ರಾಜ್ಯ ಸಚಿವ ಸಂಪಟ ವಿಸ್ತರಣೆ

ಕೊನೆಗೂ ಖಾತೆ ಹಂಚಿಕೆಯ ಅಧಿಕೃತ ಪಟ್ಟಿ ಬಿಡುಗಡೆ;
ಸಿಎಂ ಬಿಎಸ್ ವೈ ಸಂಪುಟದಲ್ಲಿ ಮೂವರಿಗೆ ಡಿಸಿಎಂ ಪಟ್ಟ

ಕಡೆಗೂ ಯಡಿಯೂರಪ್ಪ ಸಚಿವ ಸಂಪುಟದ ಸದಸ್ಯರಿಗೆ ಖಾತೆ ಹಂಚಲಾಗಿದೆ. ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿ ವಾರ ಕಳೆದ ಬಳಿಕ ಖಾತೆ ಹಂಚಿಕೆ ಅಧಿಕೃತ ಪಟ್ಟಿ ಬಿಡುಗಡೆಯಾಗಿದ್ದು, ಎಲ್ಲಾ ಕುತೂಹಲಕ್ಕೆ ಹಾಗೂ ಗೊಂದಲಕ್ಕೆ ತೆರೆ ಬಿದ್ದಿದೆ. ಇದರೊಂದಿಗೆ ಸಿಎಂ ಬಿಎಸ್ ವೈ ಸಂಪುಟದಲ್ಲಿ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಲಾಗಿದೆ.

ಮೂವರಿಗೆ ಡಿಸಿಎಂ ಪಟ್ಟ
1 . ಗೋವಿಂದ ಕಾರಜೋಳ (ಡಿಸಿಎಂ ನಂ-1)
2. ಅಶ್ವಥ್ ನಾರಾಯಣ (ಡಿಸಿಎಂ ನಂ- 2)
3. ಲಕ್ಷ್ಮಣ್ ಸವದಿ (ಡಿಸಿಎಂ ನಂ- 3)

ರಾಜ್ಯ ನೂತನ ಸಚಿವರಿಗೆ ಖಾತೆ ಹಂಚಿಕೆ

1. ಆರ್ ಅಶೋಕ್ – ಕಂದಾಯ ಖಾತೆ
2. ವಿ. ಸೋಮಣ್ಣ – ವಸತಿ ನಗರಾಭಿವೃದ್ಧಿ ಖಾತೆ
3. ಬಸವರಾಜ್ ಬೊಮ್ಮಾಯಿ – ಗೃಹ ಖಾತೆ
4. ಕೆ. ಎಸ್. ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
5. ಜಗದೀಶ್ ಶೆಟ್ಟರ್ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ
6. ಲಕ್ಷ್ಮಣ್ ಸವದಿ – ಸಾರಿಗೆ ಇಲಾಖೆ
7. ಗೋವಿಂದ ಕಾರಜೋಳ – ಲೋಕೋಪಯೋಗಿ, ಸಮಾಜ ಕಲ್ಯಾಣ
8. ಡಾ. ಅಶ್ವತ್ ನಾರಾಯಣ್ – ಉನ್ನತ ಶಿಕ್ಷಣ ಮತ್ತು ಐಟಿ-ಬಿಟಿ
9. ಜೆ. ಸಿ. ಮಧುಸ್ವಾಮಿ – ಕಾನೂನು ಮತ್ತು ಸಂಸದೀಯ, ಸಣ್ಣನೀರಾವರಿ
10. ಬಿ. ಶ್ರೀರಾಮುಲು – ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ
11. ಸುರೇಶ್ ಕುಮಾರ್ – ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
12. ಪ್ರಭು ಚೌಹಾಣ್ – ಪಶು ಸಂಗೋಪನಾ ಖಾತೆ
13. ಹೆಚ್. ನಾಗೇಶ್ – ಅಬಕಾರಿ
14. ಸಿಸಿ ಪಾಟೀಲ್ – ಗಣಿ ಮತ್ತು ಭೂ ವಿಜ್ಞಾನ ಇಲಾಖೆ
15. ಸಿ.ಟಿ. ರವಿ – ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ
16. ಕೋಟಾ ಶ್ರೀನಿವಾಸ್ ಪೂಜಾರಿ – ಮುಜರಾಯಿ , ಮೀನುಗಾರಿಕೆ, ಬಂದರು
17. ಶಶಿಕಲಾ ಜೊಲ್ಲೆ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಸಿಎಂ ಬಳಿ ಉಳಿದ ಪ್ರಮುಖ ಖಾತೆಗಳು
ಸಿಎಂ ಬಿಎಸ್ ವೈ ಬಳಿ ಹಣಕಾಸು, ಸಹಕಾರ , ವೈದ್ಯಕೀಯ ಶಿಕ್ಷಣ, ಜಲಸಂಪನ್ಮೂಲ, ನಗರಾಭಿವೃದ್ಧಿ, ಬೆಂಗಳೂರು ನಗರಾಭಿವೃದ್ಧಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಖಾತೆಗಳು ಉಳಿದಿವೆ.

Leave a Reply

Your email address will not be published. Required fields are marked *