ಮಂಡ್ಯ ಡಿ ಸಿ ಎತ್ತಂಗಡಿ

ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ತಾರತಮ್ಯ ಮಾಡಿ ಅಕ್ರಮ ಎಸಗಿದ್ದಾರೆ ಎಂದು ಮಂಡ್ಯ ಜಿಲ್ಲಾಧಿಕಾರಿ ವಿರುದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಚುನಾವಣಾ ಆಯೋಗ ಕ್ಕೆ ನೀಡಿದ್ದ ಸಕಾರಣ ಸಹಿತ ದೂರನ್ನು ಮನ್ನಿಸಿ ಅಲ್ಲಿನ ಜಿಲ್ಲಾಧಿಕಾರಿ ಆಗಿದ್ದ ಎನ್. ಮಂಜುಶ್ರೀ ಅವರನ್ನು ವರ್ಗಾವಣೆ ಮಾಡಲಾಗಿದೆ.

ಅವರ ಜಾಗಕ್ಕೆ ಡಾ. ಪಿ.ಸಿ. ಜಾಫರ್ ಅವರನ್ನು ನೇಮಿಸಿ ಆದೇಶಿಸಲಾಗಿದೆ.

ಮಾಂಜುಶ್ರೀ ಅವರಿಗೆ ಯಾವುದೇ ಸ್ಥಳ ತೋರಿಸಿಲ್ಲ.
ಈ ವರೆಗೆ ಜಾಫರ್ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದರು.

ಕೇಂದ್ರ ಚುನಾವಣಾ ಆಯೋಗವೇ ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಿದೆ.

ಇದರಿಂದ ಸುಮಲತಾ ಅವರಿಗೆ ನೈತಿಕ ಜಯ ಲಭಿಸಿದೆ.

ನಿಖಲ್ ಕುಮಾರಸ್ವಾಮಿ ಅವರು ಬೇರೆ ಬೇರೆ ದಿನಾಂಕಗಳಂದು ಸಲ್ಲಿಸಿದ ನಾಮಪತ್ರದಲ್ಲಿ ಒಂದೇ ದಿನಾಂಕ ನಮೂದಿಸಿರುವ ಆರೋಪ, ನಾಮಪತ್ರ ಸಲ್ಲಿಕೆ ಅವಧಿ ಮುಗಿದ ಬಳಿಕ ನಿಖಿಲ್ ನಾಮಪತ್ರ ಸರಿಪಡಿಸಲಾಗಿದೆ ಎಂಬ ಆರೋಪ,ನಾಮಪತ್ರ ಸಲ್ಲಿಕೆ ವೇಳೆ ಮಾಡಲಾಗಿರುವ ವಿಡಿಯೋ ನೀಡಲು ನಿರಾಕರಿಸಿದ್ದ ಆರೋಪ…ಹೀಗೇ ಮಂಡ್ಯ ಜಿಲ್ಲಾಧಿಕಾರಿ ವಿರುದ್ದ ಸುಮಲತಾ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Leave a Reply

Your email address will not be published. Required fields are marked *