ಮೋದಿಯವರಿಗೆ ಯು.ಎ.ಇ.ಯ ಅತ್ಯುನ್ನತ ನಾಗರಿಕ ಪ್ರಶಸ್ತಿ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ UAE (ಸಂಯುಕ್ತ ಅರಬ್ ಗಣರಾಜ್ಯ)ದ ಅತ್ಯುನ್ನತ ನಾಗರಿಕ ಪ್ರಶಸ್ತಿ “ಜಾವೇದ್ ಮೇಡಲ್” ಘೋಷಣೆಯಾಗಿದೆ.

ಈ ಪ್ರಶಸ್ತಿಗೆ ಭಾಜನರಾದ ಭಾರತದ ಪ್ರಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.

ಭಾರತ ಹಾಗೂ ಯು.ಎ ಇ.ನಡುವಣ ಐತಿಹಾಸಿಕ ಬಾಂಧವ್ಯ ಬಳವರ್ಧನೆಗೆ ಮೋದಿ ನೀಡಿರುವ ಅನನ್ಯ ಕೊಡುಗೆ ಪರಿಗಣಿಸಿ ಈ ಪ್ರಶಸ್ತಿ ಘೋಷಣೆಯಾಗಿದೆ.

ಚೀನಾ ಅಧ್ಯಕ್ಶ ಜಿಂಪಿಂಗ್,ರಶಿಯಾ ಅಧ್ಯಕ್ಷ ಪುಟಿನ್,ಇಂಗ್ಲೆಂಡಿನ ಮಹಾರಾಣಿ 2 ನೇ ಎಲಿಜಬೆತ್ ಅವರುಗಳು ಯು.ಎ.ಇ.ಯ ಈ ಅತ್ಯುನ್ನತ ಗೌರವಕ್ಕೆ ಈಗಾಗಲೇ ಪಾತ್ರರಾಗಿದ್ದಾರೆ.

Leave a Reply

Your email address will not be published. Required fields are marked *