ಮಾಧ್ಯಮಗಳ ಅತಿರೇಕದ ವರದಿಗಳಿಂದ ಜಿಗುಪ್ಸೆ… ಛೇ
ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ವಶಕ್ಕೆ ತೆಗೆದುಕೊಂಡು ಪ್ರಶ್ನಿಸಿತು.ಅವರ ಪ್ರೆಶ್ನೆಗಳು ಹಾಗೂ ಅದಕ್ಕೆ ಅಭಿನಂದ್ ಉತ್ತರಿಸಿದ ರೀತಿ ಹಾಗೂ ಭಾರತದ ಮಾಧ್ಯಮಗಳು ಅದರಲ್ಲೂ ಟಿ.ವಿ.ಮಾಧ್ಯಮಗಳ ಕೆಲಸವನ್ನು ಹೇಗಿರುತ್ತೆ ಎಂದು ಈ ಕೆಳಗಿನ ವಿವರಣೆ ಗಮನಿಸಿದರೆ ನಿಮಗೆ ಖಂಡಿತ ಎಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಹುಚ್ಚು ಜನರ ಕಯ್ಗೆ ಸಿಕ್ಕಿರುವ ಸಾಮಾಜಿಕ ಜಾಲತಾಣಗಳ ಬೇಜವಾಬ್ದಾರಿ text ಗಳ ಕುರಿತು ಜಿಗುಪ್ಸೆ ಮೂಡುತ್ತದೆ.ಮೊದಲು ಇವರನ್ನು ಚಚ್ಚಿ ನಂತರ ಪಾಪಿಸ್ತಾನ ಚಚ್ಛ ಬೇಕು ಎನ್ನಿಸುತ್ತದೆ.
ಪಾಕ್: ಅಭಿ ನಿನ್ನ ಊರು ಯಾವುದು?
ಅಭಿ: ನಿಮಗೆ ಹೇಳುವ ಅಗತ್ಯ ಇಲ್ಲ.ಹೇಳಲಾರೆ.
ಭಾರತದ ಟಿವಿ: ನಾವೀಗ ನಿಮಗೆ ತೋರಿಸುತ್ತಿಯುವುದು ಚೆನ್ನೈ ನಲ್ಲಿ ಇರುವ ಅಭಿ ಅವರ ಮನೆ. ಇಲ್ಲಿ ಅವರು ಅವರ ತಂದೆ,ತಾಯಿ,ಹೆಂಡತಿ ಜೊತೆ ವಾಸ ಇದ್ದರು.ಅವರ ತಂದೆ ಸಹ ನಿವೃತ್ತ ಏರ್ ಕಮಾಂಡರ್.
*
ಪಾಕ್: ನೀನು ಯಾವ ಯುದ್ಧವಿಮಾನದ ಪೈಲೆಟ್?
ಅಭಿ: ನಾನು ಹೇಳುವುದಿಲ್ಲ.ಅದು ದೇಶದ ರಹಸ್ಯ.
ಭಾರತದ ಟಿವಿ: ವಿಂಗ್ ಕಮಾಂಡರ್ ಅಭಿನಂದನ ಅವರು ಮಿಗ್ 21ಯುದ್ಧವಿಮಾನದ ಚಾಲಕರು.ಅವರು ಈ ವಿಮಾನ ಚಾಲನೆಯಲ್ಲಿ ಪರಿಣಿತರು.
ಪಾಕ್: ನೀವು ಏಕೆ ನಮ್ಮ ಗಡಿಯಲ್ಲಿ ಹಾರಾಟ ಮಾಡುತ್ತಿದ್ದಿರಿ?ನಿಮ್ಮ ಉದ್ದೇಶ ಏನಾಗಿತ್ತು?
ಅಭಿ: ಅದು ಸೇನೆಯ ಗೌಪ್ಯತೆಯ ವಿಷಯ.ನಾನು ತಿಳಿಸಲಾರೆ.
ಭಾರತದ ಟಿವಿ: ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಒಡೆದೋಡಿಸಲು ನಡೆಯುತ್ತಿದ್ದ ಕಾರ್ಯಾಚರಣೆಯ ಯುದ್ಧ ವಿಮಾನದ ಪೈಲೆಟ್ ಆಗಿದ್ದರು ಅಭಿನಂದನ್ ಅವರು.ಪಾಕ್ ನ ಎಫ್ 16 ಯುದ್ಧವಿಮಾನವನ್ನ ಹೊಡೆದು ಉರುಳಿಸಿದ್ದರು.
ಪಾಕ್: ಥಾಂಕ್ಸ್ ಇಂಡಿಯನ್ ಮೀಡಿಯಾ.
ಜನರಿಗೆ ತಕ್ಷಣ ಏನಾದರೂ ಒಂದು ಸುದ್ದಿ ಕೊಡಬೇಕು.. ಅದಕ್ಕಾಗಿ ಹೆಚ್ಚು ಟಿಆರ್ಪಿ ಪಡಕೋಬೇಕು, ಹೆಚ್ಚು ಜಾಹಿರಾತು ಪಡಿಬೇಕು ಎನ್ನೋ ಹುಚ್ಚು ಭಾರತದ ಟಿವಿ ಮಾಧ್ಯಮಗಳ ಆಲೋಚನೆ
ನಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಹ ಯಾರೋ ಏನನ್ನೋ ಹಾಕಿದರೆ ಅದನ್ನು ಕುರಿಗಳಂತೆ ಫಾರವಾರ್ಡ್ ಮಾಡುವುದು ಮೊದಲು ನಿಲ್ಲಬೇಕು.ನಮ್ಮಲ್ಲೂ ವ್ಯಯಕ್ತಿಕ ಆಲೋಚನೆಗಳು ಇರಬೇಕು.ನಾಡಿನ,ದೇಶದ ಹಿತ ಅಡಗಿರುವ ಉಪಯುಕ್ತ ಮಾಹಿತಿಗಳನ್ನು ಮಾತ್ರ ಹಾಕಿ.
-ಜಿ.ಎಂ.ಆರ್.ಆರಾಧ್ಯ.