗುತ್ತಿದ್ದು, ತಮ್ಮ ನೆಚ್ಚಿನ ಶಿಕ್ಷಕರ ಕುರಿತು ಮನದಾಳದ ಮಾತುಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಅಂಕಣಕ್ಕೆ ಬರಹಗಳ ಮಹಾಪೂರವೇ ಹರಿದು ಬರುತ್ತಿದೆ. ನಿಜಕ್ಕೂ ಹೆಮ್ಮೆಯ ವಿಷಯ.

ರಾಮಕೃಷ್ಣಾಶ್ರಮದ ಶ್ರೀಗಳೊಬ್ಬರು ಸುಶಿಕ್ಷಿತರು, ಸಾಹಿತಿಗಳು ಹಾಗೂ ಶಿಕ್ಷಕರ ಬಗ್ಗೆ ಸಮಾಜ ಹೊಂದಿರಲೇ ಬೇಕಾದ ಮಹತ್ವದ ಕುರಿತು ಆಡಿರುವ ಕೆಲ ಮಾತುಗಳು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಗೌರವವನ್ನು ಇನ್ನಷ್ಟು ಹೆಚ್ಚಿಸಿದೆ.

ದಯಮಾಡಿ ಕೇವಲ ಎರಡೇ ನಿಮಿಷಗಳ ಈ ವಿಡಿಯೋ ನೋಡಿ., ಇಷ್ಟವಾದರೆ ನಿಮ್ಮವರಿಗೂ ಶೇರ್ ಮಾಡಿ.

  • ಸಂಪಾದಕ
    ಜನಮಿಡಿತ ದಿನಪತ್ರಿಕೆ

Leave a Reply

Your email address will not be published. Required fields are marked *