ಮಂಡ್ಯದಲ್ಲಿ ಸುಮಲತಾ ಪರ ಕಾಂಗ್ರೆಸ್ ಕಾರ್ಯಕರ್ತರ ಅಬ್ಬರ

ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಲೋಕಸಭೆಗೆ ಸೀಟು ಹಂಚಿಕೆ ಹೊಂದಾಣಿಕೆಯ ನಡುವೆ ಮಂಡ್ಯ ಕ್ಷೇತ್ರ ಮಾತ್ರ ಉಭಯ ಪಕ್ಷಗಳ ನಾಯಕರಿಗೂ ತೀವ್ರ ತಲೆನೋವಾಗಿದೆ.

ಕಾಂಗ್ರೆಸ್ ಕಾರ್ಯಕರ್ತರ ಮನವೊಲಿಸಲು ಮತ್ತು ಮಂಡ್ಯ ಕಾಂಗ್ರೆಸ್ ನಾಯಕರುಗಳನ್ನು ಸಮಾಧಾನ ಪಡಿಸಲು ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಕೆಲ ನಾಯಕರುಗಳಿಗೆ ಜವಾಬ್ದಾರಿ ನೀಡಿತ್ತು. ಈಗ ಅವರುಗಳ ಮಾತಿಗೆ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರಾಗಲಿ ಅಥವಾ ಸ್ಥಳೀಯ ನಾಯಕರುಗಳಾಗಲಿ ಸೊಪ್ಪು ಹಾಕುತ್ತಿಲ್ಲ.

ಒಂದು ವೇಳೆ ಜೆಡಿಎಸ್ಗೆ ಸಹಕಾರ ನೀಡದಿದ್ದರೆ ಅಥವಾ ಜೆಡಿಎಸ್ ಅಭ್ಯರ್ಥಿಯ ನಿಲುವಿಗೆ ಶ್ರಮಿಸದಿದ್ದರೆ ನಿಮ್ಮನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡುವುದಾಗಿ ಬೆದರಿಕೆ ಹಾಕಿದರೂ ಸಹ ಬಗ್ಗುತ್ತಿಲ್ಲ. ಬದಲಿಗೆ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಸುಮಲತಾ ಪರ ಪ್ರಚಾರಕ್ಕೆ ಮುಂದಾಗಿದ್ದಾರೆ. ಮಂಡ್ಯದಲ್ಲಿನ ಈ ಪರಿಸ್ಥಿತಿ ದೇವೇಗೌಡರ ಮೊಮ್ಮಗನ ರಾಜಕೀಯ ಭವಿಷ್ಯದ ಅಡಿಪಾಯವನ್ನು ಅಲುಗಾಡಿಸುತ್ತಿದೆ.

ಸ್ಪರ್ಧೆ ಖಚಿತ: ಸುಮಲತಾ

ಈ ನಡುವೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸುಮಲತಾ ಅಂಬರೀಶ್ ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಕಾಂಗ್ರೆಸ್ ಪಕ್ಷದಿಂದ ಇನ್ನು ಟಿಕೆಟ್ ನಿರೀಕ್ಷಿಸಿದ್ದೇನೆ. ಸಿಗದಿದ್ದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ .

Leave a Reply

Your email address will not be published. Required fields are marked *