“ರಾಧಾ ರಮಣ”ದ ರಮಣ ಎಷ್ಟೊಂದು ಸರಳ ಜೀವಿ ಗೊತ್ತಾ?

ರಾಧಾರಮನ ಧಾರವಾಯಿಯ ನಾಯಕ ನಟ ರಮಣ ನನ್ನ ಆತ್ಮೀಯ ಮಿತ್ರ ವಾಗೇಶ್ ಪ್ರಸಾದ್ ಅವರ ಅಳಿಯ.ವಾಗೀಶ್ ಪ್ರಸಾದ್ ಅವರು ವೀರಶ್ಯವ ಮಹಾಸಭಾ ರಾಜ್ಯದ ಪ್ರಧಾನ ಕಾರ್ಯದರ್ಶಿ.
ರಮನ್ ಅವರು ದೇವರ ಅಪಾರ ಭಕ್ತರು ಹಾಗೂ ಸಂಪ್ರದಾಯಸ್ತರು ಹೌದು.

ಮೊನ್ನೆ ನಾನು ಸಿದ್ದಗಂಗಾ ಮಠಕ್ಕೆ ಹೋಗಿದ್ದೆ, ನಡೆದಾಡುವ ದೇವರ 111 ನೆ ಜನ್ಮ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲವಾಗಿ ತುಮಕೂರು ತಲುಪಿದ್ದೆ, ಅಲ್ಲಿ ಉಳಿಯಲು ಕೊಠಡಿ ಸಮಸ್ಯೆ ಇದ್ದಕಾರಣ ನಮ್ಮ ಪೂಜ್ಯರು, ಕುಟುಂಬದ ಹಿತ್ಯಷಿಗಳು ಆಗಿರುವ ಯಡಿಯೂರು ಶ್ರೀಕ್ಷೇತ್ರದ ಶ್ರೀಗಳು ತಮ್ಮ ಕ್ಷೇತ್ರದಲ್ಲಿ ವಸತಿ ವ್ಯವಸ್ಥೆ ಮಾಡಿದರು, ಮುಂಜಾನೆ ಯಡಿಯುರೇಶ್ವರ ದೇವರ ದರ್ಶನ ಪಡೆದುಕೊಂಡು ನಂತರ ಶ್ರೀಗಳ ಆಶೀರ್ವಾದ ಪಡೆದು ಹೊರಬಂದೆ. ಆಗ ವಾಗೇಶ್ ಪ್ರಸಾದ್ ಅವರ ಬೇಟಿಯಾಯಿತು. ಅವರು ರಮಣ ಆ ಅವರನ್ನು ಪರಿಚಯಿಸಿದರು.


ಅತ್ಯಂತ ಯಶಸ್ವಿಯಾಗಿ ಮೂಡಿಬರುತ್ತಿರುವ ರಾಧಾ ರಮಣ ಧಾರವಾಹಿಯ ಹೀರೊ ಹಾಗೂ angry young man ಆಗಿ ಅಭಿನಯಿಸುತ್ತಿರುವ ಅವರು ನಿಜ ಜೀವನದಲ್ಲಿ ಎಷ್ಟೊಂದು ಸರಳ ವ್ಯಕ್ತಿತ್ವ ಹೊಂದಿದ್ದಾರೆ ಎಂಬುದು ಹತ್ತಿರದಿಂದ ನೋಡಿದಾಗ ತಿಳಿಯುತ್ತದೆ.
ಅವರನ್ನು ಗುರುತಿಸಿದ ಅಪಾರ ಮಂದಿ ಅವರೊಟ್ಟಿಗೆ ಸೆಲ್ಫಿ ಗೆ ಮುಗಿಬಿದ್ದರೂ ಒಂದಿಷ್ಟೂ ಬೇಸರ ಪಡದೇ ಸಹಕರಿಸಿ ಮುಗುಳ್ನಗೆಯೊಂದಿಗೆ ಎಲ್ಲರೊಡನೆ ಬೆರೆತರು. ತಮ್ಮದು ಯಾವ ಊರು, ಧಾರಾವಾಹಿ ನೋಡುತ್ತಿದಿರಾ ಎಂದು ಕೇಳಿ ಜನರೊಂದಿಗೆ ಆತ್ಮೀಯವಾಗಿ ವರ್ತಿಸುವ ಮೂಲಕ ಅಲ್ಲಿದ್ದವ ಹೃದಯ ಗೆದ್ದರು.


ಜನಪ್ರಿಯತೆ ಬೇರೆ ಸಾರ್ವಜನಿಕ ಜೀವನವೇ ಬೇರೆ, ನಾನು ಶ್ರೀಸಾಮಾನ್ಯರ ಜೊತೆ ಸುಲಭವಾಗಿ ಬೆರೆಯಬಾರದು ಎಂಬ ಧೋರಣೆ ಹೊಂದಿರುವ ಉದಯೋನ್ಮುಖ ನಟರು ಮೇಲಿನ ಘಟನೆ ಇಂದ ಕಲಿಯಬೇಕಿದೆ, ಸಾಮಾನ್ಯರು ತೋರುವ ಪ್ರೀತಿ ಹಾಗೂ ಗೌರವಕ್ಕೆ ಸಮಾನವಾದದ್ದು ಬೇರೆ ಏನು ಇಲ್ಲ ಎಂಬುದನ್ನು ಅವರು ಅರಿಯಬೇಕು.

 

Leave a Reply

Your email address will not be published. Required fields are marked *