ಮಗ ಸೊಸೆ ಮೇಲಿನ ಕೋಪಕ್ಕೆ ಕೋಟ್ಯಂತರ ರೂಪಾಯಿ ಆಸ್ತಿ ಸರ್ಕಾರಕ್ಕೆ ಬರೆದ ತಂದೆ!! ವೃದ್ಧನ ಪತ್ರದಲ್ಲೇನಿದೆ ಗೊತ್ತಾ? !
ವಯಸ್ಸಾದ ತಂದೆ ತಾಯಿಗಳು ಅಥವಾ ಅಜ್ಜ ಅಜ್ಜಿಯರನ್ನು ಅವರಿಗೆ ನೆಮ್ಮದಿ ನೀಡುವ ರೀತಿಯಲ್ಲಿ ಸಾಕಿ ಸಲಹುವುದು ಅವರನ್ನು ಅಷ್ಟೇ ಪ್ರೀತಿಯಿಂದ ಕಾಳಜಿಯಿಂದ ಸಾಕುವ ತಮ್ಮ ಮಕ್ಕಳ ಕರ್ತವ್ಯ ಆಗಿರುತ್ತದೆ. ವಯಸ್ಸಾದ ನಂತರ ಮಕ್ಕಳಿಂದ ನಿರ್ಲಕ್ಷಿಸಲ್ಪಟ್ಟು ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸುತ್ತಿರುವ ವೃದ್ಧರ ಸಂಖ್ಯೆ ನಮ್ಮಲ್ಲಿ ಕಡಿಮೆಯೇನಿಲ್ಲ. ಅದೇ ಕಾರಣಕ್ಕೆ ಅಲ್ಲವೇ ವೃದ್ಧಾಶ್ರಮಗಳು ದಿನೇ ದಿನೇ ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿರುವುದು.
ಇಂಥದ್ದೇ ಘಟನೆಯೊಂದರಲ್ಲಿ ಇಂದು ಹೇಗಾಗಿದೆ ನೋಡಿ. ತನ್ನನ್ನು ಕಡೆಗಣಿಸಿದ ಮಗ ಹಾಗೂ ಸೊಸೆಗೆ ಪಾಠ ಕಲಿಸಲು ವೃದ್ಧ ತಂದೆಯೊಬ್ಬ ತನ್ನ ಸಮಸ್ತ ಆಸ್ತಿಯನ್ನು ಸರ್ಕಾರಕ್ಕೆ ಬರೆದು ವೃದ್ಧಾಶ್ರಮ ನಿರ್ಮಿಸುವಂತೆ ಕೋರಿದ ವಿಚಿತ್ರ ಪ್ರಕರಣ ವರದಿಯಾಗಿದೆ. ಒಡಿಸ್ಸಾದ ಜಲ್ಪುರ ಜಿಲ್ಲೆಯಲ್ಲಿರುವ ಎಪ್ಪತ್ತೈದು ವರ್ಷದ ಮಾಜಿ ಪತ್ರಕರ್ತ ಖೇತ್ರಾ ಮೋಹನ್ ಮಿಶ್ರಾ ಇಂತಹದ್ದೊಂದು ಕೆಲಸದ ಮೂಲಕ ಅಚ್ಚರಿ ಮೂಡಿಸಿದ್ದು, ಇಡೀ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ಬರೆದು ವೃದ್ಧಾಶ್ರಮ ನಿರ್ಮಿಸಲು ತಿಳಿಸಿದ್ದಾರೆ. ಹೌದು ತಮ್ಮ ಮಗ ಮತ್ತು ಸೊಸೆ ಸರಿಯಾಗಿ ನೋಡಿಕೊಳ್ಳದ ಕಾರಣಕ್ಕೆ ಈ ನಿರ್ಧಾರ ಮಾಡಿರುವುದಾಗಿ ಕ್ಷೇತ್ರ ಮೋಹನ್ ಮಿಶ್ರ ತಿಳಿಸಿದ್ದು, ತಮ್ಮನ್ನು ಕೊಲೆ ಮಾಡಲು ಇಬ್ಬರೂ ಸಾಕಷ್ಟು ಬಾರಿ ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ. ಮತ್ತು ನನ್ನ ಉಯಿಲಿಗೆ ಸಹಿ ಮಾಡಿದ್ದೇನೆ ವೃದ್ಧಾಶ್ರಮದಲ್ಲಿ ನನ್ನ ಜೀವನ ಕಳೆಯುತ್ತೇನೆ. ನನ್ನ ಜಮೀನಿನಲ್ಲಿ ವೃದ್ಧಾಶ್ರಮ ನಿರ್ಮಿಸಿ ನನ್ನಂತಹ ಹಿರಿಯ ನಾಗರಿಕರಿಗೆ ಸರ್ಕಾರ ಸೂರು ನೀಡಲಿ ಎಂದು ಕೇಳಿದ್ದಾರೆ .
ಇನ್ನು ಮಿಶ್ರಾ ಅವರ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಮಿಶ್ರಾ ಅವರನ್ನು ವೃದ್ಧಾಶ್ರಮಕ್ಕೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಿದೆ. ಎಂದು ಜಲ್ಪುರ ಜಿಲ್ಲಾಧಿಕಾರಿ ರಂಜನ್ ಕೆ ದಾಸ್ ತಿಳಿಸಿದ್ದಾರೆ. ಇನ್ನು ಮಿಶ್ರಾ ಅವರನ್ನು ಚಂಡಿಖೋಲೆ ಬಳಿಯ ವೃದ್ಧಾಶ್ರಮವೊಂದರಲ್ಲಿ ಇರಿಸಲು ವ್ಯವಸ್ಥೆ ಮಾಡಿದ್ದೇವೆ. ಅವರ ಮರಣದ ನಂತರವೂ ಕುಟುಂಬದವರು ಅವರ ಅಂತ್ಯಕ್ರಿಯೆಗೆ ಬರುವುದಕ್ಕೆ ಅನುಮತಿ ನೀಡಬಾರದೆಂದು ನಮ್ಮ ಬಳಿ ಮನವಿ ಮಾಡಿಕೊಂಡಿದ್ದಾರೆ. ಮಿಶ್ರಾ ಅವರು ತಮ್ಮ ಭೂಮಿಯನ್ನು ಸರ್ಕಾರಕ್ಕೆ ದಾನ ಮಾಡಿದ್ದಾರೆ. ಜೊತೆಗೆ ಅಲ್ಲಿ ವೃದ್ಧಾಶ್ರಮ ಕಟ್ಟಬೇಕೆಂದು ಬಯಸಿದ್ದಾರೆ ಎಂದು ಅವರು ವಿವರಣೆ ನೀಡಿದ್ದಾರೆ .