ಮಂಡ್ಯದಲ್ಲಿ ಸುಮಲತರಿಗೆ “ಊತ್ತಿರುವ ಕಹಳೆ”ಚಿಹ್ನೆ

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿರುವ ಸಮ್ಮತ ಹರೀಶ್ ಅವರು ಜೆಡಿಎಸ್ಗೆ ಸೆಡ್ಡು ಹೊಡೆದು ಚಿಹ್ನೆ ಆಯ್ಕೆಗೆ ಮುಂದಾಗಿದ್ದರು. ಆದರೆ ಅದೃಷ್ಟ ಕೈ ಕೊಟ್ಟಿದ್ದು ತಾವು ಕೇಳಿದ ಚಿಹ್ನೆ ಬದಲಿಗೆ ಬೇರೆ ಚಿಹ್ನೆ ಸಿಕ್ಕಿದೆ .

ಚುನಾವಣಾ ಆಯೋಗ ಸುಮಲತಾ ಅವರಿಗೆ ತಳ್ಳುವ ಗಾಡಿ ಬದಲಿಗೆ ಕಹಳೆ ಊದುತ್ತಿರುವ ವ್ಯಕ್ತಿಯನ್ನು ಚಿಹ್ನೆಯನ್ನಾಗಿ ನೀಡಿದೆ. ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಂತಿಮವಾಗಿ ಚಿಹ್ನೆ ನಿಗದಿ ಮಾಡಲಾಗಿದೆ .

ಸುಮಲತಾ ಚುನಾವಣಾ ಏಜೆಂಟ್ ಮದನ್ ಸಮ್ಮುಖದಲ್ಲಿ ಚಿಹ್ನೆ ನಿಗದಿ ಮಾಡಲಾಯಿತು. ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚಿಹ್ನೆ ಅಂತಿಮಗೊಳಿಸಲಾಗಿದೆ .

ಸುಮಲತಾ ಅವರು ರೈತರಿಗೆ ಸಂಬಂದಿಸಿದ ಚಿಹ್ನೆಗಳನ್ನು ಕೇಳಿದ್ದರು.ಜೋಡೆತ್ತಿನ ಗಾಡಿ.ಹುಲ್ಲು ಕೀಳುತ್ತಿರುವ ಮಹಿಳೆ.ಬೆಳೆಗಳ ಕಟಾವು.ದವಸ ಧಾನ್ಯ ಸ್ವಚ್ಛ ಗೊಳಿಸುತ್ತಿರುವ ಮಹಿಳೆ ಚಿತ್ರ…ಹೀಗೆ.ಆದರೆ ಅಂತಿಮವಾಗಿ ಅವರಿಗೆ ವ್ಯಕ್ತಿ ಕಹಳೆ ಯೂದುತ್ತಿರುವ ಚಿನ್ಹೆ ಲಭಿಸಿದ್ದು ಇದರಿಂದ ಅಭಿಮಾನಿಗಳು ಇದು ವಿಜಯದ ಕಹಳೆ ಎಂದು ಹೆಮ್ಮೆ ಪಡುತ್ತಿದ್ದಾರೆ.

Leave a Reply

Your email address will not be published. Required fields are marked *