ರಾಜ್ಯದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಮಗಳ ಮದುವೆಗೆ ಪಡೆದದ್ದು ಒಂದೇ ದಿನದ ರಜೆ..

ಐಎಎಸ್ ,ಐಪಿಎಸ್ ಅಧಿಕಾರಿಗಳ ಮನೆ ಮದುವೆ ಎಂದರೆ ಬಹುತೇಕರ ಕಲ್ಪನೆ ಅದೊಂದು ರಾಜವಂಶದ ತರಹದ ಮಾಡುವೆ ಎಂದು.ಆದರೆ ನಮ್ಮ ರಾಜ್ಯ ಸರ್ಕಾರದ ಹಾಲಿ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಮೇಲಿನ ಭಾವನೆಗಳನ್ನು ಸುಳ್ಳು ಮಾಡಿದ್ದಾರೆ.

ಹೌದು, ತಮ್ಮ ಮಗಳ ಮದುವೆ ಗಾಗಿ ಅವರು ಪಡೆದಿರುವುದು ಕೇವಲ ಒಂದೇ ಒಂದು ದಿನದ ರಜೆ.ಇದು ಅವರ ಸೇವಾಸಕ್ತಿ ಹಾಗೂ ಸೇವಾ ನಿಷ್ಠೆಗೆ ಸಾಕ್ಷಿ.

ಪ್ರತಿಷ್ಠಿತರ ಮದುವೆಗಳು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತವೆ.ರಾಜ್ಯದ ಮುಖ್ಯಕಾರ್ಯದರ್ಶಿ ಆಗಿರುವ ವ್ಯಕ್ತಿಗೆ ಅರಮನೆ ಮೈದಾನ ಕ್ಯೆಗೆ ಎಟಕದ್ದೇನು ಅಲ್ಲ.ಆದರೂ ವಿಜಯಭಾಸ್ಕರ್ ಅವರು ತಮ್ಮ ಮಗಳ ವಿವಾಹವನ್ನು ಕಲ್ಯಾಣಮಂಟಪದಲ್ಲಿ ಸರಳವಾಗಿ ಮಾಡಿಕೊಡುತ್ತಿದ್ದಾರೆ ಮತ್ತು ಇತರೆ ಉನ್ನತ ಅಧಿಕಾರಿಗಳಿಗೆ ಮಾದರಿ ಆಗಿದ್ದಾರೆ.

ಕಲ್ಯಾಣ ಮಂಟಪದ ಬಾಡಿಗೆ ಒಂದು ಲಕ್ಷದ ನಲವತ್ತು ಸಾವಿರ ರೂಪಾಯಿ.ಮದುವೆಗೆ ಓಡಾಡಲು ಹಾಗೂ ಬಂಧುಗಳಿಗೆ ಖಾಸಗಿ ವಾಹನಗಳನ್ನು ನೇಮಿಸಿದ್ದಾರೆ.ಸ್ವತಃ ತಾವು ಸಹ ಅಂದು ಸರ್ಕಾರಿ ಕಾರು ಬಳಸುವುದಿಲ್ಲ.

ಅದ್ದೂರಿ ಮದುವೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯವೊಂದರ ಮುಖ್ಯಕಾರ್ಯದರ್ಶಿ ಇದಕ್ಕಿಂತ ಇನ್ನೇನು ಮಾಡಲು ಸಾಧ್ಯ..
ಶಿಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿ,ಬಿಬಿಎಂಪಿ ಆಯುಕ್ತರಾಗಿ ಸೇವೆ ಸಲ್ಲಿಸಿ ಉತ್ತಮಹೆಸರು ಹಾಗೂ ಗೌರವ ಪಡೆದಿದ್ದ ಅವರು ವಿಧಾನಸೌಧದ ವಿವಿಧ ಹುದ್ದೆಗಳಲ್ಲಿ ದಕ್ಷ,ಪ್ರಾಮಾಣಿಕ ಸೇವೆ ಸಲ್ಲಿಸಿದರು.ರತ್ನಪ್ರಭಾ ಅವರ ಬಳಿಕ ರಾಜ್ಯದ ಮುಖ್ಯಕಾರ್ಯದರ್ಶಿ ಆಗಿ ಅಧಿಕಾರ ವಹಿಸಿಕೊಂಡರು.

ಇದಕ್ಕೂ ಮೊದಲು ಅವರು ವಿವಿಧ ಜಿಲ್ಲೆಗಳ ಜಿಲ್ಲಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

1983 ರ ಕರ್ನಾಟಕ ಕೆಡರ್ ನ ಐಎಎಸ್ ಅಧಿಕಾರಿ ಆಗಿರುವ ವಿಜಯಭಾಸ್ಕರ್ ಅವರು ಶಿಸ್ತು ಹಾಗೂ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ಕೊಡುವ mr.perfect ವ್ಯಕ್ತಿ.ಸಮಯಕ್ಕೆ ಅವರು ನೀಡುತ್ತಿದ್ದ ಮಹತ್ವ ಇತರರನ್ನು ಜಾಗೃತಗೊಳಿಸುವ ತಾಕತ್ತು ಹೊಂದಿತ್ತು.ಅದನ್ನು ಕಣ್ಣಾರೆ ನೋಡಿದ್ದೇನೆ.

ಒಂದೂವರೆ ವರ್ಷದ ಕಾಲ ಅವರ ಒಡನಾಟ ಹೊಂದಿದ ಸಂಧರ್ಭ ಇನ್ನೂ ನೆನಪಿದೆ.

ಅವರು ವಿಜಯಪುರ (ಅಂದಿನ ಬಿಜಾಪುರ)ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.ನಾನು ಬೆಳಗಾವಿಯ ಕನ್ನಡಮ್ಮ ಪತ್ರಿಕೆಗೆ ವಿಜಾಪುರ ಜಿಲ್ಲೆ ವರದಿಗಾರ.ಆಗ ಸಾಕ್ಷರತಾ ಅಭಿಯಾನ ತೀವ್ರವಾಗಿ ಆರಂಭವಾಗಿತ್ತು.ಇದೊಂದು ಅತ್ಯುತ್ತಮ ಕಾರ್ಯಕ್ರಮ ಆಗಿದ್ದರು ಬಹುತೇಕ ಕಡೆ ಕೇವಲ ಸರ್ಕಾರಿ ದುಡ್ಡನ್ನು ಹಾಳುಮಾಡುವ ಯೋಜನೆ ಎಂದೇ ಟೀಕೆಗೆ ಗುರಿಯಾಗಿತ್ತು.

ಹಿಂದುಳಿದ ಜಿಲ್ಲೆ ಎಂದೇ ಆಗ ಕರೆಯಲ್ಪಡುತ್ತಿದ್ದ ಬಿಜಾಪುರ ಜಿಲ್ಲೆ ರಾಜ್ಯದಲ್ಲೇ ಮಾದರಿ ಆಗುವಂತೆ ಮಾಡಿ ತೋರಿಸಿದವರು ಇದೇ ವಿಜಯಭಾಸ್ಕರ್ ಅವರು.

ಸಾಕ್ಷರತೆಯ ರಾತ್ರಿ ಶಾಲೆಗಳು ಕೇವಲ ನೆಪಕ್ಕೆ ನಡೆಯುತ್ತಿವೆ ಎಂದು ಮಾಹಿತಿ ಬಂದರೆ ಖುದ್ದು ಅಲ್ಲಿಗೆ ತೆರಳಿ ಅಲ್ಲಿನ ಮಂದಿಯ ಮನವೊಲಿಸಿ ಯಶಸ್ವಿ ಶಾಲೆಗಳು ನಡೆಯುವಂತೆ ಮಾಡುತ್ತಿದ್ದರು.ಸಾಕ್ಷರತಾ ಅಭಿಯಾನ ಇರುವತನಕ ಅವರು ನಿತ್ಯ ಒಂದು,ಎರಡು ಅಥವಾ ಮೂರು ಹಳ್ಳಿಗೆ ಭೇಟಿ ನೀಡುತ್ತಿದ್ದರು.ಹೀಗೆ ಹೋಗುವಾಗ “ಆರಾಧ್ಯ ಅವರೇ ನೀವು ಬಿಡುವಿದ್ದರೆ ಬರುವಿರಾ”ಎಂಬ ಅವರ ಸೌಜನ್ಯ ದ ನುಡಿಗೆ ಬಹುತೇಕ ದಿನ ಸ್ಪಂದಿಸಿದ್ದೆ .
ಆಗೆಲ್ಲ ಟಿವಿ ಮಾಧ್ಯಮಗಳ ಹಾವಳಿ ಇರಲಿಲ್ಲ.ಸಾಕ್ಷರತೆ ಅಭಿಯಾನ ಕುರಿತು ಜನಜಾಗೃತಿ ಮೂಡಿಸಲು ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಕಳಕಳಿಯಿಂದ ಯತ್ನಿಸಿ ಅದರಲ್ಲಿ ಯಶಸ್ವಿಯೂ ಆದರು.

ಅವರ ಉತ್ಸಾಹ ಹಾಗೂ ಆಸಕ್ತ ಎಷ್ಟು ಪರಿಣಾಮಕಾರಿ ಆಯಿತೆಂದರೆ ಸಾಕ್ಷರತೆ ಆಂದೋಲನದ ಯಶಸ್ಸು ಕುರಿತು “ಕನ್ನಡಮ್ಮ”ಪತ್ರಿಕೆ ವಿಶೇಷ ಪುರವಣಿ ಹೊರತಂದಿತು.ಅದರ ಕಾರ್ಯಕ್ರಮಕೆ ಖ್ಯಾತ ಬರಹಗಾರ ವಿಜಯಸಾಸನುರು ಆಗಮಿಸಿದ್ದರು.(ಫೋಟೋ ನೋಡಿ)ವಿಜಯಭಾಸ್ಕರ್ ಅವರು ಅಧ್ಯಕತೆ ವಹಿಸಿದ್ದರು.

ನಾನು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದೆ.ಅಂದಿನ ನಮ್ಮ ಸಂಪಾದಕರಾದ ಉಮಾದೇವಿ ತೋಪನ್ನ ಅವರು ಸಾಮಾನ್ಯವಾಗಿ ಹೊರ ಊರುಗಳ ಕಾರ್ಯಕ್ರಮಕ್ಕೆ ಹೋಗುವವರು ಅಲ್ಲ.ಅವರು ಸಹ ಬೆಳಗಾವಿಯಿಂದ ಆಗಮಿಸಿದ್ದರು.

ನಿಜಕ್ಕೂ ಮರೆಯದ ಕ್ಷಣಗಳು.
ಇಂದು ವಿಜಯಭಾಸ್ಕರ್ ಅವರ ಮಗಳ ವಿವಾಹ.ಆಮಂತ್ರಣ ಇತ್ತಾದರೂ ಅನಿವಾರ್ಯ ಕಾರಣಗಳಿಂದ ಹೋಗಲು ಆಗುತ್ತಿಲ್ಲ.ಇಲ್ಲಿಂದಲೇ ಹಾರೈಸುತ್ತೇನೆ.
ವಿಜಯಭಾಸ್ಕರ್ ಮಾದರಿ ಅಧಿಕಾರಿ.ಅವರಿಗೊಂದು 🙏
ಜಿ. ಎಂ.ಆರ್ .ಆರಾಧ್ಯ

Leave a Reply

Your email address will not be published. Required fields are marked *