ರಾಜಕಾರಣಿಗಳ ಬಗ್ಗೆ ಕಿಡಿಕಾರಿದ ಐಪಿಸ್ ಅಧಿಕಾರಿ ರೂಪ ನಮ್ಮೂರ ಹೆಣ್ಣು

ಎಂ ಎಲ್ ಎ ಗಳು, ಎಂಪಿಗಳು, ಸಚಿವರು ಹೇಗೆ ಅಧಿಕಾರಿಗಳನ್ನು ಬೆದರಿಸುತ್ತಾರೆ ಹಾಗೂ ಅವರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಯತ್ನಿಸುತ್ತಾರೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಐ ಪಿ ಎಸ್ ಅಧಿಕಾರಿ ಡಿ.ರೂಪ.

ರೂಪ ಅವರು ನಮ್ಮೂರ ಹೆಣ್ಣು ಎಂಬುದು ಹೆಮ್ಮೆಯ ವಿಷಯ.
ನಾನು ಪತ್ರಕರ್ತನಾಗಿ ಅವರನ್ನು ಚೆನ್ನಾಗಿ ಬಲ್ಲೆ.ಆಗ ನಾನು ಜನತಾವಾಣಿ ಪತ್ರಿಕೆಯ ಲ್ಲಿದ್ದೆ. ಹೊಸ ಅಂಕಣಗಳನ್ನು ಆರಂಭಿಸಲಾಗತ್ತು. ವಾಚಕರಿಗೆ ಸಂಪಾದಕರಿಗೆ ಪತ್ರ ಬರೆದು ಊರಿನ ಸಮಸ್ಯೆ,ಪರಿಹಾರ ಸೂಚನೆ, ನಾಗರಿಕ ಸಮಸ್ಯೆಗಳ ಬಗ್ಗೆ ಬರೆಯುವ ಅವಕಾಶ ಅದು.ಆಗಿನ್ನೂ ದಾವಣಗೆರೆ ಎವಿಕೆ college ನಲ್ಲಿ ಪದವಿ ಅಭ್ಯಾಸ ಮಾಡುತಿದ್ದ ರೂಪ ಆಗಲೇ ಬಹು ಮುಖ್ಯವಾದ ಸಮಸ್ಯೆಗಳನ್ನು ಖಡಕ್ ಆಗಿಯೇ ಬರೆದು ಕಳಿಸುತ್ತಿದ್ದರು, ಆಗಲೇ ನಮ್ಮ ಸಂಪಾದಕರು ಈ ಹುಡುಗಿ ಒಳ್ಳೆ journalist ಆಗ್ತಾಳೆ ನೋಡ್ರಿ ಎಂದಿದ್ದರು, ಆದರೆ ರೂಪ ಐಪಿಸ್ ಮಾಡಿ ಪೊಲೀಸ್ ಅಧಿಕಾರಿ ಆದರು.

ಹಂತ ಹಂತವಾಗಿ ಇಲಾಖೆಯಲ್ಲಿ ಹೆಸರು ಗಳಿಸಿದರು,ಪೊಲೀಸ್ ಅಧಿಕಾರಿ ಎಂದರೆ ಹೀಗಿರಬೇಕು ಎಂಬಂತೆ ಬೆಳೆದರು,ನಿಜಕ್ಕೂ ದಾವಣಗೆರೆ ಜನಕ್ಕೆ ಅದೊಂದು ಹೆಮ್ಮೆ,
ಅವರು ಮಾತನಾಡಿರುವ ಈ 9 ನಿಮಿಷದ ವಿಡಿಯೋ ನೋಡಲೇ ಬೇಕಾದದ್ದು.ಅದರಲ್ಲಿರುವ ಅಂಶಗಳನ್ನು ಕನ್ನಡಕ್ಕೆ ಅನುವಾದ ಮಾಡಬೇಕು ಎಂದುಕೊಂಡೆ,ಆದರೆ ಅವರದ್ದೇ ಶ್ಯಲಿಯಲ್ಲಿ ನೋಡಿದರೆ ಮಾತ್ರ ಮನ ಮುಟ್ಟುತ್ತದೆ,ನಮ್ಮ ರಾಜಕಾಕರಣಿಗಳ ಬಗ್ಗೆ ಜಿಗುಪ್ಸೆ ಮೂಡುತ್ತದೆ.

ಅಧಿಕಾರಿಗಳು ಏಕೆ ತಿರುಗಿಬೀಳುವುದಿಲ್ಲ ಎಂಬುದರ ಮರ್ಮ ಅರಿವಿಗೆ ಬರುತ್ತದೆ.
ಆತ್ಮೀಯರೇ, ಖಂಡಿತ ಈ ವಿಡಿಯೋ ನೋಡಿ ಹಾಗೂ ಶೇರ್ ಮಾಡಿ,ಹಾಗೆ ನಮ್ಮ ರೂಪ ಮೇಡಂ ಅವರಿಗೆ ಒಂದು ಸೆಲ್ಯೂಟ್ ಹೇಳಿ.

Leave a Reply

Your email address will not be published. Required fields are marked *