ಮಿಂಚು ಹುಳು | ನವ್ಯ ಆರ್ ಭಟ್ ಮತ್ತು ಸಂಗೀತ ರಾಘವೇಂದ್ರ | ಸುನಿತಾಪ್ರಕಾಶ್ | ಜನಮಿಡಿತ ಸಂಗೀತ ಸಂಜೆ

ಜನಮಿಡಿತ ಪತ್ರಿಕೆಯು ತನ್ನ 20ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಸಂಗೀತ ಸಂಜೆಯನ್ನು ಪ್ರಸ್ತುತ ಪಡಿಸುತ್ತಿದೆ.

ಕಾರ್ಯಕ್ರಮ :ಜನಮಿಡಿತ ದ್ವಿದಶಮಾನೋತ್ಸವ | ಸಂಗೀತ ಸಂಜೆ
ಗಾಯಕರು: ಸಂಗೀತ ರಾಘವೇಂದ್ರ ಮತ್ತು ನವ್ಯಾ ಆರ್ ಭಟ್
ಸಾಹಿತ್ಯ: ಶ್ರೀಮತಿ ಸುನಿತಾಪ್ರಕಾಶ್
ಸಂಗೀತ ವಾದ್ಯಗಳು: ಗುಡ್ಡಿ ಮತ್ತು ಬಳಗದವರು

ಸಾಹಿತ್ಯ:

ಮಿಂಚು ಹುಳು

ಕತ್ತಲಲ್ಲಿ ದಾರಿ ಹುಡುಕೋ
ಮಿಂಚು ಹುಳುವಿನಂತೆ
ಕೈಯ ಮುಗಿದು ಬೇಡಿ ನಿಂತೆ
ಪ್ರೀತಿ ನೀಡುವಂತೆ

ಜಗದ ಇರುಳ ಕಳೆಯಲು ರವಿಯು
ದಿನವೂ ಮೂಡುವಂತೆ
ಮನದ ಕದವ ತೆರೆದು ನಿಂತೆ
ನಗುವ ಬೀರುವಂತೆ

ಹಣೆಯ ಬರಹ ಗೀಚೋ ವಿಧಿಯು
ಕರುಣೆ ತೋರದಂತೆ
ಕಂಗಳಲ್ಲಿ ಬೇಡಿಕೊಂಡೆ
ಶಾಹಿಯಾಗುವಂತೆ

ಜಗದ ಹಸಿವ ನೀಗಿಸೋ ತಾಯಿ
ಭೇದ ತೋರಳೆಂದು
ಒಲವ ಹಣತೆ ಹಚ್ಚಿ ಕುಳಿತೆ
ಬಾಳು ಬೆಳಗಲೆಂದು

ಜಗದ ಎಲ್ಲ ಕವಿಗಳು ಕೂಡ
ಕಾಳಿದಾಸರಂತೆ
ನನ್ನ ಬಾಳ ಲೇಖನದಲ್ಲಿ
ಪದಗಳಾಗುವಂತೆ

-ಸುನಿತಾಪ್ರಕಾಶ್

YouTube Link: https://youtu.be/OvMxcKiAMxU

Facebook: https://www.facebook.com/janamiditha/videos/681811632234926/


Watch more such videos on https://www.youtube.com/channel/UCy-wQMrpB1B_wITzRB2vNQw?sub_confirmation=1

Leave a Reply

Your email address will not be published. Required fields are marked *