ರಾಜ್ಯದ ವೈದ್ಯೆಗೆ ಅಮೇರಿಕಾದಲ್ಲಿ “ಡ್ರೈವ್ ಆಫ್ ಹಾನರ್”
ಒಂದೆಡೆ ನಮ್ಮ ರಾಜ್ಯದ ಕೆಲವು ಪ್ರದೇಶಗಳಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರು ಹಾಗೂ ಪೋಲಿಸರ ಮೇಲೆ ಹಲ್ಲೆ ಪ್ರಕರಣಗಳು ವರದಿಯಾಗುತ್ತಲೇ ಇದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಕೊರೋನಾ ಚಿಕಿತ್ಸೆಯಲ್ಲಿ ನಿರತರಾಗಿರುವ ವೈದ್ಯರಿಗೆ ಅಮೇರಿಕಾದಲ್ಲಿ ಅದೆಂತಹ ಅರ್ಥಪೂರ್ಣ ಗೌರವ ನೀಡಿ ಅವರ ಸೇವೆಯನ್ನು ಶ್ಲಾಘಿಸಲಾಗುತ್ತದೆ ಎಂಬುವುದಕ್ಕೆ ಪುಟ್ಟ ಉದಾಹರಣೆ ಇಲ್ಲಿದೆ.
ಈ ವಿಡಿಯೋದಲ್ಲಿ ಕಾಣುತ್ತಿರುವ ವೈದ್ಯೆ ಡಾ|| ಉಮಾ ಮಧುಸೂಧನ್. ಇವರು ಮೂಲತಃ ಮೈಸೂರಿನವರು. ಕೊರೊನಾ ಚಿಕಿತ್ಸೆಯಲ್ಲಿ ನಿರತರಾಗಿರುವ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಪೋಲಿಸ್ ವಾಹನಗಳು, ಫೈರ್ ಬ್ರಿಗೇಡ್ ಗಳು, ಆಸ್ಪತ್ರೆಯ ಸಿಬ್ಬಂದಿ ವರ್ಗ ಹಾಗೂ ಇತರೇ ವಾಹನಗಳು ಈ ವೈದ್ಯೆಯ ಮನೆಯ ಮುಂದೆ “ಡ್ರೈವ್ ಆಫ್ ಹಾನರ್” ನೀಡಿರುವ ದೃಶ್ಯ. ನಮ್ಮಲ್ಲಿರುವ ಮತಾಂಧರು, ಆರೋಗ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆಯ ಮೇಲೆ ಹಲ್ಲೆ ನಡೆಸಲು ಮುಂದಾಗಿರುವ ದುಷ್ಕರ್ಮಿಗಳ ಮೇಲೆ ಒಂದು ಪಾಠವಾಗಲಿ ಮತ್ತು ಕಣ್ಣು ತೆರೆಸಲಿ.
ನಿನ್ನೆಯ ಪಾದರಾಯನಪುರ ಘಟನೆ ಹಾಗೂ ಇತ್ತೀಚಿನ ಸಾಧಿಕ್ ನಗರ ಘಟನೆಗಳನ್ನು ಹಾಗೂ ಈ ಮೇಲಿನ ವಿಡಿಯೋವನ್ನು ಹೋಲಿಸಲಾದೀತೇ!! ಮೇಲಿನ ವಿಡಿಯೋ ಮಾನವೀಯ ಮೌಲ್ಯಗಳಿಗೆ ಶಿಖರಕ್ಕೂ ಎತ್ತರದ ಗೌರವ ನೀಡುವುದಾದರೆ ಸಾಧಿಕ್ ನಗರ ಹಾಗೂ ಪಾದರಾಯನಪುರ ಘಟನೆಗಳು ಮಾನವೀಯ ಮೌಲ್ಯಗಳನ್ನು ಅಧಃಪತನಕ್ಕೆ ಇಳಿಸಿದಂತೆ ಅಲ್ಲವೇ..
ಅಮೇರಿಕಾದಲ್ಲಿರುವ ನಮ್ಮ ರಾಜ್ಯದ ವೈದ್ಯೆ ಡಾ|| ಉಮಾ ಮಧುಸೂಧನ್ ರವರಿಗೆ “ಜನಮಿಡಿತ” ಪತ್ರಿಕೆಯಿಂದ ದೊಡ್ಡದೊಂದು ಸಲಾಮ್.!