ಯಡಿಯೂರಪ್ಪನವರಿಗೆ ಎದ್ದು ನಿಂತು ಅಭಿನಂದಿಸಿ ಗೌರವ ಸಲ್ಲಿಸಿದ ಪ್ರಧಾನಿ ಮೋದಿ

ಹೊಸದೆಹಲಿ, ಡಿ.11- ಕರ್ನಾಟಕದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಹಾಗೂ ಬಿಜೆಪಿ ಪಕ್ಷಕ್ಕೆ ಅತ್ಯಂತ ಪ್ರತಿಷ್ಠೆ ಹಾಗೂ ಭವಿಷ್ಯದ ಪ್ರಶ್ನೆಯಾಗಿದ್ದ ಕರ್ನಾಟಕ ಉಪಚುನಾವಣೆಯಲ್ಲಿ 15 ರಲ್ಲಿ 12 ಸ್ಥಾನಗಳನ್ನು ಜಯಗಳಿಸಿದ ಬಿಜೆಪಿ ಗೆಲುವಿನ ಹೊಣೆ ಹೊತ್ತಿದ್ದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಅವರು ನಿರೀಕ್ಷಿಸಿದ್ದ ಗೌರವವನ್ನೇ ಹೈಕಮಾಂಡ್ ನೀಡಿದೆ‌.

ಇಂದಿಲ್ಲಿ ನಡೆದ ಬಿಜೆಪಿ ಸಂಸದೀಯ ಸಮಿತಿ ಸಭೆಯಲ್ಲಿ ಮೊದಲು ಎದ್ದು ನಿಂತ ಪ್ರಧಾನಿ ನರೇಂದ್ರ ಮೋದಿಯವರು ಉಳಿದ ಸಂಸದರನ್ನೂ ನಿಂತುಕೊಳ್ಳಲು ಸೂಚಿಸಿದರು. ನಂತರ ಯಡಿಯೂರಪ್ಪ ಅವರನ್ನು ಅಭಿನಂದಿಸಿ ಶ್ಲಾಘಿಸಿದರು. ಕರ್ನಾಟಕ ರಾಜ್ಯದ ಜನತೆಗೂ ಅವರು ಕೃತಜ್ಞತೆ ಅರ್ಪಿಸಿದರು.

ಈ ಕುರಿತು ಮಾತನಾಡಿರುವ ಪ್ರಹ್ಲಾದ್ ಜೋಷಿ, ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವ ಮೊದಲು ಪ್ರಧಾನಿ ನರೇಂದ್ರ ಮೋದಿ ಸಿ ಎಂ ಯಡಿಯೂರಪ್ಪ ಅವರಿಗೆ ಎದ್ದು ನಿಂತು ಗೌರವ ಸಲ್ಲಿಸಿದರು.
ಪಕ್ಷದ ಪರವಾಗಿ ಪ್ರಧಾನಿ ವೇದಿಕೆ ಮೇಲೇರುತ್ತಿದ್ದಂತೆ ಗೌರವ ಸಲ್ಲಿಸುವುದು ವಾಡಿಕೆ. ಆದರೆ, ಮೋದಿ ವೇದಿಕೆ ಮೇಲೆ ಹೋಗುತ್ತಿದ್ದಂತೆ ಎಲ್ಲರನ್ನು ಎದ್ದು ನಿಲ್ಲುವಂತೆ ಸೂಚಿಸಿ, ಯಡಿಯೂರಪ್ಪ ಅವರಿಗೆ ಗೌರವ ಸಲ್ಲಿಸುವಂತೆ ತಿಳಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ಬಿಜೆಪಿಗೆ ಮತಚಲಾಯಿಸಿದ ಕರ್ನಾಟಕ ಜನರಿಗೆ ಅಭಾರಿಯಾಗಿದ್ದು ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರದ ಪಾಲಿಗೆ ಈ ಉಪಚುನಾವಣೆ ಸಾಕಷ್ಟು ಮಹತ್ವದ ಪಾತ್ರವಹಿಸಿತ್ತು. ಅನರ್ಹ ಶಾಸಕರಿಗೆ ಟಿಕೇಟ್ ನೀಡಿದ ಸಿ ಎಂ ಬಿ. ಎಸ್. ವೈ ಅವರನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗುವುದರ ಜೊತೆಗೆ ಸ್ಥಿರ ಸರ್ಕಾರಕ್ಕೆ ಜನರು ಆಶೀರ್ವದಿಸಿದರು.

2 thoughts on “ಯಡಿಯೂರಪ್ಪನವರಿಗೆ ಎದ್ದು ನಿಂತು ಅಭಿನಂದಿಸಿ ಗೌರವ ಸಲ್ಲಿಸಿದ ಪ್ರಧಾನಿ ಮೋದಿ

    • August 20, 2021 at 6:28 pm
      Permalink

      This was a reported news. Please contact 9743246559 for further details.

      Reply

Leave a Reply

Your email address will not be published. Required fields are marked *