ಮಸೂದ್ ಅಜರ್ ಉಗ್ರ ಎಂದು ಘೋಷಿಸಿದ ವಿಶ್ವಸಂಸ್ಥೆ ಭಾರತಕ್ಕೆ ಭಾರೀ ರಾಜತಾಂತ್ರಿಕ ಗೆಲುವು

ಫುಲ್ವಾಮ ಸೇರಿದಂತೆ ದೇಶದಲ್ಲಿ ಅನೇಕ ಭಯೋತ್ಪಾದಕ ಚಟುವಟಿಕೆಗಳಿಗೆ ಕಾರಣನಾಗಿ ನೂರಾರು ಹತ್ಯೆಯ ರೂವಾರಿ ಎನ್ನಿಸಿರುವ ಮನುಷ್ಯ ರೂಪದ ಪಿಶಾಚಿ ಮಸೂದ್ ಅಜರ್ನನ್ನು ಬುಧವಾರ ವಿಶ್ವಸಂಸ್ಥೆ ಜಾಗತಿಕ ಉಗ್ರಗಾಮಿಗಳ ಪಟ್ಟಿಗೆ ಸೇರ್ಪಡೆ ಮಾಡಿದೆ. ಇದರಿಂದಾಗಿ ಭಾರತಕ್ಕೆ ಬಹುದೊಡ್ಡ ರಾಜತಾಂತ್ರಿಕ ಜಯ ಲಭಿಸಿದಂತಾಗಿದೆ.

ವಿಶ್ವ ಸಂಸ್ಥೆಯ ಸಮಿತಿಯ ಮುಂದೆ ಅನೇಕ ಬಾರಿ ಭಾರತ ಈತನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಿಸುವಂತೆ ಮಾಡಲು ಸತತ ಪ್ರಯತ್ನ ನಡೆಸಿತು. ಆದರೆ ಚೀನಾ ನಾಲ್ಕಕ್ಕೂ ಹೆಚ್ಚು ಭಾರಿ ಭಾರತದ ಈ ಒತ್ತಡಕ್ಕೆ ಹಾಗೂ ಒತ್ತಾಸೆಗೆ ತಡೆಯೊಡ್ಡಿತು. ಆದರೆ ಇಂದು ನಡೆದ ಸಭೆಯಲ್ಲಿ ಚೀನಾ ತನ್ನ ನಿಲುವು ಸಡಿಲಿಸಿತು.

ಪಾಕಿಸ್ತಾನ ಆಪ್ತಮಿತ್ರ ಎಂದೇ ಕರೆಸಿಕೊಳ್ಳುತ್ತಿರುವ ಚೀನಾ ವಿಶ್ವ ಸಂಸ್ಥೆಯಲ್ಲಿ ತನಗಿರುವ ಅಧಿಕಾರವನ್ನು ಬಳಸಿ ತಡೆಯೊಡ್ಡುತ್ತಲೆ ಬಂದಿದ್ದು ಭಾರತದಲ್ಲಿ ಪುಲ್ವಾಮ ಭಯೋತ್ಪಾದಕ ದಾಳಿಯ ಬಳಿಕ ಅಜರ್ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಬೇಕು ಎಂಬ ಭಾರತದ ನಿಲುವಿಗೆ ವಿಶ್ವ ಸಂಸ್ಥೆಯಲ್ಲಿ ಅಮೇರಿಕ, ಬ್ರಿಟನ್ ಹಾಗು ಫ್ರಾನ್ಸ್ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿತು. ಇಂದು ಈ ಘೋಷಣೆಯೊಂದಿಗೆ ಭಾರತ ಈ ಮೇಲ್ಕಂಡ ರಾಷ್ಟ್ರಗಳೊಂದಿಗೆ ತನ್ನ ಬಾಂಧವ್ಯವನ್ನು ಎಷ್ಟು ಗಟ್ಟಿಗೊಳಿಸಿಕೊಂಡಿದೆ ಎಂಬುದಕ್ಕೆ ಸಾಕ್ಷಿ ಯೂ ಆಯಿತು.

Leave a Reply

Your email address will not be published. Required fields are marked *