ಮರೆಯಲಾಗದ ಮಹಾನುಭಾವರು ಶರಣ ಸಿದ್ದಪ್ಪ ಕಂಬಳಿಯವರು

ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಕರ್ನಾಟಕದಲ್ಲಿ ಶಿಕ್ಷಣದ ನೀರೆರೆದರು ಗಾಂಧಿಜಿಯೇ ಬಂದು ಸಿದ್ದಪ್ಪ ಕಂಬಳಿಯನ್ನು ಪರಿಚಯ ಮಾಡಿಸಿ ಎಂದು ಕೇಳಿದ ಮೇರು ವ್ಯಕ್ತಿತ್ವ ಹೊಂದಿರುವ ಶರಣರು. ಅಂಬೇಡ್ಕರವರಿಗೂ ಸಹ ಭಾರತದಲ್ಲಿ ಉನ್ನತ ಹುದ್ದೆಯನ್ನು ಹೊಂದುವಂತೆ ಪ್ರೋತ್ಸಾಹ, ಬೆಂಬಲ ನೀಡಿದವರು. ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯ್ ಪಟೇಲವರು ಸಿದ್ದಪ್ಪ ಕಂಬಳಿಯೆಂದರೆ ಕರ್ನಾಟಕದ ಮಹಾಪುರುಷ ಎನ್ನುವ ಮಟ್ಟಿಗೆ ಬೆಳೆದ, ಗುರುತಿಸಿಕೊಂಡಿರುವ ನಮ್ಮ ಹೆಮ್ಮೆಯ ಸಾಧಕರು. ದೇಶದ ಇತಿಹಾಸ ಪುಟಗಳಲ್ಲಿ ಅಜರಾಮರಾಗಿದ್ದಾರೆ.ಇವರ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷ ಲೇಖನವನ್ನು ಬರೆದಿರುವೇ, ನಮ್ಮವರನ್ನು ನಾವೇ ಗೌರವಿಸಿ, ಸ್ಮರಿಸದೇ ಇದ್ದರೆ ಹೇಗೆ ? ಇಂತಹ ಮಹಾನ್ ಚೇತನಕ್ಕೆ ನನ್ನ ಅನಂತ ನಮನಗಳು.

ಶರಣ ಸಿದ್ದಪ್ಪ ಕಂಬಳಿಯವರು 1882 ರಲ್ಲಿ ಗಂಗವ್ವ ಮತ್ತು ತೋಟಪ್ಪ ದಂಪತಿಗಳ ಮಗನಾಗಿ ಸೆಪ್ಟೆಂಬರ್ 11, 1882ರಲ್ಲಿ ಜನನಿಸಿದರು. ತಂದೆ ಕಂಬಳಿ ಮಾರುವ ವೃತ್ತಿಯಾದ ಕಾರಣ ಕಂಬಳಿಯಂಬ ಅಡ್ಡ ಹೆಸರು ಬಂದಿತು. ಲಕ್ಕುಂಡಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಧಾರವಾಡದಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿದರು. ಮಹಾರಾಷ್ಟ್ರದ ಪುಣೆಯ ಡೆಕ್ಕನ್ ಕಾಲೇಜಿನಲ್ಲಿ B.A ಪದವಿಯನ್ನು 1904ರಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು. ಸರಕಾರದ ನೌಕರಿ ಸಿಗುವುದಾದರೂ ಜೀ ಹುಜುರ ಅನ್ನಬೇಕಾದ ಹುದ್ದೆ ಬೇಡವೇಂದು ಕಾನೂನು ಅದ್ಯಯನ ಕೈಗೊಳ್ಳಲು ಮುಂಬೈಗೆ ಪ್ರಯಾಣ ಬೆಳಸಿದರು. ಕಾನೂನು ಪರೀಕ್ಷೆಯಲ್ಲಿ ಇಡಿ ಮಹಾರಾಷ್ಟ್ರದ ಮುಂಬೈ ರಾಜ್ಯ ಕ್ಕೆ ಪ್ರಥಮರಾಗಿ ಉತ್ತೀರ್ಣರಾದರು..

ಸಿದ್ದಪ್ಪ ಕಂಬಳಿಯವರ ವಕಾಲತ್ತಿನಲ್ಲಿ ಸಾಕಷ್ಟು ಪರಿಣಿತಿ ಪಡೆದಿದ್ದರು. ಇದನ್ನು ಗಮನಿಸಿದ ಅರಿತಸಿರಸಂಗಿ ಲಿಂಗರಾಜ ದೇಸಾಯಿಯವರು ತಮ್ಮದೋಂದು ಕೇಸು ಪ್ರೀವಿ ಕೌನ್ಸಿಲ್ ಎದರು ಹೋದಾಗ ಕಂಬಳಿಯವರನ್ಬು ಲಂಡನ್ ಗೆ ಕಳುಹಿಸಲು ಆಲೋಚಿಸಿದಾಗ ಆಗ ಮೊದಲ ಮಹಾಯುದ್ದದ ಕಾರಣ ಪ್ರಯಾಣ ಅಪಾಯಕಾರಿ ಎಂದು ವಿಚಾರವನ್ನು ಕೈ ಬಿಟ್ಟರು ಲಿಂಗಾರಾಜ ದೇಸಾಯಿಯವರು. 1917ರಲ್ಲಿ ಹುಬ್ಬಳ್ಳಿಯ ನಗರ ಸಭೆಯ ಸದಸ್ಯರಾಗಿ, 1921ನಗರಸಭೆ ಅದ್ಯಕರಾಗಿ, ಅದೇ ಕಾಲಕ್ಕೆ #ವಕೀಲರಸಂಘದ ಅದ್ಯಕ್ಷರಾಗಿ, ಜಿಲ್ಲಾ ಬೋರ್ಢ ಸದಸ್ಯ ರಾಗಿ, ಮುಂಬೈ ವಿಧಾನಪರಿಷತನ ಸದಸ್ಯರಾಗಿ ಆಯ್ಕೆಯಾದರು. 1924ರಲ್ಲಿ ಮುಂಬೈ ವಿಧಾನ ಪರಿಷತ್ ಉಪಸಭಾಪತಿಯಾಗಿ ಆಯ್ಕೆಯಾದ ಮೊದಲಕನ್ನಡಿಗ ಎಂಬ ಇತಿಹಾಸ ನಿರ್ಮಿಸಿದರು. ಇದು ನಮ್ಮ ಹೆಮ್ಮೆಯ ವಿಷಯವಾಗಿದೆ.

ಧಾರವಾಡ ದಲ್ಲಿ ಡೆಪ್ಯುಟಿ ಚನ್ನಬಸಪ್ಪ ನವರು ಸ್ಥಾಪಿಸಿದ ಶಿಕ್ಷಕರ ಟ್ರೆನಿಂಗ್ ಕಾಲೇಜು ಮತ್ತು ಅರಟಾಳ ರುದ್ರಗೌಡ್ರು ಸ್ಥಾಪಿಸಿದ KCD ಕಾಲೇಜುನ್ನು ಬ್ರಿಟಿಷ್‌ ಸರಕಾರ ಆರ್ಥಿಕ ಮಿತವ್ಯಯದ ನೆಪದಡಿ ಅನುದಾನ ಸ್ಥಗಿತಗೂಳಿಸಲು ಪ್ರಯತ್ನಿಸಿದಾಗ ಬ್ರಿಟಿಷ್ ಸರಕಾರಕ್ಕೆ ಸವಾಲು ಹಾಕಿ ಏಕಾಂಗಿ ವೀರರಾಗಿ ಹೋರಾಡಿ ಇವೆರಡು ಸಂಸ್ಥೆಗಳನ್ನು ಉಳಿಸಿ ಉತ್ತರ ಕರ್ನಾಟಕದಲ್ಲಿ ಅಕ್ಷರ ಜ್ಯೋತಿ ಪ್ರಜ್ವಲಿಸಲು ಕಾರಣರಾದರು ಶರಣ ಸಿದ್ದಪ್ಪ ಕಂಬಳಿಯವರು. ಇಂತಹ ಗಟ್ಟಿತನದ ಕೆಲಸ ಬ್ರೀಟಿಷರ ವಿರುದ್ಧ ಮಾಡುವುದು ಸಾಮಾನ್ಯ ವಿಷಯವಲ್ಲ ಆದರೆ ಬ್ರೀಟಿಷ್ ಸರ್ಕಾರಕ್ಕೆ ಸವಾಲು ಹಾಕಿ ಗೆದ್ದರು ಸರ್ ಸಿದ್ದಪ್ಪ ಕಂಬಳಿಯವರು.

ವಿಶೇಷವಾಗಿ ಇಂದಿನ ಅಖಂಡ ಕರ್ನಾಟಕದ ಏಕೀಕರಣ ಪರಿಷತ್ತಿನ ಪ್ರಥಮ ಮತ್ತು 1926 ದ್ವಿತೀಯ ಅಧಿವೇಶನ ದ ಅಧ್ಯಕ್ಷರಾಗಿ ಕರ್ನಾಟಕ ಏಕೀಕರಣಕ್ಕೆ ಗಟ್ಟಿಯಾದ ಬುನಾದಿಯನ್ನು ಹಾಕಿದರು ಸರ್ ಸಿದ್ದಪ್ಪ ಕಂಬಳಿಯವರು ಹಾಕಿದರು. 1930ರಲ್ಲಿ ಲಂಡನಿನಲ್ಲಿ ಜರುಗುವ ದುಂಡು ಮೇಜಿನ ಪರಿಷತ್ತಿಗೆ ಅಹ್ವಾನ ಬಂದಿತು. ಆದರೆ ಅದಕ್ಕೆ ಹಾಜರಾಗಲಿಲ್ಲಾ. ಅದೇ ವರ್ಷ ನವೆಂಬರ್ ನಲ್ಲಿ ಸರ ಸಿದ್ದಪ್ಪ ಕಂಬಳಿ ಮುಂಬೈ ಸರಕಾರದಲ್ಲಿ ಮಂತ್ರಿಯಾದರು ಇದೇ ವಿಶೇಷವಾಗಿತ್ತು. ಇದು ಕನ್ನಡಿಗನೋರ್ವ ಮುಂಬೈ ಸರಕಾರದಲ್ಲಿ ಮಂತ್ರಿಯಾದ ಮೊದಲಿಗರು. ಇದು ಕರ್ನಾಟಕದ ಇತಿಹಾಸದ ಪುಟಗಳಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಟ್ಟ ದಿನವಾಗಿತ್ತು. 1920 ರಲ್ಕಿ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಪ್ರಥಮವಾಗಿ ಶೋಷಿತರ ಬೃಹತ್ ಸಮಾವೇಶ ಹಮ್ಮಿಕೂಂಡರು. ಇದರ ಮುಖ್ಯ ಅಥಿತಿಗಳು ಛತ್ರಪತಿ ಶಾಹುಮಾಹಾಜರು, ಇದರ ಸಾನಿದ್ಯವನ್ನು ಹುಬ್ಬಳ್ಳಿಯ ಸಿದ್ದಾರೂಢ ಶ್ರೀ ಗಳು ವಹಿಸಿದ್ದರು. 1924 ರ ಕಾಂಗ್ರೆಸ ಅಧಿವೇಶನ ದ ಅಧ್ಯಕ್ಷತೆ ವಹಿಸಲು ಗಾಂಧಿ ಜೀ ಬೆಳಗಾವಿಗೆ ಬಂದಾಗ ಧಾರವಾಡದ ರೇಲ್ವೆ ನಿಲ್ದಾಣದ ಲ್ಲಿ ಇಳಿದು ಸಿದ್ದಪ್ಪ ಕಂಬಳಿ ಅಂದರೆ ಯಾರು ಬೇಟಿ ಮಾಡಿಸಿ ಎಂದರು ಗಾಂಧಿಯವರು. ಇದರಿಂದ ಸಿದ್ದಪ್ಪ ಕಂಬಳಿಯವರ ವ್ಯಕ್ತಿತ್ವದ ಎಂತಹದ್ದು ಮತ್ತು ಅವರ ಮಹತ್ವ ಅರಿವಾಗದೇ ಇರಲು ಸಾಧ್ಯವಿಲ್ಲ. ಹಾಗೂ ಅಂಬೇಡ್ಕರ ಅವರು ಬ್ಯಾರಿಸ್ಟರ ಪದವಿ ಮುಗಿಸಿದ ನಂತರ ಅವರ ಚಟುವಟಿಕೆಗಳಿಗೆ ಬೆಂಗಾವಲಾಗಿ ನಿಂತವರು ಸರ್ ಶರಣ ಸಿದ್ದಪ್ಪ ಕಂಬಳಿಯವರು.1932 ಪುಣಾ act ನಲ್ಲಿ ಗಟ್ಟಿಯಾಗಿ ಅಂಬೇಡ್ಕರ್ ಅವರ ಬೆಂಗವಲಾಗಿ, ಪ್ರೋತ್ಸಾಹ ಕೊಟ್ಟು, ಬೆಂಬಲ ನೀಡಿದ ಎಕೈಕ ವ್ಯಕ್ತಿಯಾಗಿ ನಿಂತವರು ಸರ ಸಿದ್ದಪ್ಪ ಕಂಬಳಿಯವರು. ಮತ್ತು 1937 ರಲ್ಲಿ ಮುಂಬಯಿ ವಿಧಾನ ಸಭೆಗೆ ಚುಣಾವಣೆ ನಡೆದಾಗ ಸರ ಸಿದ್ದಪ್ಪ ಕಂಬಳಿಯವರ ವಿರುದ್ದ ಧಾರವಾಡಕ್ಕೆ ಬಂದು ಬಾಷಣ ಮಾಡಿದವರೂ ‘ಜವಹರಲಾಲ ನೆಹರು’ ಮತ್ತು ‘ಸರದಾರ ವಲ್ಲಭಭಾಯಿ ಪಟೇಲ್’ ಅವರು. ಆದರೆ ಫಲಿತಾಂಶ ಮಾತ್ರ ಸರ ಸಿದ್ದಪ್ಪ ಕಂಬಳಿಯವರ ಗೆಲುವುದ್ದಾಗಿತ್ತು. ಜವಾಹರ ಲಾಲ್ ನೆಹರು ಸರ್ದಾರ್ ವಲ್ಲಭಭಾಯ್ ಪಟೇಲ್ ಸಹ ಸಿದ್ದಪ್ಪ ಕಂಬಳಿಯವರ ಮುಂದೆ ಸೋತು ಹೋದರು.

ಅದೇ ರೀತಿ ಬೆಳಗಾವಿಯ ಲಿಂಗರಾಜ ಕಾಲೇಜ್‌ಗೆ ಅನುಮತಿ ನಿಡಲು ಪುಣಾ ವಿಶ್ವವಿದ್ಯಾಲಯ ದ ಸಿಂಡಿಕೇಟ್ ಮೀನ ಮೇಷ ಏಡಿಸಿದಾಗ ಮಡಿವಂತರ ಮೂಗು ಹಿಡಿದು ಲಿಂಗರಾಜ ಕಾಲೇಜ ಸ್ಥಾಪನೆಗೆ ಸಿಂಡಿಕೇಟ್ ಅನುಮತಿ ಕೊಡಿಸಿದರು ನಮ್ಮ ಸಿದ್ದಪ್ಪ ಕಂಬಳಿಯವರು. ಹಾಗೂ ಶಿಕ್ಷಣ ಮಂತ್ರಿಗಳಿದ್ದಾಗ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಗೆ ಮಂಜೂರಾತಿ ನೀಡಿ ಈ ಭಾಗದಲ್ಲಿ ಉನ್ನತ ಶಿಕ್ಷಣ ತೆಲೆ ಎತ್ತಿ ನಿಲ್ಲಿಸಲು ಕಾಣರಾದವರು ಸರ ಸಿದ್ದಪ್ಪ ಕಂಬಳಿಯವರು. ಇದರಿಂದ ಅಂದಿನಿಂದ ಇಂದಿನವರೆಗೂ ಲಕ್ಷಾಂತರ ಮಕ್ಕಳು ಪದವಿ ಉನ್ನತ ಪದವಿ ಪಡೆದು ದೊಡ್ಡ ಸಾಧನೆ ಮಾಡಿದ್ದಾರೆ. ದೊಡ್ಡ ಕವಿಗಳು ಶಿಕ್ಷಣ ಪಡೆದು ಜ್ಞಾನಪೀಠ ಪ್ರಶಸ್ತಿ ತಂದು ವಿಶ್ವವಿದ್ಯಾಲಯಕ್ಕೆ ಹೆಸರು ತಂದಿದ್ದಾರೆ. ಹಾಗೂ ಅಂಬೇಡ್ಕರ ಅವರು ತಮ್ಮ ಶಿಕ್ಷಣ ಪೂರೈಸಿದ ನಂತರ ಶಿಕ್ಷಣ ಮಂತ್ರಿಗಳಾಗಿದ್ದ ಸಿದ್ದಪ್ಪ ಕಂಬಳಿಯವರಿಗೆ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕ ಹುದ್ದೆಗೆ ಪ್ರಸ್ತಾಪಿಸಿದಾಗ ಸಿದ್ದಪ್ಪ ಕಂಬಳಿಯವರು ಪ್ರಾಧ್ಯಾಪಕ ಹುದ್ದೆಗೆ ಅವಕಾಶ ಒದಗಿಸಿ ಅಂಬೇಡ್ಕರ್ ಅವರ ಪ್ರತಿಭೆ, ಪಾಂಡಿತ್ಯ, ಜ್ಞಾನಕ್ಕೆ ಭೂಮಿಕೆಯನ್ನು ಒದಗಿಸಿಕೂಟ್ಟ ಭಾರತದ ಏಕೈಕ ವ್ಯಕ್ತಿ ನಮ್ಮ ಸಿದ್ದಪ್ಪ ಕಂಬಳಿಯವರು. ಪ್ರತ್ಯೇಕ ಗಾಂಧಿಜೀ ಮತ್ತು ಅಂಬೇಡ್ಕರ್ ಅವರ ಮಧ್ಯದ ಪ್ರಾತಿನಿಧ್ಯದ ಪ್ರಶ್ನೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದಾಗ ಅಂಬೇಡ್ಕರ ಅವರು ಹೆಜ್ಜೆ ಹಜ್ಜೆಗೂ ಸರ್ ಸಿದ್ದಪ್ಪ ಕಂಬಳಿಯವರೂಂದಿಗೆ ಸಮಾಲೋಚನೆ ಮಾಡಿ, ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಿ ಕೊಡುವಲ್ಲಿ ಜೊತೆಗೆ ಇದ್ದದ್ದ ಸರ್ ಸಿದ್ದಪ್ಪ ಕಂಬಳಿಯವರ ಐತಿಹಾಸಿಕ ವಿಷಯವಾಗಿದೆ.

ಈ ಎಲ್ಲಾ ಸಾಧನೆ, ಪ್ರೋತ್ಸಾಹ ಗಮನಿಸಿ 1930 ರಲ್ಲಿ ಸರ ಸಿದ್ದಪ್ಪ ಕಂಬಳಿಯವರಿಗೆ “ಜಸ್ಟಿಸ್ ಆಪ್ ಪೀಸ್” ಪ್ರಶಸ್ತಿಯನ್ನು ನೀಡಲಾಯಿತು. ಇದನ್ನು ಪಡೆದ ಮೊಟ್ಟ ಮೊದಲ ಕನ್ನಡಿಗರು ಆಗಿದ್ದಾರೆ ನಮ್ಮ ಸರ್ ಸಿದ್ದಪ್ಪ ಕಂಬಳಿಯವರು. 1939 ರಲ್ಲಿ ಬ್ರೀಟಿಷ ಸರಕಾರ ಸಹ ಇವರಿಗೆ ‘ಸರ್’ ಪ್ರಶಸ್ತಿ ನೀಡಿಗೌರವಿಸಿತು. ಸರದಾರ ವಲ್ಲಭಭಾಯಿ ಪಟೇಲ್ ಅವರು ಕಂಬಳಿಯವರ ಮುಂಗೈ ಹಿಡಿದು ತಮ್ಮ ಕಾಂಗ್ರೆಸ್ ಪಕ್ಷಕ್ಕೆ ಅಹ್ವಾನಿಸಿದರೂ ಸಹಿತ ತಮ್ಮ ಮಾತೃ ಪಕ್ಷಕೆ ನಿಷ್ಠೆ ತೋರಿಸಿದರು. ಮಹಾರಾಷ್ಟ್ರದಲ್ಲಿ ಜ್ಯೋತಿ ಬಾ ಪುಲೆಯವರು ಮತ್ತು ಮಾತೆ ಸಾವಿತ್ರಿ ಬಾ ಪುಲೆಯವರು ನಿರ್ವಹಿಸಿದಂತೆ ಕರ್ನಾಟಕ ದಲ್ಲಿ ಅವರ ಪಾತ್ರ ನಿರ್ವಹಿಸಿದವರು ಸರ ಸಿದ್ದಪ್ಪ ಕಂಬಳಿಯವರು ಮತ್ತು ಅವರ ಸಮಕಾಲಿನವರಾಗಿದ್ದಾರೆ

ಇದನ್ನೆಲ್ಲಾ ನಿಮಗೆ ಪರಿಚಯ ಮಾಡಲು ಇಂದಿನ ಕೊಳಕು ಭ್ರಷ್ಟ ರಾಜಕಾರಣಿಗಳು, ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಸರಳ ಸಜ್ಜನಿಕೆಯ ಮೇರು ವ್ಯಕ್ತಿತ್ವದ ರಾಜಕಾರಣಿಗಳ ನಮ್ಮಲ್ಲಿ ಇದ್ದು ಸಾಧನೆ ಮಾಡಿ ನಾಲ್ಕು ಜನರಿಗೆ ಉಪಯೋಗವಾಗುವಂತಹ ಕೆಲಸ ಮಾಡಿದ್ದಾರೆ. ಎಂಬುದು ತಿಳಿಸುವುದು ಅಗತ್ಯವಾಗಿದೆ. ಎಕೆಂದರೆ ಎಂತಹ ಕೆಟ್ಟ ಕೆಲಸ ಮಾಡಿದರೂ ಸಹ ನಮ್ಮ ರಾಜಕಾರಣಿಗಳು ಎಂದು ಜೈಕಾರ ಹಾಕುವ ಈಗಿನ ಯುವಕರು ಕಾರ್ಯಕರ್ತರು ಇಂತಹ ರಾಜಕಾರಣಿಗಳ ಬಗ್ಗೆ ತಿಳಿದುಕೊಂಡರೆ ಒಳ್ಳೆಯದು. ಇವರಂತೆ ನಾವು ಆಗದೇ ಇರಬಹುದು ಆದರೆ ಇವರಿಗೆ ಗೌರವ ಕೊಡುವ ವ್ಯಕ್ತಿಗಳಾಗಬಹುದು. ಆದ್ದರಿಂದ ಕಾರಣ ಸೆಪ್ಟೆಂಬರ್ 11ರಂದು ಈ ಮರೆಯಲಾಗದ ಮಹಾನುಭಾವರ ಜನ್ಮದಿನ. ಅವರ ಸಾಧನೆಯನ್ನು ಅವಲೋಕಿಸಲು ಇದೂಂದು ಒಳ್ಳೆಯ ಸುದಿನವಾಗಿದೆ.

ಬಸವ ಪುತ್ರಿ – ಬಿಂದು ಆರ್ ಡಿ ರಾಂಪುರ,
ಶಿಕ್ಷಕಿ ಹವ್ಯಾಸಿ, ಲೇಖಕಿ,
ದಾವಣಗೆರೆ ಜಿಲ್ಲೆ

Leave a Reply

Your email address will not be published. Required fields are marked *